RISHABH PANT “ಪಂತ್ ಇಲ್ಲದ ಟೀಂ ಇಂಡಿಯಾ ಊಹಿಸಲು ಅಸಾಧ್ಯ”
ಲಂಡನ್ : ಟೀಂ ಇಂಡಿಯಾದ ಯಂಗ್ ಗನ್ ರಿಷಬ್ ಪಂತ್ ಸದ್ಯ ಕೊಹ್ಲಿ ಗ್ಯಾಂಗ್ ನ ಅಪತ್ಭಾಂದವ..! ಮೂರು ಮಾದರಿ ಕ್ರಿಕೆಟ್ ನಲ್ಲೂ ಪಂತ್ ತಂಡಕ್ಕೆ ಆಸರೆ ಆಗುತ್ತಿದ್ದಾರೆ.
ತಮ್ಮ ಡೋಂಟ್ ಕೇರ್ ಆಟದಿಂದ ಎದುರಾಳಿ ತಂಡಕ್ಕೆ ಸೋಲುಣಿಸುತ್ತಿದ್ದಾರೆ.
ಕಳೆದ ಆಸ್ಟ್ರೇಲಿಯಾ ಟೂರ್ನಿಯಿಂದ ನಿನ್ನೆ ಮುಕ್ತಾಯಗೊಂಡ ಇಂಗ್ಲೆಂಡ್ ನಡುವಿನ ಅಂತಿಮ ಏಕದಿನ ಪಂದ್ಯದವರೆಗೂ ಪಂತ್ ದರ್ಬಾರು ನಡೆಯುತ್ತಲೇ ಇದೆ.
ಈ ಮಧ್ಯೆ ರಿಷಭ್ ಪಂತ್ ಒಬ್ಬ ‘ಅಪರೂಪದ ಪ್ರತಿಭೆ’ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಇಯಾನ್ ಬೆಲ್ ಪಂತ್ ರ ಗುಣಗಾನ ಮಾಡಿದ್ದಾರೆ.
ಅಲ್ಲದೆ ಆತನಿಲ್ಲದ ಭಾರತ ತಂಡವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
“ಈ ಕ್ಷಣಗಳಲ್ಲಿ ಪಂತ್ ರೀತಿ ಆಡಿದವರನ್ನು ನೋಡಿದ್ದು ಅಪರೂಪ. ಇದು ಅವರ ಯಶಸ್ವಿ ವೃತ್ತಿಜೀವನದ ಆರಂಭ.
ಆತನದು ನಂಬಲಸಾಧ್ಯವಾದ ಆಟ, ನಿಜವಾದ ಮ್ಯಾಚ್ ವಿನ್ನರ್” ಎಂದು ಬೆಲ್ ಪಂತ್ ರ ಗುಣಗಾನ ಮಾಡಿದ್ದಾರೆ.
#RISHABH PANT