Rishabh – yuvi : ರಿಷಬ್ ಪಂತ್ ಭೇಟಿ ಮಾಡಿದ ಯುವರಾಜ್ ಸಿಂಗ್..!!
ರಿಷಬ್ ಪಂತ್ ಭೇಟಿ ಮಾಡಿದ ಯುವಿ
ಪಂತ್ ಗೆ ಆತ್ಮಸ್ಥೈರ್ಯ ತುಂಬಿದ ಯುವಿ
ಯುವಿ – ಪಂತ್ ಫೋಟೋ ವೈರಲ್
ಕಾರು ಅಪಘಾತದ ನಂತರ ಚೇತರಿಸಿಕೊಳ್ತಿರುವ ಪಂತ್
IPL 2023 ರನ್ನ ಮಿಸ್ ಮಾಡಿಕೊಂಡ DC ಕ್ಯಾಪ್ಟನ್
ಕಳೆದ ವರ್ಷ ಡಿಸೆಂಬರ್ 30 ರಂದು ಭೀಕರ ಕಾರು ಅಪಘಾತಕ್ಕೀಡಾಗಿದ್ದ ರಿಷಬ್ ಪಂತ್ ಅವರು ಚೇತರಿಸಿಕೊಳ್ತಿದ್ದಾರೆ.. ಅವರು ಚೇತರಿಸಿಕೊಳ್ಳಲು ಸುಮಾರು 1 ವರ್ಷವಾದ್ರೂ ಬೇಕು..
IPL ಸೀಸನ್ 16 ಸೇರಿದಂತೆ ಸಾಕಷ್ಟು ಪಂದ್ಯಾವಗಳಿಗಳನ್ನ ದೆಹಲಿ ಕ್ಯಾಪಿಟಲ್ಸ್ ನಾಯಕ , ವಿಕೆಟ್ ಕೀಪರ್ , ಬ್ಯಾಟರ್ ರಿಷಬ್ ಪಂತ್ ಮಿಸ್ ಮಾಡಿಕೊಳ್ತಿದ್ದಾರೆ.
ಅಂದ್ಹಾಗೆ ರಿಷಬ್ ಪಂತ್ ಚೇತರಿಕಾ ಹಂತದಲ್ಲಿದ್ದು , ಅವರನ್ನ ಇತ್ತೀಚೆಗೆ ಮಾಜಿ ಸ್ಟಾರ್ ಕ್ರಿಕೆಟಿಗ ಯುವರಾಜ್ ಸಿಂಗ್ ಮಾರ್ಚ್ 16 ರಂದು ಅವರ ಮನೆಯಲ್ಲಿ ಭೇಟಿ ಮಾಡಿದ್ದಾರೆ.
ಈ ಫೋಟೋವನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಕಾರು ಅಪಘಾತದ ನಂತರ ಯುವರಾಜ್ ಸಿಂಗ್ ಇದೇ ಮೊದಲ ಬಾರಿಗೆ ರಿಷಬ್ ಪಂತ್ ರನ್ನ ಭೇಟಿ ಆಗಿದ್ದಾರೆ.
ಒಂದು ದಿನದ ಹಿಂದೆ, ರಿಷಬ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಊರುಗೋಲಿನ ಸಹಾಯದೊಂದಿಗೆ ನಡೆಯುತ್ತಿದ್ದದ್ದು ಕಂಡುಬಂದಿತ್ತು.
ಈ ವಿಡಿಯೋ ನೋಡಿ ರಿಷಬ್ ಪಂತ್ ಚೇತರಿಸಿಕೊಳ್ಳುತ್ತಿರುವುದನ್ನ ಕಂಡು ಫ್ಯಾನ್ಸ್ ಸ್ವಲ್ಪ ಸಮಾಧನಗೊಂಡಿದ್ದಾರೆ. ಜೊತೆಗೆ ಕಮ್ ಬ್ಯಾಕ್ ಗಾಗಿ ರಿಷಬ್ ಪಂತ್ ತಯಾರಾಗುತ್ತಿದ್ದಾರೆ ಎಂದು ಹೇಳಬಹುದು..
ಯುವರಾಜ್ ಸಿಂಗ್ ಅವರ ಭೇಟಿ ನಿಜಕ್ಕೂ ಪಂತ್ ರ ಆತ್ಮ ವಿಶ್ವಾಸವನ್ನ ಹೆಚ್ಚಿಸಿದೆ ಎನ್ನಬಹುದು.
ಯಾಕಂದ್ರೆ ಯುವಿ ಕೂಡ ಫೈಟರ್…. ಶ್ವಾಸಕೋಶದ ಕ್ಯಾನ್ಸರ್ನೊಂದಿಗೆ ಹೋರಾಡಿದಾಗ ಸ್ವತಃ ಕಠಿಣ ಸಮಯವನ್ನು ಎದುರಿಸಿದರು. ಅವರು ತಮ್ಮ ಆಟದ ಉತ್ತುಂಗದಲ್ಲಿದ್ದಾಗ ಪೂರ್ಣ ಸಮಯದ ಭಾರತೀಯ ಕ್ರಿಕೆಟಿಗರಾಗಿ ಅಮೂಲ್ಯ ಸಮಯವನ್ನು ಕಳೆದುಕೊಂಡರು.
ಆದರೆ ಯುವರಾಜ್ ಪುನರಾಗಮನ ಮಾಡಿದರು ಮತ್ತು 2018 ರವರೆಗೆ ಭಾರತಕ್ಕಾಗಿ ಆಡಿದರು. ಅವರು 2016 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ನೊಂದಿಗೆ ಐಪಿಎಲ್ ಅನ್ನು ಗೆದ್ದರು.
ಪಂತ್ ಪುನರಾಗಮನದ ಬಗ್ಗೆ ಬಿಸಿಸಿಐ ಯಾವುದೇ ದೃಢೀಕೃತ ದಿನಾಂಕವನ್ನು ನೀಡಿಲ್ಲ. ಪ್ರಸ್ತುತ, ಅವರು ನಡೆಯಲು ಊರುಗೋಲನ್ನು ಬಳಸುತ್ತಿದ್ದಾರೆ.
ಸದ್ಯಕ್ಕೆ ಅವರ ಅನುಪಸ್ಥಿತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನ ಡೇವಿಡ್ ವಾರ್ನರ್
ನಾಯಕನಾಗಿ ಮುನ್ನೆಸಲಿದ್ದಾರೆ.
Rishabh – yuvi : Rishabh Pant met Yuvraj Singh..!!