‘ರಾಬರ್ಟ್’ ಅಮೆಜಾನ್ ಪ್ರೈಮ್ ನಲ್ಲಿ ಮೂಲಕ ಅದ್ಧೂರಿಯಾಗಿ ಎಂಟ್ರಿ ಕೊಡಲಿದ್ದಾರೆ ಡಿ ಬಾಸ್..!
ಬೆಂಗಳೂರು : ಮಾರ್ಚ್ 11 ರಂದು ರಿಲೀಸ್ ಆಗಿ ಕರ್ನಾಟಕ ತೆಲುಗು ರಾಜ್ಯಗಳಲ್ಲಿ ಅಬ್ಬರಿಸಿ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇದೀಗ ಒಟಿಟಿಗೆ ಅದ್ಧೂರಿಯಾಗಿ ಎಂಟ್ರಿ ಕೊಡೋದಕ್ಕೆ ಸಜ್ಜಾಗಿದೆ.
ಹೌದು ಏಪ್ರಿಲ್ 25 ರಂದು ರಾಬರ್ಟ್ ಸಿನಿಮಾ ಅಮೇಜಾನ್ ಪ್ರೈಮ್ ಗೆ ಲಗ್ಗೆ ಇಡಲಿದೆ. ತರುಣ್ ಕಿಶೋರ್ ನಿರ್ದೇಶನದ ರಾಬರ್ಟ್ ಸಿನಿಮಾ, ಕನ್ನಡ, ತೆಲುಗು, ತಮಿಳು ಮಲಯಾಳಂತ ಹಾಗೂ ಹಿಂದಿಯಲ್ಲಿ ಪ್ರದರ್ಶನವಾಗಲಿದೆ. ರಾಬರ್ಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೊತೆ ಆಶಾ ಭಟ್ ನಾಯಕಿಯಾಗಿ ನಟಿಸಿದ್ದರು. ವಿನೋದ್ ಪ್ರಭಾಕರ್, ಸೋನೆಲ್ ಮಾಂಟೇರಿಯೋ, ರವಿಶಂಕರ್ ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ.