Rishabh Pant : ಪಂದ್ಯ ಸೋತರೂ ಪಂತ್ ಅಪರೂಪದ ದಾಖಲೆ
ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ ಮೂಲಕ ರಿಷಬ್ ಪಂತ್ ಟೀಂ ಇಂಡಿಯಾದ ನಾಯಕರಾಗಿದ್ದು ಗೊತ್ತೇ ಇದೆ.
ನಮಗೆಲ್ಲರಿಗೂ ಗೊತ್ತಿರುವಂತೆ ಸೌತ್ ಆಫ್ರಿಕಾ ಸರಣಿಗೆ ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾದ ನಾಯಕರಾಗಿದ್ದರು. ಆದ್ರೆ ಪ್ರಾಕ್ಟೀಸ್ ವೇಳೆ ಅವರು ಗಾಯಗೊಂಡರು.
ವೈದ್ಯರ ಸಲಹೆ ಮತ್ತು ಮುಂದಿನ ಇಂಗ್ಲೆಂಡ್ ಪ್ರವಾಸವನ್ನು ದೃಷ್ಠಿಯಲ್ಲಿಟ್ಟುಕೊಂಡು ರಾಹುಲ್ ಅವರು ಆಫ್ರಿಕಾ ಪ್ರವಾಸದಿಂದ ಹೊರಗುಳಿದರು.
ಇದರೊಂದಿಗೆ ವೈಸ್ ಕ್ಯಾಪ್ಟನ್ ಆಗಿದ್ದ ರಿಷಬ್ ಪಂತ್ ಗೆ ಟೀಂ ಇಂಡಿಯಾದ ಸಾರಥ್ಯ ವಹಿಸಲಾಯಿತು. ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಆದರು.
ಕ್ಯಾಪ್ಟನ್ ಆದ ಬಗ್ಗೆ ರಿಷಬ್ ಪಂತ್ ಪಂದ್ಯಕ್ಕೂ ಖುಷಿ ವ್ಯಕ್ತಪಡಿಸಿದ್ದರು. ಆದ್ರೆ ಆ ಖುಷಿ ಪಂದ್ಯದ ಬಳಿಕ ಮಾಯವಾಗಿದೆ. ಪಂತ್ ನಾಯಕರಾಗಿ ತಂಡವನ್ನು ಮುನ್ನಡೆಸಿದ ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾ ಸೋಲು ಕಂಡಿದೆ. ಇದು ಸಾಮಾನ್ಯವಾಗಿಯೇ ಪಂತ್ ಗೆ ನಿರಾಸೆಯನ್ನುಂಟು ಮಾಡಿದೆ.
ಆದ್ರೆ ಪಂದ್ಯ ಸೋತರು ಟೀಂ ಇಂಡಿಯಾದ ನಾಯಕರಾಗಿ ರಿಷಬ್ ಪಂತ್ ಅಪರೂಪದ ದಾಖಲೆ ಬರೆದಿದ್ದಾರೆ.
ಅತ್ಯಂತ ಸಣ್ಣ ವಯಸ್ಸಿನಲ್ಲಿ ಟೀಂ ಇಂಡಿಯಾದ ಟಿ 20 ನಾಯಕರಾದ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅಂದರೇ ಪಂತ್ 24 ವರ್ಷ 248 ದಿನಗಳ ವಯಸ್ಸಿನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.
ಇದಕ್ಕೂ ಮೊದಲು ಸುರೇಶ್ ರೈನಾ ಅತಿ ಸಣ್ಣ ವಯಸ್ಸಿನಲ್ಲಿ ಟೀಂ ಇಂಡಿಯಾದ ಟಿ 20 ನಾಯಕರಾಗಿದ್ದರು. ರೈನಾ 23 ವರ್ಷದಲ್ಲಿ ಭಾರತ ಟಿ 20 ತಂಡದ ನಾಯಕರಾಗಿದ್ದರು.

ಇನ್ನು ಮಹೇಂದ್ರ ಸಿಂಗ್ ಧೋನಿ 26 ವರ್ಷ ವಯಸ್ಸಿನಲ್ಲಿ ತಂಡವನ್ನು ಮುನ್ನಡಸಿದ್ದರೇ ರಹಾನೆ 27ಕ್ಕೇ ಟೀಂ ಇಂಡಿಯಾದ ಸಾರಥ್ಯವಹಿಸಿದ್ದರು.
ಇನ್ನು ದೆಹಲಿಯಲ್ಲಿ ನಡೆದ ಮೊದಲ ಟಿ 20 ಪಂದ್ಯದ ವಿಚಾರಕ್ಕೆ ಬಂದರೇ ಮೊದಲ ಪಂದ್ಯದಲ್ಲಿಯೇ ಭಾರತ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿ ಪಂದ್ಯದಲ್ಲಿ ಸೋಲು ಕಂಡಿದೆ. ಐದು ಪಂದ್ಯಗಳ ಟಿ 20 ಸರಣಿಯ ಭಾಗವಾಗಿ ದಕ್ಷಿಣ ಆಫ್ರಿಕಾ ಭಾರತದ ಪ್ರವಾಸಕ್ಕೆ ಬಂದಿದೆ.
ಅದರ ಅಂಗವಾಗಿ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಗುರುವಾರ ಮೊದಲ ಟಿ 20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಇಶಾನ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 211 ರನ್ ಕಲೆಹಾಕಿತ್ತು.
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಆರಂಭಿಕ ಆಘಾತ ಅನುಭವಿಸಿದ್ರೂ ನಾಲ್ಕನೇ ವಿಕೆಟ್ ಗೆ ಡೇವಿಡ್ ಮಿಲ್ಲರ್, ಡೆರ್ ಡು ಸನ್ ಜೋಡಿ ಭಾರತೀಯ ಬೌಲರ್ ಗಳ ಬೆಂಡೆತ್ತಿದ್ರು.
ಪರಿಣಾಮ 19.1 ಓವರ್ ಗಳಲ್ಲಿ 212 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತ ತಂಡ 1-0 ಅಂತರದಲ್ಲಿ ಹಿನ್ನಡೆಯಲ್ಲಿದೆ.