ನನ್ನ ಗಾಡಿಗೆ ನಾನೇ ಬೆಂಕಿ ಹಚ್ಚುತ್ತೇನೆ, ತಳ್ಳುಗಾಡಿಗೆ ಬೆಂಕಿ ಇಟ್ಟು ವ್ಯಾಪಾರಿ ಆಕ್ರೋಶ…
ನನಗೆ ಕೆಲಸ ಕೊಡಿ.. ಇಲ್ಲವೇ ಗಾಡಿ ವ್ಯಾಪಾರಕ್ಕೆ ಬಿಡಿ. ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎಂದು ನಗರಸಭೆ ಅಧಿಕಾರಿಗಳ ಎದುರು ವ್ಯಾಪಾರಿಯೊಬ್ಬ ಗಾಡಿಗೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆಯಲ್ಲಿ ಬಡ ವ್ಯಾಪಾರಿಯೊಬ್ಬ ಹಣ್ಣು ತರಕಾರಿಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇಂದು ಈ ವ್ಯಾಪಾರಿಯ ಗಾಡಿಯನ್ನು ಹೊತ್ತೊಯ್ಯಲು ನಗರಸಭೆ ಸಿಬ್ಬಂದಿ ಬಂದಿದ್ದರು. ಇದರಿಂದ ರೊಚ್ಚಿಗೆದ್ದ ಬಡ ವ್ಯಾಪಾರಿಯು, ನಮ್ಮ ಹೊಟ್ಟೆ ಮೇಲೆ ಹೊಡಿಯುತಿದ್ದೀರಾ, ನಾನೇ ಬೆಂಕಿ ಹಾಕ್ತೀನಿ ಎಂದು ತನ್ನ ಗಾಡಿಗೆ ತಾನೇ ಬೆಂಕಿ ಹಾಕಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ನಮ್ಮ ಹೊಟ್ಟೆ ಮೇಲೆ ಹೋಡೀತಿದ್ದೀರಾ. ನಗರಸಭೆಯವರು 500-1000 ದುಡ್ ಕೇಳ್ತಾರೆ, ಎಲ್ಲಿಂದ ತಂದು ಕೊಡ್ಲಿ , ಫೈನಾನ್ಸ್ ಗೆ ದುಡ್ಡು ಕಟ್ಟೋದೆ ಕಷ್ಟ, ಇವರಿಗೆ ಹೇಗೆ ಕೊಡೋದು ಎಂದು ಆಕ್ರೋಶ ಹೊರಹಾಕಿದ್ದಾನೆ. ನನ್ನ ಗಾಡಿ ತಗೆಯಬೇಡಿ..ನಾನೇ ಬೆಂಕಿ ಹಚ್ತೀನಿ. ವ್ಯಾಪಾರಿ ತಳ್ಳುವ ಗಾಡಿಗೆ ಬೆಂಕಿ ಹಚ್ಚಿದ್ದಾನೆ.
ಚಿಕ್ಕಮಗಳೂರು ನಗರಸಭೆಯ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








