ಬಿಹಾರ : ನೀರಲ್ಲಿ ಮುಳುಗಿ ಐವರು ಬಾಲಕಿಯರು ಮೃತಪಟ್ಟಿರುವ ಘಟನೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಾಮಗಡದಲ್ಲಿ ನಡೆದಿದೆ. ಕಾಲು ಜಾರಿ ಮುಳುಗುತ್ತಿದ್ದ ವೇಳೆ ಒಬ್ಬರನ್ನ ಒಬ್ಬರು ರಕ್ಷಣೆ ಮಾಡಲು ಹೋಗಿ ನೀರಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ ಎನ್ನಲಾಗಿದೆ.
ಮೇಕೆ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬಾಲಕಿಯೊಬ್ಬಳು ಸ್ನಾನ ಮಾಡಲು ಕೆರೆಗೆ ಇಳಿದಿದ್ದಾಳೆ.. ಅಲ್ಲಿ ಆಯತಪ್ಪಿ ನೀರಿಗೆ ಜಾರಿ ಬಿದ್ದು ಮುಳುಗಿದ್ದಾಳೆ.. ಆಕೆಯ ಸಹಾಯಕ್ಕೆ ಮತ್ತೊಬ್ಬ ಬಾಲಕಿ ಸರಿತಾ ಕುಮಾರಿ ಎಂಬಾಕೆ ಕೆರೆಗೆ ಇಳಿದಿದ್ದಾಳೆ..
ಆದ್ರೆ ಆಕೆ ಕೂಡ ಮುಳುಗಿದ್ದಾಳೆ. ಇದಾದ ಬಳಿಕ ಇತರ ಬಾಲಕಿಯರಾದ ಕೌಶಲ್ಯ, ಸೀಮಾ, ಶೋಭಾ ಕೂಡ ಕೆರೆಗೆ ಇಳಿದಿದ್ದು ಅವರ ಸಹಾಯಕ್ಕೆ ಮುಂದಾದಾಗ ಅವರೂ ಕೂಡ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಸ್ಥಳೀಯರು ಹೇಗೋ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸುವ ಹೊತ್ತಿಗಾಗ್ಲೇ ಐವರೂ ಕೂಡ ಮೃತಪಟ್ಟಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಾಯಿದ್ದಾರೆ.