ಬ್ರಿಟನ್ ಪ್ರಧಾನಿ ಹುದ್ದೆಯಿಂದ ಬೋರಿಸ್ ಜಾನ್ಸನ್ ಅವರು ಕೆಳಗಿಳಿದಿದ್ದಾರೆ.. ಅವರ ರಾಜೀನಾಮೆಯ ನಂತರ ಪ್ರಧಾನಿ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ.. ಹಲವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.. ಈ ಪೈಕಿ ಒಬ್ಬರು ಭಾರತ ಮೂಲದ ಬ್ರಿಟನ್ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್..
ರಿಷಿ ಅವರು ಖುದ್ದು ಈ ಬಗ್ಗೆ ಮಾತನಾಡಿದ್ದು ‘ ಬ್ರಿಟನ್ನ ಪ್ರಧಾನಿ ಹುದ್ದೆಗೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದು ನಾಯಕತ್ವದ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ’ ಎಂದಿದ್ದಾರೆ..
ಅಂದ್ಹಾಗೆ ಬೋರಿಸ್ ಜಾನ್ಸನ್ ಅವರ ನಾಯಕತ್ವವನ್ನು ವಿರೋಧಿಸಿ ಸುನಕ್ ಅವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಂದ್ಹಾಗೆ ರಿಷಿ ಸುನಕ್ ಅವರು ನಾರಾಯಣ ಮೂರ್ತಿ – ಸುಧಾ ಮೂರ್ತಿ ಅವರ ಅಳಿಯರಾಗಿದ್ದಾರೆ..