ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳ್ಳರ ಕಾಟ
ಗದಗ: ಗದಗ-ಬೆಟಗೇರಿ ಅವಳಿ ನಗರಗದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಸಿದ್ದಲಿಂಗ ರಾಮನಕೊಪ್ಪ ಎಂಬುವರ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದೀಮರು ದೋಚಿದ್ದಾರೆ.
ನಡೆದ್ದಿದ್ದು ಏನು: ಕೆಲ ದಿನಗಳ ಹಿಂದೆ ಮದುವೆ ಕಾರ್ಯಕ್ಕೆಂದು ಬ್ಯಾಂಕ್ ಲಾಕರ್ನಲ್ಲಿದ್ದ ಚಿನ್ನವನ್ನು ತಂದಿದ್ದರು. ಚಿನ್ನಾಭರಣ ಧರಿಸಿ ಸಂಭ್ರಮದಿಂದ ಮನೆ ಮಗಳ ಮದುವೆ ಮಾಡಿದ್ದರು. ಮದುವೆ ಬಳಿಕ ಮತ್ತೆ ಬ್ಯಾಂಕ್ ಲಾಕರ್ನಲ್ಲಿ ಆಭರಣ ಇಡಬೇಕು ಎಂದು ನಿಶ್ಚಯಿಸಿದ್ದರು. ಆದರೆ ಮದುವೆಯ ನಂತರ ಮನೆಯಲ್ಲಿನ ಮಹಿಳೆಯರು ಬೇರೆ ಊರಿಗೆ ತೆರಳಿದ್ದರು.
ಮದುವೆ ಕಾರ್ಯದ ಬಳಿಕ ಮನೆ ಯಜಮಾನ ಸಂಜೆ 6-30ರ ವೇಳೆಗೆ ಮನೆ ಲಾಕ್ ಮಾಡಿಕೊಂಡು ಸಮೀಪದ ಅಂಗಡಿಗೆ ಹೋಗಿದ್ದ. ಇದನ್ನು ಗಮನಿಸಿದ ಕಳ್ಳರು ಅದೇ ಸಮಯದಲ್ಲಿ ಹಿತ್ತಲ ಬಾಗಿಲಿನಿಂದ ಮನೆಯೊಳಗೆ ನುಗ್ಗಿ 1ಕೇಜಿಯಷ್ಟು ಚಿನ್ನಾಭರಣ ಲೂಟಿ ಮಾಡಿದ್ದಾರೆ.
ಆದರೆ, ಅಲ್ಲೇ ಇದ್ದ ಬೆಳ್ಳಿಯ ಆಭರಣಗಳನ್ನು ಮುಟ್ಟಿಲ್ಲ. ಬೆಳ್ಳಿ ದೇವರ ಮೂರ್ತಿ ಹಾಗೂ ಅಪಾರ ಬೆಲೆಬಾಳುವ ರೇಷ್ಮೆ ಸೀರೆಗಳನ್ನೂ ಕೂಡ ಕಳ್ಳರು ಹಾಗೆಯೇ ಬಿಟ್ಟು ತೆರಳಿದ್ದಾರೆ. ಸಂಜೆ 6.30ರಿಂದ 8 ಗಂಟೆ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಇದರಿಂದ ಗದಗ – ಬೆಟಗೇರಿ ಅವಳಿ ನಗರಗಳ ಜನರು ಬೆಚ್ಚಿಬಿದ್ದಿದ್ದಾರೆ. ಊರ ಮಧ್ಯದಲ್ಲಿರುವ ಮನೆಯಲ್ಲೇ ಕಳ್ಳತನ ನಡೆದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.