Rishab pant – ಇದು ಸಾವಿನ ಬಾಗಿಲು ಬಡಿದು..ವಾಪಸ್ ಬಂದವನ ನೈಜ ಕಥೆ..!
ಆತ ಬದುಕಿ ಬಂದಿದ್ದೇ ಪವಾಡ..! ಯಾಕಂದ್ರೆ ಅದು ಅಂತಿಂಥ ಅಪಘಾತವಲ್ಲ. ರಣ ಭೀಕರ ಅಫಘಾತ. ಮೀತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ, ನಾಲ್ಕೈದು ಬಾರಿ ಪಲ್ಟಿಯಾಗಿ ಕಾರಿನಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಆ ಕ್ಷಣವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಆ ಘಟನೆಯನ್ನು ನೆನಪಿಸಿಕೊಂಡಾಗ ಒಂದು ಘಳಿಗೆ ಮೈ ಝುಂ ಅನ್ನಿಸುತ್ತದೆ. ಅಂತಹುದರಲ್ಲಿ ಆ ಕಾರಿನಲ್ಲಿದ್ದ 25ರ ತರುಣನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ
ಆದ್ರೆ ಆ ತರುಣ ವಿಚಲಿತನಾಗಲಿಲ್ಲ. ಸಾವನ್ನು ಕಣ್ಣಾರೆ ಕಂಡ್ರೂ ಒಂಚೂರು ಧೈರ್ಯ ಕಳೆದುಕೊಳ್ಳಲಿಲ್ಲ. ಕೈಗಳಿಗೆ ಬ¯ವಾದ ಏಟು… ಮೊಣಕಾಲು ಮುರಿದು ಹೋಗಿತ್ತು. .ಮೈಮೇಲೆ ರಕ್ತ ಸುರಿಯುತ್ತಿತ್ತು. ದೇಹ ಪೂರ್ತಿ ಸುಟ್ಟ ಗಾಯ. ನಡೆಯುವುದು ಅಸಾಧ್ಯ ಅಂತ ಗೊತ್ತಿತ್ತು. ಜೀವ ಉಳಿಸಿಕೊಳ್ಳಬೇಕಾದ್ರೆ ಬೆಂಕಿಗೆ ಆಹುತಿಯಾಗಿದ್ದ ಕಾರಿನಿಂದ ಹೊರಬರಲೇಬೇಕಿತ್ತು. ನರಕಯಾತನೆಯ ನೋವನ್ನು ಮರೆತು ಹೊರಬರುವ ಪ್ರಯತ್ನ ನಡೆಸುತ್ತಿದ್ದಾಗಲೇ ಸ್ಥಳಿಯ ಜನರು ಆತನನ್ನು ರಕ್ಷಣೆ ಮಾಡಿದ್ರು. ಒಂದು ಕ್ಷಣ ತೆವಲುತ್ತಾ ಬಂದು ನಡು ರಸ್ತೆಯಲ್ಲಿ ಕಷ್ಟಪಟ್ಟು ಕುಳಿತುಕೊಂಡು ಬೆಂಕಿಯಲ್ಲಿ ಉರಿಯುತ್ತಿದ್ದ ಕಾರನ್ನು ದಿಟ್ಟಿಸಿನೋಡುತ್ತಿದ್ದ. ನಾನು ಹೇಗೆ ಬದುಕಿ ಬಂದೆ ಎಂಬ ಪ್ರಶ್ನೆ ಆತನನ್ನು ಈಗಲೂ ಕಾಡುತ್ತಿರಬಹುದು.
ಆ ಕ್ಷಣ ಆತನಿಗೆ ಜೀವ ಉಳಿದ್ರೆ ಸಾಕು ಎಂದು ಅನ್ನಿಸಿರಬಹುದು. ಆದ್ರೆ ಕೈ ಕಾಲು ಮುರಿದು ಹೋಗಿದೆ ಎಂಬುದು ಗೊತ್ತಾದಾಗ ತನ್ನ ಬದುಕಿನ ಕನಸುಗಳು ಭಗ್ನವಾಯ್ತಲ್ಲ ಅಂತ ನೋವಿನ ವೇದನೆಯಲ್ಲೂ ಕಣ್ಣೀರು ಸುರಿಸುತ್ತಿದ್ದ. ಆತನ ಅದೃಷ್ಟವೋ ಏನೋ…ಗೊತ್ತಿಲ್ಲ. ತಲೆಗೆ ಮತ್ತು ಬೆನ್ನಿಗೆ ಸುಟ್ಟು ಗಾಯಗಳನ್ನು ಬಿಟ್ಟು ಬೇರೆ ಯಾವುದೇ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ. ಆತನಿಗೆ ಅಷ್ಟೇ ಸಾಕಿತ್ತು. ತನ್ನ ಅಪ್ಪ – ಅಮ್ಮನ ಕನಸುಗಳನ್ನು ಸಾಕಾರಗೊಳಿಸಲು ಇದು ಕೂಡ ಸವಾಲು. ಈ ಸವಾಲನ್ನು ಗೆದ್ರೆ ತಾನು ಮತ್ತೆ ಮೊದಲಿನಂತೆ ಆಗುತ್ತೇನೆ ಅನ್ನೋ ಆತ್ಮವಿಶ್ವಾಸ ಆತನ ಮನಸ್ಸಿನಲ್ಲಿ ಮೂಡಿತ್ತು. ಮತ್ತೆ ಎಲ್ಲವೂ ಪವಾಡ..ಜೊತೆಗೆ ಬಿಸಿಸಿಐನ ಮನಿ ಪವರ್ ಹಾಗೂ ಆತನದಲ್ಲಿದ್ದ ಛಲಗಾರಿಕೆ ಮತ್ತು ಧೈರ್ಯ. ಇದೀಗ ಆತ ಮತ್ತೆ ಮೈದಾನದಲ್ಲಿ ಬ್ಯಾಟ್ ಹಿಡಿದು ಅಭ್ಯಾಸ ಮಾಡುತ್ತಿದ್ದಾನೆ. ಕೈಗೆ ಗ್ಲೌಸ್ ಹಾಕೊಂಡು ವಿಕೆಟ್ ಕೀಪಿಂಗ್ ಪ್ರಾಕ್ಟೀಸ್ ಮಾಡ್ತಾ ಇದ್ದಾನೆ.
ಹೌದು, ಆತನೇ ರಿಷಬ್ ಪಂತ್. ಟೀಮ್ ಇಂಡಿಯಾದ ಫಿಯರ್‍ಲೆಸ್ ಕ್ರಿಕೆಟಿಗ. ಯಮನನ್ನೇ ಗೆದ್ದ ಛಲದಂಕಮಲ್ಲ. ಕಳೆದ ಡಿಸೆಂಬರ್‍ನಲ್ಲಿ ಡೆಹರಡೂನ್ ಹೆದ್ದಾರಿಯಲ್ಲಿ ಅಫಘಾತಕ್ಕೀಡಾದಾಗ ರಿಷಬ್ ಪಂತ್‍ನ ಕ್ರಿಕೆಟ್ ಬದುಕು ಮುಗಿದು ಹೋಯ್ತು ಅಂತ ಎಲ್ಲರೂ ಭಾವಿಸಿದ್ರು. ಆದ್ರೆ ರಿಷಬ್ ಪಂತ್ ಈಗ ಮೊದಲಿನ ರಿಷಬ್ ಪಂತ್ ಆಗುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾನೆ.
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್‍ನ ಎಲ್ಲಾ ಚಿಕಿತ್ಸೆಗಳ ವೆಚ್ಚಗಳನ್ನು ನೋಡಿಕೊಂಡ ಬಿಸಿಸಿಐ, ರಿಷಬ್ ಪಂತ್‍ಗೆ ಮರು ಜೀವ ನೀಡಿದೆ. ಸದ್ಯ ಎನ್‍ಸಿಎನಲ್ಲಿ ಅಭ್ಯಾಸದಲ್ಲಿ ನಿರತವಾಗಿರೋ ಪಂತ್, ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಬರುವಂತಹ ಎಸೆತಗಳನ್ನು ಎದುರಿಸುತ್ತಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರೋ ಪಂತ್, ಸದ್ಯದಲ್ಲೇ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬಹುದು. ಆದ್ರೆ ಮುಂಬರುವ ವಿಶ್ವಕಪ್‍ನಲ್ಲಿ ಆಡೋದು ಅನುಮಾನವಾಗಿದೆ. ಫಿಟ್‍ನೆಸ್ ಪರೀಕ್ಷೆ, ಅಭ್ಯಾಸ ಪಂದ್ಯಗಳಲ್ಲಿ ಆಡಲು ಇನ್ನೂ ಕೆಲವು ಸಮಯ ಬೇಕಾಗಬಹುದು. ಹಾಗಾಗಿ ರಿಷಬ್ ಪಂತ್ ಮುಂದಿನ ವರ್ಷ ಫಿಟ್ ಆಂಡ್ ಫೈನ್ ಆಗಿ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬಹುದು.
ಏನೇ ಆದ್ರೂ ರಿಷಬ್ ಪಂತ್ ಅವರ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಿಕೊಳ್ಳಲೇಬೇಕು. ಮೈದಾನದಲ್ಲಿ ಆಕ್ರಮಣಕಾರಿ ಪ್ರವೃತ್ತಿಯ ಆಟದ ಮೂಲಕ ಗಮನ ಸೆಳೆದಿರುವ ಪಂತ್, ನಿಜ ಬದುಕಿನಲ್ಲೂ ಆಕ್ರಮಣಕಾರಿ ಪ್ರವೃತ್ತಿಯಿಂದಲೇ ಸಾವನ್ನೇ ಗೆದ್ದು ಬಂದಿರೋ ಮಹಾಧೀರ