ದರ್ಶನ್ ಸಿನಿಮಾ `ರಾ’BUT : ಬಿಲ್ಡಪ್ ಇಲ್ಲದ ರಾಬರ್ಟ್ ರಿವ್ಯೂವ್
ಆಗಸವೇ ಮಿತಿಯಾಗಿ ಭಾರಿ ನಿರೀಕ್ಷೆಗಳ ಮಧ್ಯೆ ಮಹಾ ಶಿವರಾತ್ರಿ ಅಂಗವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಚಿತ್ರಮಂದಿರಗಳಿಗೆ ಕಾಲಿಟ್ಟಿದೆ. ರಾಜ್ಯದ ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದು, ಬರೋಬ್ಬರಿ ಒಂದುವರೆ ವರ್ಷದ ಬಳಿಕ ದಚ್ಚು ಅಭಿಮಾನಿಗಳು ದಾಸನ ದರ್ಶನ ಪಡೆಯುತ್ತಿದ್ದಾರೆ. ದರ್ಶನ್ ಅವರ ಸಿನಿಮಾಕೆರಿಯರ್ ನಲ್ಲಿ ಇದೊಂದು ಒನ್ ಆಫ್ ದಿ ಬಿಗ್ಗೇಸ್ಟ್ ಓಪನಿಂಗ್ ಪಡೆದಿರುವ ಸಿನಿಮಾ. ಇದಕ್ಕೆ ಕಾರಣ ಟೀಸರ್, ಟ್ರೈಲರ್ ಗಳಲ್ಲಿ ದರ್ಶನ್ ಅವರು ಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದು. ಹಿಂದೆಂದು ನೋಡದ ರೀತಿಯಲ್ಲಿ ದರ್ಶನ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಟ್ರೈಲರ್ ನಲ್ಲೇ ಗೊತ್ತಾಗಿತ್ತು. ಇದೇ ಕಾರಣಕ್ಕೆ ಸಿನಿಮಾ ನೋಡಲೇಬೇಕೆಂದು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಸಿನಿಮಾಗಾಗಿ ಕಾಯುತ್ತಿದ್ದರು. ಇದೀಗ ಸಿನಿಮಾ ರಿಲೀಸ್ ಆಗಿದ್ದು, ರಾಬರ್ಟ್ ಸಿನಿಮಾದ ಹೇಗಿದೆ..? ದರ್ಶನ್ ಅಭಿಮಾನಿಗಳ ನಿರೀಕ್ಷೆಗಳನ್ನ ಮುಟ್ಟಿದ್ದಾರಾ..? ಮುಂದೆ ಓದಿ
ಎಂಟ್ರಿ ಸೀನ್..!
ದರ್ಶನ್ ಸಿನಿಮಾಗಳಲ್ಲಿ ಅವರ ಎಂಟ್ರಿ ಸೀನ್ ಅದ್ಧೂರಿಯಾಗಿರುತ್ತೆ. ಪ್ರತಿಯೊಬ್ಬ ಅಭಿಮಾನಿ ಕೂಡ ದಚ್ಚು ಎಂಟ್ರಿಗೆ ತುದಿಗಾಲಿನಲ್ಲಿ ನಿಂತಿರುತ್ತಾರೆ. ದರ್ಶನ್ ಅಂದ್ರೆ ಮಾಸ್ ಆಕ್ಷನ್ ದೃಶ್ಯಗಳಿಂದ ಎಂಟ್ರಿ ಕೊಡೋದು ಸಾಮಾನ್ಯ. ಆದ್ರೆ ಈ ಸಿನಿಮಾದಲ್ಲಿ ಡಿ ಬಾಸ್ ಬೇರೆಯದ್ದೇ ರೀತಿಯಲ್ಲಿ ಎಂಟ್ರಿ ಕೊಡ್ತಾರೆ.. ಅದು ಯಾವ ರೀತಿ ಅಂತ ನೀವು ಸಿನಿಮಾದಲ್ಲೇ ನೋಡಿ, ಮಜಾ ಬರುತ್ತೆ..!
ದರ್ಶನ್ ಪಾತ್ರ ಹೇಗಿದೆ..?
ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಈಗಾಗಲೇ 50 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ ಸಾಕಷ್ಟು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಸಿನಿಮಾದಲ್ಲಿ ತುಂಬಾ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ದ್ವಿತೀಯಾರ್ಧದಲ್ಲಿ ಬರುವ ರಾಬರ್ಟ್ ಕ್ಯಾರೆಕ್ಟರ್ ದರ್ಶನ್ ಗೆ ಹೇಳಿ ಮಾಡಿಸಿದಂತಿದೆ. ರಾಬರ್ಟ್ ಪಾತ್ರದಲ್ಲಿ ದರ್ಶನ್ ಅಪಿರಿಯನ್ಸ್ ವ್ಹಾವ್ ಎನಿಸುತ್ತೆ. ಪ್ರತಿ ಬಾರಿ ಅವರು ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗಲೂ ಥಿಯೇಟರ್ ನಲ್ಲಿ ಸುನಾಮಿ ಬಂದಂತಾಗುತ್ತದೆ.
ಈ ಮಧ್ಯೆ ಕಣ್ಣು ಹೊಡ್ಯಾಕ ಅಂತ ನಾಯಕಿ ಆಶಾ ಭಟ್ ಮಾಸ್ ಎಂಟ್ರಿ ಕೊಡ್ತಾರೆ. ಇದರ ಜೊತೆ ಜೊತೆಗೆ ಕಾಮಿಡಿ ಟ್ರ್ಯಾಕ್ ಕೂಡ ನಡೆಯುತ್ತೆ. ಸಿನಿಮಾದ ಮೊದಲಾರ್ಧದಲ್ಲಿ ಕಾಮಿಡಿ ಪಾತ್ರಗಳು ಸಾಕಷ್ಟು ಕ್ಲಿಕ್ ಆಗಿದೆ. ಶಿವರಾಜ್ ಕೆಆರ್ ಪೇಟೆ, ಚಿಕ್ಕಣ್ಣ, ಧರ್ಮಣ್ಣ ಪಾತ್ರಗಳು ಸಾಕಷ್ಟು ಹೈಲೈಟ್ ಆಗಿದೆ.
ಹುಡುಗಿ ಜೊತೆ ಡುಯೆಂಟ್ ಹಾಡಿದ್ದು ಆಯ್ತು.. ಚಿಕ್ಕಣ್ಣನ ಜೊತೆ ಕಾಮಿಡಿ ಕಚಗುಳಿ ಇಟ್ಟಿದ್ದು ಆಯ್ತು.. ಇನ್ನ ಮಿಸ್ ಆಗಿರೋದು ಆಕ್ಷನ್..!!
ದರ್ಶನ್ ಸಿನಿಮಾ ಎಂದಾಗ ನೆನಪಾಗೋದು ಆಕ್ಷನ್ ದೃಶ್ಯಗಳು. ರಾಬರ್ಟ್ ಸಿನಿಮಾದ ಮೊದಲಾರ್ಧದಲ್ಲಿ ಕೇವಲ ಎರಡು ಆಕ್ಷನ್ ದೃಶ್ಯ ಮಾತ್ರ ಇಡಲಾಗಿದೆ. ಆದ್ರೆ ದ್ವಿತೀಯಾರ್ಧದಲ್ಲಿ ಕಂಪ್ಲೀಟ್ ಆಕ್ಷನ್ ಮಯವಾಗಿರುತ್ತೆ. ಬ್ಯಾಕ್ ಟು ಬ್ಯಾಕ್ ಆಕ್ಷನ್ ದೃಶ್ಯಗಳು ಬರುತ್ತಲೇ ಇರುತ್ವೆ. ಇದು ತುಸು ಕಿರಿಕಿರಿ ಉಂಟು ಮಾಡಿದ್ರೂ ಮಾಸ್ ಅಭಿಮಾನಿಗಳಿಗೆ ಮಾತ್ರ ಹಬ್ಬದೂಟ.
ಇನ್ನ ಮೊದಲಾರ್ಧದಲ್ಲಿ ಸಿನಿಮಾದ ಕಥೆ ಬಿಟ್ಟುಕೊಡದೇ ಇದ್ದರೂ ಎಲ್ಲೂ ಬೋರ್ ಆಗಲ್ಲ. ಆದ್ರೆ ಇಂಟರ್ ವೆಲ್ ನಲ್ಲಿ ಹೊಸದೇನು ಇಲ್ಲ. ಇದಾದ ಬಳಿಕ ದ್ವಿತೀಯಾರ್ಧದಲ್ಲಿ ಬ್ಲಾಶ್ ಬ್ಯಾಕ್ ಶುರುವಾಗಿ ರಿಯಲ್ ರಾಬರ್ಟ್ ಎಂಟ್ರಿ ಕೊಡ್ತಾನೆ. ಅಸಲಿ ಕಹಾನಿ ಇಲ್ಲಿಂದ ಶುರುವಾಗುತ್ತೆ. ಇದೇ ವೇಳೆ ಯಂಗ್ ಟೈಗರ್ ವಿನೋದ್ ಪ್ರಭಾಕರ್ ಕೂಡ ಮಸ್ತ್ ಎಂಟ್ರಿ ಕೊಡ್ತಾರೆ. ಇವರಿಬ್ಬರ ಎಂಟ್ರಿ ಸೀನ್ ಹಾಲಿವುಡ್ ಆಕ್ಷನ್ ದೃಶ್ಯಗಳನ್ನ ನೆನಪು ಮಾಡಿಸುತ್ತೆ. ಹಾಗೆ ವಿಲನ್ ಗಳ ಪರಿಚಯ ಕೂಡ ಆಗುತ್ತೆ.
ನಿರ್ದೇಶಕ ತರುಣ್ ಸುದೀರ್ ದ್ವಿತೀಯಾರ್ಧದಲ್ಲಿ ಕಥೆಯನ್ನ ಕೇವಲ ಫೈಟ್ಸ್.. ಸಾಂಗ್ಸ್… ಮಧ್ಯೆ ಜೋಡಿಸಿದ್ದಾರೆ. ಸಾಂಗ್ ಆದ ಮೇಲೆ ಫೈಟ್.. ಫೈಟ್ ಆದ ಮೇಲೆ ಸಾಂಗ್ ಒಂದೋ ಎರಡೋ ಸೆಂಟಿಮೆಂಟ್ ಸೀನ್ ಗಳು ಬರುತ್ವೆ. ಒಟ್ಟಾರೆ ದ್ವಿತೀಯಾರ್ಧದಲ್ಲಿ ರಾಬರ್ಟ್ ಪಾತ್ರಧಾರಿಯಾಗಿ ದರ್ಶನ್ ಮಿಂಚುಹರಿಸುತ್ತಾರೆ. ಹಾಗೆ ವಿನೋದ್ ಪ್ರಭಾಕರ್ ಕೂಡ ಒಳ್ಳೆ ಅಟೆಂಷನ್ ತಗೋತಾರೆ.
ಇನ್ನು ಕ್ಲೈಮ್ಯಾಕ್ಸ್ ಗೆ ಬಂದ್ರೆ ಸಿನಿಮಾದ ಮೇನ್ ಹೈಲೇಟ್ ಅಂದ್ರೆ ಅದು ಕ್ಲೈಮ್ಯಾಕ್ಸ್ ನಲ್ಲಿ ದರ್ಶನ್ ಅವರ ಅಭಿನಯ. ಕ್ಲೈಮಾಕ್ಸ್ ಕಂಪ್ಲೀಟ್ ದರ್ಶನ್ ಮಯವಾಗಿರುತ್ತೆ. ಅವರ ಆಕ್ಟಿಂಗ್.. ಆಕ್ಷನ್… ಎರಡೂ ಪ್ರೇಕ್ಷಕರ ಮನ ಗೆಲ್ಲುತ್ತೆ.
ಒಟ್ಟಾರೆ ರಾಬರ್ಟ್ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದಂತಹ ಚಿತ್ರವಾಗಿದೆ. ಕಥೆ ಬಗ್ಗೆ ತಲೆ ಕಡೆಸಿಕೊಳ್ಳದೇ ಮಾಸ್ ಮಸಾಲ ಸಿನಿಮಾ ನೋಡುವವರಿಗೆ ರಾಬರ್ಟ್ ಬೆಸ್ಟ್ ಆಪ್ಶನ್..!!
