ADVERTISEMENT
Thursday, November 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

Rishab pant – ಇದು ಸಾವಿನ ಬಾಗಿಲು ಬಡಿದು..ವಾಪಸ್ ಬಂದವನ ನೈಜ ಕಥೆ..!

admin by admin
August 7, 2023
in Sports, ಕ್ರಿಕೆಟ್, ಕ್ರೀಡೆ
ENG vs IND

eng-vs-ind-pant-becomes-third-indian-wicketkeeper-hit-odi-century-outside-asia saaksha tv

Share on FacebookShare on TwitterShare on WhatsappShare on Telegram

Rishab pant – ಇದು ಸಾವಿನ ಬಾಗಿಲು ಬಡಿದು..ವಾಪಸ್ ಬಂದವನ ನೈಜ ಕಥೆ..!

ಆತ ಬದುಕಿ ಬಂದಿದ್ದೇ ಪವಾಡ..! ಯಾಕಂದ್ರೆ ಅದು ಅಂತಿಂಥ ಅಪಘಾತವಲ್ಲ. ರಣ ಭೀಕರ ಅಫಘಾತ. ಮೀತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ, ನಾಲ್ಕೈದು ಬಾರಿ ಪಲ್ಟಿಯಾಗಿ ಕಾರಿನಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಆ ಕ್ಷಣವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಆ ಘಟನೆಯನ್ನು ನೆನಪಿಸಿಕೊಂಡಾಗ ಒಂದು ಘಳಿಗೆ ಮೈ ಝುಂ ಅನ್ನಿಸುತ್ತದೆ. ಅಂತಹುದರಲ್ಲಿ ಆ ಕಾರಿನಲ್ಲಿದ್ದ 25ರ ತರುಣನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ

Related posts

krish-gupta-national-rotax-karting-champion-india-world-finals-portugal

ಮುಂಬೈನ ಕೃಷ್ ಗುಪ್ತಾ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್

November 3, 2026
kieron-pollard-appointed-mumbai-indians-head-coach-2026

ಮುಂಬೈ ಇಂಡಿಯನ್ಸ್ಗೆ ಕೀರನ್ ಪೊಲಾರ್ಡ್ ನೂತನ ಮುಖ್ಯ ಕೋಚ್

October 27, 2026

ಆದ್ರೆ ಆ ತರುಣ ವಿಚಲಿತನಾಗಲಿಲ್ಲ. ಸಾವನ್ನು ಕಣ್ಣಾರೆ ಕಂಡ್ರೂ ಒಂಚೂರು ಧೈರ್ಯ ಕಳೆದುಕೊಳ್ಳಲಿಲ್ಲ. ಕೈಗಳಿಗೆ ಬ¯ವಾದ ಏಟು… ಮೊಣಕಾಲು ಮುರಿದು ಹೋಗಿತ್ತು. .ಮೈಮೇಲೆ ರಕ್ತ ಸುರಿಯುತ್ತಿತ್ತು. ದೇಹ ಪೂರ್ತಿ ಸುಟ್ಟ ಗಾಯ. ನಡೆಯುವುದು ಅಸಾಧ್ಯ ಅಂತ ಗೊತ್ತಿತ್ತು. ಜೀವ ಉಳಿಸಿಕೊಳ್ಳಬೇಕಾದ್ರೆ ಬೆಂಕಿಗೆ ಆಹುತಿಯಾಗಿದ್ದ ಕಾರಿನಿಂದ ಹೊರಬರಲೇಬೇಕಿತ್ತು. ನರಕಯಾತನೆಯ ನೋವನ್ನು ಮರೆತು ಹೊರಬರುವ ಪ್ರಯತ್ನ ನಡೆಸುತ್ತಿದ್ದಾಗಲೇ ಸ್ಥಳಿಯ ಜನರು ಆತನನ್ನು ರಕ್ಷಣೆ ಮಾಡಿದ್ರು. ಒಂದು ಕ್ಷಣ ತೆವಲುತ್ತಾ ಬಂದು ನಡು ರಸ್ತೆಯಲ್ಲಿ ಕಷ್ಟಪಟ್ಟು ಕುಳಿತುಕೊಂಡು ಬೆಂಕಿಯಲ್ಲಿ ಉರಿಯುತ್ತಿದ್ದ ಕಾರನ್ನು ದಿಟ್ಟಿಸಿನೋಡುತ್ತಿದ್ದ. ನಾನು ಹೇಗೆ ಬದುಕಿ ಬಂದೆ ಎಂಬ ಪ್ರಶ್ನೆ ಆತನನ್ನು ಈಗಲೂ ಕಾಡುತ್ತಿರಬಹುದು.

ಆ ಕ್ಷಣ ಆತನಿಗೆ ಜೀವ ಉಳಿದ್ರೆ ಸಾಕು ಎಂದು ಅನ್ನಿಸಿರಬಹುದು. ಆದ್ರೆ ಕೈ ಕಾಲು ಮುರಿದು ಹೋಗಿದೆ ಎಂಬುದು ಗೊತ್ತಾದಾಗ ತನ್ನ ಬದುಕಿನ ಕನಸುಗಳು ಭಗ್ನವಾಯ್ತಲ್ಲ ಅಂತ ನೋವಿನ ವೇದನೆಯಲ್ಲೂ ಕಣ್ಣೀರು ಸುರಿಸುತ್ತಿದ್ದ. ಆತನ ಅದೃಷ್ಟವೋ ಏನೋ…ಗೊತ್ತಿಲ್ಲ. ತಲೆಗೆ ಮತ್ತು ಬೆನ್ನಿಗೆ ಸುಟ್ಟು ಗಾಯಗಳನ್ನು ಬಿಟ್ಟು ಬೇರೆ ಯಾವುದೇ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ. ಆತನಿಗೆ ಅಷ್ಟೇ ಸಾಕಿತ್ತು. ತನ್ನ ಅಪ್ಪ – ಅಮ್ಮನ ಕನಸುಗಳನ್ನು ಸಾಕಾರಗೊಳಿಸಲು ಇದು ಕೂಡ ಸವಾಲು. ಈ ಸವಾಲನ್ನು ಗೆದ್ರೆ ತಾನು ಮತ್ತೆ ಮೊದಲಿನಂತೆ ಆಗುತ್ತೇನೆ ಅನ್ನೋ ಆತ್ಮವಿಶ್ವಾಸ ಆತನ ಮನಸ್ಸಿನಲ್ಲಿ ಮೂಡಿತ್ತು. ಮತ್ತೆ ಎಲ್ಲವೂ ಪವಾಡ..ಜೊತೆಗೆ ಬಿಸಿಸಿಐನ ಮನಿ ಪವರ್ ಹಾಗೂ ಆತನದಲ್ಲಿದ್ದ ಛಲಗಾರಿಕೆ ಮತ್ತು ಧೈರ್ಯ. ಇದೀಗ ಆತ ಮತ್ತೆ ಮೈದಾನದಲ್ಲಿ ಬ್ಯಾಟ್ ಹಿಡಿದು ಅಭ್ಯಾಸ ಮಾಡುತ್ತಿದ್ದಾನೆ. ಕೈಗೆ ಗ್ಲೌಸ್ ಹಾಕೊಂಡು ವಿಕೆಟ್ ಕೀಪಿಂಗ್ ಪ್ರಾಕ್ಟೀಸ್ ಮಾಡ್ತಾ ಇದ್ದಾನೆ.
ಹೌದು, ಆತನೇ ರಿಷಬ್ ಪಂತ್. ಟೀಮ್ ಇಂಡಿಯಾದ ಫಿಯರ್‍ಲೆಸ್ ಕ್ರಿಕೆಟಿಗ. ಯಮನನ್ನೇ ಗೆದ್ದ ಛಲದಂಕಮಲ್ಲ. ಕಳೆದ ಡಿಸೆಂಬರ್‍ನಲ್ಲಿ ಡೆಹರಡೂನ್ ಹೆದ್ದಾರಿಯಲ್ಲಿ ಅಫಘಾತಕ್ಕೀಡಾದಾಗ ರಿಷಬ್ ಪಂತ್‍ನ ಕ್ರಿಕೆಟ್ ಬದುಕು ಮುಗಿದು ಹೋಯ್ತು ಅಂತ ಎಲ್ಲರೂ ಭಾವಿಸಿದ್ರು. ಆದ್ರೆ ರಿಷಬ್ ಪಂತ್ ಈಗ ಮೊದಲಿನ ರಿಷಬ್ ಪಂತ್ ಆಗುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾನೆ.
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್‍ನ ಎಲ್ಲಾ ಚಿಕಿತ್ಸೆಗಳ ವೆಚ್ಚಗಳನ್ನು ನೋಡಿಕೊಂಡ ಬಿಸಿಸಿಐ, ರಿಷಬ್ ಪಂತ್‍ಗೆ ಮರು ಜೀವ ನೀಡಿದೆ. ಸದ್ಯ ಎನ್‍ಸಿಎನಲ್ಲಿ ಅಭ್ಯಾಸದಲ್ಲಿ ನಿರತವಾಗಿರೋ ಪಂತ್, ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಬರುವಂತಹ ಎಸೆತಗಳನ್ನು ಎದುರಿಸುತ್ತಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರೋ ಪಂತ್, ಸದ್ಯದಲ್ಲೇ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬಹುದು. ಆದ್ರೆ ಮುಂಬರುವ ವಿಶ್ವಕಪ್‍ನಲ್ಲಿ ಆಡೋದು ಅನುಮಾನವಾಗಿದೆ. ಫಿಟ್‍ನೆಸ್ ಪರೀಕ್ಷೆ, ಅಭ್ಯಾಸ ಪಂದ್ಯಗಳಲ್ಲಿ ಆಡಲು ಇನ್ನೂ ಕೆಲವು ಸಮಯ ಬೇಕಾಗಬಹುದು. ಹಾಗಾಗಿ ರಿಷಬ್ ಪಂತ್ ಮುಂದಿನ ವರ್ಷ ಫಿಟ್ ಆಂಡ್ ಫೈನ್ ಆಗಿ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬಹುದು.
ಏನೇ ಆದ್ರೂ ರಿಷಬ್ ಪಂತ್ ಅವರ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಿಕೊಳ್ಳಲೇಬೇಕು. ಮೈದಾನದಲ್ಲಿ ಆಕ್ರಮಣಕಾರಿ ಪ್ರವೃತ್ತಿಯ ಆಟದ ಮೂಲಕ ಗಮನ ಸೆಳೆದಿರುವ ಪಂತ್, ನಿಜ ಬದುಕಿನಲ್ಲೂ ಆಕ್ರಮಣಕಾರಿ ಪ್ರವೃತ್ತಿಯಿಂದಲೇ ಸಾವನ್ನೇ ಗೆದ್ದು ಬಂದಿರೋ ಮಹಾಧೀರ

Tags: #rishab pantbccibengaluruCricketDelhidelhi capitalsncateam india
ShareTweetSendShare
Join us on:

Related Posts

krish-gupta-national-rotax-karting-champion-india-world-finals-portugal

ಮುಂಬೈನ ಕೃಷ್ ಗುಪ್ತಾ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್

by admin
November 3, 2026
0

- ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ರೊಟಾಕ್ಸ್‌ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ - ಪೋರ್ಚುಗಲ್‌ನಲ್ಲಿ ನಡೆಯಲಿರುವ ವಿಶ್ವ ಫೈನಲ್ಸ್‌ಗೆ ಅರ್ಹತೆ ಪಡೆದ ಕೃಷ್‌ ಬೆಂಗಳೂರು: ರಾಯೋ ರೇಸಿಂಗ್‌ನ ಕೃಷ್ ಗುಪ್ತಾ...

kieron-pollard-appointed-mumbai-indians-head-coach-2026

ಮುಂಬೈ ಇಂಡಿಯನ್ಸ್ಗೆ ಕೀರನ್ ಪೊಲಾರ್ಡ್ ನೂತನ ಮುಖ್ಯ ಕೋಚ್

by admin
October 27, 2026
0

* ಆಟಗಾರನಿಂದ ಮುಖ್ಯ ತರಬೇತುದಾರನವರೆಗೆ: 16 ವರ್ಷಗಳ ಬಾಂಧವ್ಯಕ್ಕೆ ಹೊಸ ಅಧ್ಯಾಯ ಮುಂಬೈ, : ಕೀರನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನೂತನ ಮುಖ್ಯ ಕೋಚ್...

nike-mumbai-indians-multi-year-kit-partnership-2027

ನೈಕ್ ಮತ್ತು ಮುಂಬಯಿ ಇಂಡಿಯನ್ಸ್ ನಡುವೆ ಬಹು-ವರ್ಷಗಳ ಕಿಟ್ ಪಾಲುದಾರಿಕೆ ಘೋಷಣೆ!

by admin
October 26, 2026
0

ಮುಂಬಯಿ - ವಿಶ್ವ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬಯಿ ಇಂಡಿಯನ್ಸ್ ಮತ್ತು ಜಾಗತಿಕ ಕ್ರೀಡಾ ಪರಿಕರಗಳ ದಿಗ್ಗಜ ಸಂಸ್ಥೆಯಾದ ನೈಕ್ ಇಂದು ಬಹು-ವರ್ಷಗಳ...

mahela-jayawardene-steps-down-mumbai-indians-head-coach

ಮುಂಬೈ ಇಂಡಿಯನ್ಸ್‌ ಮುಖ್ಯ ಕೋಚ್ ಹುದ್ದೆ ತ್ಯಜಿಸಿದ ಮಹೇಲಾ ಜಯವರ್ಧನೆ

by admin
October 26, 2026
0

ಮುಂಬೈ, 2026 ಅಕ್ಟೋಬರ್ 17: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಮಹೇಲಾ ಜಯವರ್ಧನೆ ಅವರು ಕೆಳಗಿಳಿದಿದ್ದಾರೆ. ಇದರೊಂದಿಗೆ ಎಂಐ...

kppl-jersey-launch-bengaluru-pickleball-premier-league

*ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ (KPPL): ಜೆರ್ಸಿ ಅನಾವರಣ*

by admin
October 26, 2026
0

*ಬೆಂಗಳೂರು:* ಕರ್ನಾಟಕ ಸ್ಟೇಟ್ ಪಿಕಲ್‌ಬಾಲ್ ಅಸೋಸಿಯೇಷನ್ (KSPA) ಮತ್ತು ಎಂಟ್ರೋಪಿ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ (ESE) ಸಹಯೋಗದಲ್ಲಿ ನಡೆಯುತ್ತಿರುವ ಪ್ರಥಮ ಆವೃತ್ತಿಯ 'ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್'...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram