Rishabh Panth : 40 ದಿನಗಳ ಬಳಿಕ ನಡೆದಾಡುತ್ತಿರುವ ಪಂತ್ – ಕ್ರಿಕೆಟಿಗರ ಕಾಮೆಂಟ್
ಕಾರು ಅಪಘಾತಕ್ಕೆ ಒಳಗಾಗಿದ್ದ ರಿಷಬ್ ಪಂತ್
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಪಂತ್
ಸೋಷಿಯಲ್ ಮೀಡಿಯಾದಲ್ಲಿ ಪಂತ್ ಪೋಸ್ಟ್
ಕ್ರಿಕೆಟಿಗರಿಂದ ಮೆಚ್ಚುಗೆ ಕಾಮೆಂಟ್
ಭೀಕರ ಅಪಘಾತಕ್ಕೆ ತುತ್ತಾಗಿದ್ದ ಟೀಮ್ ಇಂಡಿಯಾದ ವಿಕೆಟ್ ಪೀಕರ್ ರಿಷಭ್ ಪಂತ್ ಇದೀಗ ಸುಮಾರು 40 ದಿನಗಳ ನಂತರ ಚೇತರಿಸಿಕೊಂಡಿದ್ದು ನಡೆಯಲು ಆರಂಭಿಸಿದ್ದಾರೆ..
ಹೌದು..!
ಊರುಗೋಲಿನ ಸಹಾಯದಿಂದ ನಡೆಯುತ್ತಿರುವ ರಿಷಬ್ ಪಂತ್ ಅವರು ಈ ಫೋಟೋವನ್ನ ಸಾಮಾಜಿಕ ಜಾಲತಾಣ Instagram ನಲ್ಲಿ ಹಂಚಿಕೊಂಡು ಸ್ಪೂರ್ತಿದಾಯಕ ಕ್ಯಾಪ್ಷನ್ ಹಾಕಿದ್ದಾರೆ..
ರಿಷಬ್ ಪಂತ್ ಶುಕ್ರವಾರ ತಮ್ಮ ಟ್ವಿಟ್ಟರ್ ನಲ್ಲಿ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ, ಅಲ್ಲಿ ಅವರು ಊರುಗೋಲುಗಳ ಮೇಲೆ ನಡೆಯುವುದನ್ನು ಕಾಣಬಹುದು.
ಇನ್ನೂ ಕ್ರಿಕೆಟಿಗರದಾದ ವಾರ್ನರ್ , ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವರು ಕಾಮೆಂಟ್ ಗಳನ್ನ ಮಾಡುತ್ತಾ ರಿಷಬ್ ಗೆ ಧೈರ್ಯ ತುಂಬಿದ್ರೆ ಅಭಿಮಾನಿಗಳು ರಿಷಬ್ ಅವರು ಚೇತರಿಸಿಕೊಂಡಿರೋದಕ್ಕೆ ಖುಷಿ ಪಟ್ಟಿದ್ದಾರೆ..
25 ವರ್ಷ ವಯಸ್ಸಿನ ವಿಕೆಟ್-ಕೀಪರ್-ಬ್ಯಾಟರ್ ಸ್ವಲ್ಪ ಸಮಯದವರೆಗೆ ಆಟದಿಂದ ಹೊರಗುಳಿಯುವ ನಿರೀಕ್ಷೆಯಿದೆ.. ಆದರೆ ಪುನರಾಗಮನ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ..
‘ಒಂದು ಹೆಜ್ಜೆ ಮುಂದೆ, ಒಂದು ಹೆಜ್ಜೆ ಬಲಿಷ್ಠ, ಒಂದು ಹೆಜ್ಜೆ ಉತ್ತಮ’ ಎಂದು ಪಂತ್ ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ.
Rishabh Panth starts walking After 40 days of Accident