ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಪರ ರಿಷಬ್ ಪಂತ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಹೊಡಿಬಡಿ ಆಟದ ಜೊತೆಗೆ ಗಲ್ಲಿ ಕ್ರಿಕೆಟ್ ಆಟವನ್ನು ನೆನಪಿಸುವ ರಿಷಬ್ ಪಂತ್ ಜೀನಿಯಸ್ ಬ್ಯಾಟರ್ ಎಂಬುದರಲ್ಲಿ ಎರಡು ಮಾತಿಲ್ಲ. ಮೇಲ್ನೋಟಕ್ಕೆ ರಿಷಬ್ ಪಂತ್ ಬ್ಯಾಟಿಂಗ್ ಅನ್ನು ನೋಡುವಾಗ ಯಾವಾಗ ಔಟ್ ಆಗ್ತಾರೆ ಅನ್ನೋ ಆತಂಕವಂತೂ ಇದ್ದೇ ಇದೆ. ಯಾಕಂದ್ರೆ ಪಂತ್ ಅವರ ಬ್ಯಾಟಿಂಗ್ ಅನ್ನು ಶೈಲಿಯನ್ನು ಬೌಲರ್‍ಗಳಿಗೆ ಅರ್ಥಮಾಡಿಕೊಳ್ಳುವುದು ಕೂಡ ಅಷ್ಟೇ ಕಷ್ಟ. ಯಾವಾಗ ರಕ್ಷಣಾತ್ಮಕವಾಗಿ ಆಡ್ತಾರೆ.. ಯಾವಾಗ ಆಕ್ರಮಣಕಾರಿಯಾಗಿ ಆಡ್ತಾರೆ ಎಂಬುದು ಪಂತ್‍ಗೆ ಮಾತ್ರ ಗೊತ್ತು. ಯಾಕಂದ್ರೆ ರಿಷಬ್ ಪಂತ್‍ಗೆ ತನ್ನ ಬ್ಯಾಟಿಂಗ್ ಮೇಲೆ ನಂಬಿಕೆ ಇದೆ. ಅದೇ ಪಂತ್ ಅವರ ಸ್ಪೆಷಾಲಿಟಿ.
ಯಾರು ಎಷ್ಟೇ ಟೀಕೆ ಮಾಡಲಿ.. ಎಷ್ಟೇ ಸಲಹೆ, ಮಾರ್ಗದರ್ಶನವನ್ನು ನೀಡಲಿ.. ಅಥವಾ ಮೂರ್ಖ ಅಂತ ಜರೆದ್ರೂ ಪಂತ್ ಮಾತ್ರ ಬ್ಯಾಟಿಂಗ್ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಏನಿದ್ರೂ ನೆಟ್ಸ್‍ನಲ್ಲಿ ತಾನು ಹೊಡೆಯುವ ಪ್ರತಿ ಹೊಡೆತಗಳನ್ನು ಸತತವಾಗಿ ಅಭ್ಯಾಸ ಮಾಡ್ತಾರೆ. ಎದುರಾಳಿ ಬೌಲರ್‍ಗಳ ಪ್ಲ್ಯಾನ್‍ಗಳನ್ನು ಉಲ್ಟಾಪಲ್ಟಾ ಮಾಡುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಳ್ಳುತ್ತಾರೆ. ಇದು ರಿಷಬ್ ಪಂತ್ ಅವರ ಸ್ಟ್ರೇಂತ್.
ಹಾಗೇ ನೋಡಿದ್ರೆ ರಿಷಬ್ ಪಂತ್ ಟೀಮ್ ಇಂಡಿಯಾದ ನಾಯಕನಾಗಬೇಕಿತ್ತು. ಆದ್ರೆ ಅದೃಷ್ಟ ಕೈ ಹಿಡಿಯಲಿಲ್ಲ. ಕೆಟ್ಟ ಫಾರ್ಮ್ ಸ್ವಲ್ಪ ಹಿನ್ನಡೆಯನ್ನುಂಟು ಮಾಡಿದ್ರೆ, ಭಯಾನಕ ಕಾರು ಅಪಘಾತ ಅವರ ಕ್ರಿಕೆಟ್ ಬದುಕಿಗೆ ದೊಡ್ಡ ಹೊಡೆತವನ್ನೇ ನೀಡಿತ್ತು. ಸಾವು ಬದುಕಿನ ಹೋರಾಟವನ್ನು ಗೆದ್ದು ಮತ್ತೆ ತಂಡವನ್ನು ಸೇರಿಕೊಂಡಿರುವುದು ಒಂದು ಪವಾಡವೇ ಸರಿ.
ಇನ್ನು ರಿಷಬ್ ಪಂತ್ ತಂಡದಲ್ಲಿದ್ರೆ ಅಲ್ಲಿ ಹಾಸ್ಯಕ್ಕೆ ಏನು ಕೊರತೆ ಇರಲ್ಲ. ವಿಕೆಟ್ ಹಿಂದುಗಡೆ ನಿಂತುಕೊಂಡು ಸದಾ ಮಾತನಾಡುತ್ತಲೇ ಆಟಗಾರರನ್ನು ಹುರಿದುಂಬಿಸ್ತಾ ಇರುತ್ತಾರೆ. ಹಾಗೇ ಪಂದ್ಯದ ಗತಿಯನ್ನು ಅರಿತುಕೊಳ್ಳುವ ಕಲೆ ಇದೆ. ಬೌಲರ್‍ಗಳನ್ನು ಬಳಸಿಕೊಳ್ಳುವ ತಂತ್ರಗಾರಿಕೆಯೂ ಇದೆ. ಫೀಲ್ಡಿಂಗ್ ಸೆಟ್ ಮಾಡುವ ಚಾಕಚಕ್ಯತೆಯೂ ಇದೆ. ಹೀಗಾಗಿಯೇ ಹಲವು ಬಾರಿ ತನ್ನ ಜಾಣ್ಮೆಯಿಂದಲೇ ಟೀಮ್ ಇಂಡಿಯಾಗೆ ಗೆಲುವನ್ನು ತಂದುಕೊಟ್ಟಿರುವುದಕ್ಕೆ ಹಲವು ನಿದರ್ಶನಗಳೂ ಇವೆ.
ಈ ನಡುವೆ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಭಾರತದ ಪರ ಹೊಸ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಸಿಕ್ಸರ್ ಹೊಡೆದ ದಾಖಲೆಯನ್ನು ಪಂತ್ ಅಧಿಕಾರಯುತವಾಗಿ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ ಸೆಹ್ವಾಗ್ 90 ಸಿಕ್ಸರ್‍ಗಳನ್ನು ಬಾರಿಸಿ ಭಾರತದ ಪರ ಗರಿಷ್ಠ ಸಿಕ್ಸರ್ ಹೊಡೆದ ದಾಖಲೆಯನ್ನು ಬರೆದಿದ್ದರು.
ಸದ್ಯ 92 ಸಿಕ್ಸರ್‍ಗಳನ್ನು ಹೊಡೆದಿರುವ ಪಂತ್‍ಗೆ ವಿಶ್ವ ಟೆಸ್ಟ್ ಕ್ರಿಕೆಟ್‍ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆಯನ್ನು ಮುರಿಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಯಾಕಂದ್ರೆ ಈ ದಾಖಲೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ ಹೆಸರಿನಲ್ಲಿದೆ. 115 ಪಂದ್ಯಗಳಲ್ಲಿ ಬೆನ್ ಸ್ಟೋಕ್ಸ್ 136 ಸಿಕ್ಸರ್‍ಗಳನ್ನು ಬಾರಿಸಿದ್ದಾರೆ. ಅಲ್ಲದೆ ಸ್ಟೋಕ್ಸ್ ಇನ್ನೂ ಕೂಡ ಆಡ್ತಾ ಇದ್ದಾರೆ. ಹೀಗಾಗಿ ಪಂತ್ ಈ ದಾಖಲೆಯನ್ನು ಮುರಿಯಬೇಕಾದ್ರೆ ಸ್ಥಿರ ಪ್ರದರ್ಶನವನ್ನು ನೀಡಲೇಬೇಕು.
ಇನ್ನುಳಿದಂತೆ ನ್ಯೂಜಿಲೆಂಡ್‍ನ ಬ್ರೆಂಡನ್ ಮೆಕಲಂ 107, ಆಸ್ಟ್ರೇಲಿಯಾದ ಗಿಲ್‍ಕ್ರಿಸ್ಟ್ 100, ನ್ಯೂಜಿಲೆಂಡ್‍ನ ಟೀಮ್ ಸೌಥಿ 98, ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ 98, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಅವರ ದಾಖಲೆಗಳು ಸದ್ಯದಲ್ಲೇ ಪಂತ್ ಅಳಿಸಿ ಹಾಕಲಿದ್ದಾರೆ.
ಒಟ್ಟಿನಲ್ಲಿ ಭಾರತದ ಟೆಸ್ಟ್ ಕ್ರಿಕೆಟ್‍ನ ಸಿಕ್ಸರ್ ಕಿಂಗ್ ಆಗಿ ರಿಷಬ್ ಪಂತ್ ಹೊರಹೊಮ್ಮಿದ್ದಾರೆ. ಮುಂದೊಂದು ದಿನ ವಿಶ್ವ ಟೆಸ್ಟ್ ಕ್ರಿಕೆಟ್‍ನ ಸಿಕ್ಸರ್ ಕಿಂಗ್ ಆಗ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಕೈಜಾರಿದ ಕ್ಯಾಚ್, ಕೈಕೊಟ್ಟ ಮ್ಯಾಚ್! ಜೈಸ್ವಾಲ್ ಎಡವಟ್ಟು, ಭಾರತಕ್ಕೆ ಸೋಲಿನ ಪೆಟ್ಟು
ರಾಯ್‌ಪುರ: ಕ್ರಿಕೆಟ್ ಜಗತ್ತಿನಲ್ಲಿ ಒಂದು ಮಾತಿದೆ, ಕ್ಯಾಚ್ ಡ್ರಾಪ್ ಆದರೆ ಮ್ಯಾಚ್ ಡ್ರಾಪ್ ಎಂದು. ರಾಯ್‌ಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಈ...








