Rishi Sunuk : ಭಾರತದ ಜೊತೆ ಉತ್ತಮ ಬಾಂಧವ್ಯಕ್ಕೆ ರಿಷಿ ಸುನಕ್ ಒಲವು
ಇಂಡೋ-ಪೆಸಿಫಿಕ್ ವಲಯಗಳೊಂದಿಗೆ ಬಾಂಧವ್ಯವನ್ನು ಹೆಚ್ಚಿಸುವ ವಿಶಾಲ ದೃಷ್ಟಿಕೋನದ ಭಾಗವಾಗಿ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಈ ಮೂಲಕ ಬ್ರಿಟನ್ ಪ್ರಧಾನಿ ಭಾರತದ ಜೊತೆ ಉತ್ತಮ ಬಾಂಧವ್ಯಕ್ಕೆ ಒಲವು ತೋರಿದ್ದಾರೆ.
ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಬ್ರಿಟನ್ ಬದ್ಧತೆಯನ್ನು ಪುನರುಚ್ಚರಿಸಿದ ರಿಷಿ ಸುನಕ್, ಇದು 2050 ರ ವೇಳೆಗೆ ಜಾಗತಿಕ ಬೆಳವಣಿಗೆಯ ಅರ್ಧದಷ್ಟು ಭಾಗವನ್ನು ತಲುಪಿಸಲಿದೆ ಎಂದಿದ್ದಾರೆ.
ವಿದೇಶಾಂಗ ನೀತಿ ಕುರಿತಾದ ತಮ್ಮ ಮೊದಲ ಭಾಷಣದಲ್ಲಿ ರಿಷಿ ಸುನಕ್, ನಾನು ರಾಜಕೀಯಕ್ಕೆ ಬರುವ ಮೊದಲು, ಜಗತ್ತಿನಾದ್ಯಂತ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದೇನೆ ಮತ್ತು ಇಂಡೋ ಪೆಸಿಫಿಕ್ನಲ್ಲಿ ವಿಫುಲ ಅವಕಾಶಗಳಿವೆ. 2050ರ ವೇಳೆಗೆ, ಇಂಡೋ-ಪೆಸಿಫಿಕ್ ವಲಯವು ಜಾಗತಿಕ ಬೆಳವಣಿಗೆಯ ಅರ್ಧದಷ್ಟು ಭಾಗವನ್ನು ತಲುಪುತ್ತದೆ. ಅದಕ್ಕಾಗಿಯೇ ನಾವು ಟ್ರಾನ್ಸ್-ಪೆಸಿಫಿಕ್ ವ್ಯಾಪಾರ ಒಪ್ಪಂದ, ಸಿಪಿಟಿಪಿಪಿಗೆ ಸೇರುತ್ತಿದ್ದು, ಭಾರತದೊಂದಿಗೆ ಹೊಸ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ)ವನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.