ರೋಡ್ ಸೇಫ್ಟಿ ವಲ್ರ್ಡ್ ಸಿರೀಸ್ – ಸೆಹ್ವಾಗ್ -ಸಚಿನ್ ಆರ್ಭಟಕ್ಕೆ ತಲೆಬಾಗಿದ ಬಾಂಗ್ಲಾ ಲೆಜೆಂಡ್ಸ್…!
ರೋಡ್ ಸೇಫ್ಟಿ ವಲ್ರ್ಡ್ ಸಿರೀಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಲೆಜೆಂಡ್ಸ್ ತಂಡ ಬಾಂಗ್ಲಾ ದೇಶದ ವಿರುದ್ಧ ಸುಲಭ ಗೆಲುವನ್ನು ದಾಖಲಿಸಿದೆ.
ರಾಯ್ಪುರ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ತಂಡದ ಆರಂಭಿಕರಾದ ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಗತ ಕಾಲದ ವೈಭವವನ್ನು ಮತ್ತೊಮ್ಮೆ ನೆನಪಿಸಿಕೊಂಡ್ರು.
ತಮ್ಮ ಹಳೆಯ ಖ್ಯಾತಿಗೆ ತಕ್ಕಂತೆ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ಸೆಹ್ವಾಗ್ ಮತ್ತು ಸಚಿನ್ ಪಂದ್ಯವನ್ನು 10. 1 ಓವರ್ ಗಳಲ್ಲಿ ಮುಗಿಸಿದ್ರು.
ಬಾಂಗ್ಲಾ ದೇಶ ಲೆಜೆಂಡ್ಸ್ ತಂಡ 19.4 ಓವರ್ ಗಳಲ್ಲಿ 109 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಭಾರತ ಲೆಜೆಂಡ್ಸ್ ತಂಡ 10.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 114 ರನ್ ಗಳಿಸಿ ಸುಲಭವಾಗಿ ಗೆಲುವಿನ ನಗೆ ಬೀರಿತ್ತು.
ಆರಂಭಿಕ ವೀರೇಂದ್ರ ಸೆಹ್ವಾಗ್ 35 ಎಸೆತಗಳಲ್ಲಿ 85 ರನ್ ಸಿಡಿಸಿದ್ರು. ಇದ್ರಲ್ಲಿ 10 ಬೌಂಡರಿ ಹಾಗೂ ಐದು ಸಿಕ್ಸರ್ ಗಳಿದ್ದವು. ಅದೇ ರೀತಿ ಸಚಿನ್ ತೆಂಡುಲ್ಕರ್ 26 ಎಸೆತಗಳಲ್ಲಿ 33 ರನ್ ಕಲೆ ಹಾಕಿದ್ದರು. ಸಚಿನ್ ಇನಿಂಗ್ಸ್ ನಲ್ಲಿ ಐದು ಬೌಂಡರಿಗಳಿದ್ದವು.