ಇಂದೋರ್: ದೇಶದೆಲ್ಲೆಡೆ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ರಸ್ತೆಯಲ್ಲಿ ಸುಖಾ ಸುಮ್ಮನೆ ಓಡಾಡಬಾರದು ಎಂದು ಸರ್ಕಾರ ಮನವಿ ಮಾಡುತ್ತಲೇ ಇದೆ. ಆದರೂ ಜನರು ರಸ್ತೆಗಳಲ್ಲಿ ತಿರುಗಾಡುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಜನರು ರಸ್ತೆಗಿಳಿಯದಂತೆ ಹೆದರಿಸಲು ಇಂದೋರ್ ನಲ್ಲಿ ಭೂತಗಳು ಓಡಾಡುತ್ತಿವೆ.!
ಹೌದು..! ಇಂದೋರ್ ನ ರಸ್ತೆಗಳಲ್ಲಿ ಭೂತಗಳು ಓಡಾಡುತ್ತಿವೆ. ಆದ್ರೆ ಇವು ನಿಜವಾದ ಭೂತಗಳಲ್ಲ.. ಕೊರೊನಾಸುರನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂದೋರ್ ನ ವಿಜಯನಗರದ ಪೊಲೀಸರು ಇಬ್ಬರು ಸ್ವಯಂ ಸೇವಕರನ್ನು ಇದಕ್ಕಾಗಿ ಬಳಸಿಕೊಂಡಿದ್ದಾರೆ. ಅವರಿಗೆ ಅಸ್ತಿಪಂಜರದ ಉಡುಪು ತೊಡಿಸಿ ರಸ್ತೆಯಲ್ಲಿ ನಿಲ್ಲಿಸಿ ಹೆದರಿಸುವ ಕಾರ್ಯ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.








