ರೋಡ್ ಸೇಫ್ಟಿ ವಲ್ರ್ಡ್ ಸಿರೀಸ್ – ಸಚಿನ್, ಯುವಿ ಆರ್ಭಟಕ್ಕೆ ತಲೆಬಾಗಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್..!
Road Safety world Series Tendulkar, Yuvraj power India to victory
ಸಚಿನ್ ತೆಂಡುಲ್ಕರ್ ಮತ್ತು ಯುವರಾಜ್ ಸಿಂಗ್ ಅವರ ಅಮೋಘ ಬ್ಯಾಟಿಂಗ್ ನೆರವನ್ನು ಪಡೆದ ಭಾರತ ಲೆಜೆಂಡ್ಸ್ ತಂಡ 57 ರನ್ ಗಳಿಂದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡವನ್ನು ಪರಾಭವಗೊಳಿಸಿತು.
ರೈಪುರ್ ನಲ್ಲಿ ನಡೆಯುತ್ತಿರುವ ರೋಡ್ ಸೆಫ್ಟಿ ವಲ್ರ್ಡ್ ಸಿರೀಸ್ ಟೂರ್ನಿಯಲ್ಲಿ ಭಾರತ ಲೆಜೆಂಡ್ಸ್ ತಂಡ ಈ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿದೆ.
ಭಾರತ ಲೆಜೆಂಡ್ಸ್ ತಂಡ ನೀಡಿರುವ 205 ರನ್ ಗಳ ಸವಾಲಿಗೆ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಗೆ 148 ರನ್ ಗಳಿಸಿ 57 ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು.
Road Safety world Series Tendulkar, Yuvraj power India to victory
ಭಾರತದ ಪರ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ 37 ಎಸೆತಗಳಲ್ಲಿ 9 ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ 60 ರನ್ ಗಳಿಸಿದ್ರೆ, ಯುವರಾಜ್ ಸಿಂಗ್ 22 ಎಸೆತಗಳಲ್ಲಿ ಅಜೇಯ 52 ರನ್ ದಾಖಲಿಸಿದ್ರು. ಯುವರಾಜ್ ಸಿಂಗ್ ಅವರು ಒಂದೇ ಓವರ್ ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿ ಮಿಂಚು ಹರಿಸಿದ್ರು. ಹಾಗೇ ಭಾರತದ ಪರ ಯುಸೂಫ್ ಪಠಾಣ್ ಮತ್ತು ಯುವರಾಜ್ ಸಿಂಗ್ ತಲಾ ಎರಡು ವಿಕೆಟ್ ಉರುಳಿಸಿದ್ರು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಜಾಂಟಿರೋಡ್ಸ್ ಮೊದಲು ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ್ರು. ಇನಿಂಗ್ಸ್ ಆರಂಭಿಸಲು ಸೆಹ್ವಾಗ್ ಜೊತೆ ಸಚಿನ್ ತೆಂಡುಲ್ಕರ್ ಕ್ರಿಸ್ಗೆ ಆಗಮಿಸುತ್ತಿದ್ದಂತೆ ಸಚಿನ್ ಸಚಿನ್ ಸಚಿನ್ ಅನ್ನೋ ಮಂತ್ರ ಘೋಷದ ಅಭಿಮಾನಿಗಳ ಘೋಷಣೆ ಮತ್ತೆ ಮೇಳೈಸುತ್ತಿದ್ದಾಗ ದಶಕಗಳ ಹಿಂದಿನ ನೆನಪುಗಳನ್ನು ಮರುಕಳಿಸುವಂತಿತ್ತು.
ಆದ್ರೆ ಸಚಿನ್ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ಆಕರ್ಷಕ ಅರ್ಧಶತಕ ದಾಖಲಿಸಿ ಪ್ರೇಕ್ಷಕರನ್ನು ರಂಜಿಸಿದ್ರು.
#Road Safety world Series #sachintendulkar #yuvarajsingh #team india #cricket