Rocket Vikram-S -ಶ್ರೀಹರಿಕೋಟಾ: ರಾಕೆಟ್ ಉಡಾವಣೆ ಮಾಡಲು ಕ್ಷಣಗಣನೆ ಪ್ರಾರಂಭವಾಗಿದೆ, ಈ ರಾಕೆಟ್ಅನ್ನುಮೊದಲ ಬಾರಿ ಭಾರತದಲ್ಲಿ ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ್ದು.
ವಿಕ್ರಮ್-ಎಸ್ ರಾಕೆಟ್ ಅನ್ನು ತೆಲಂಗಾಣ ಮೂಲದ ಟೆಕ್ ಸ್ಟಾರ್ಟ್ಅಪ್ ಸ್ಕೈರೂಟ್ ಏರೋಸ್ಪೇಸ್ ತಯಾರಿಸಿರುವ ಇದು ಶುಕ್ರವಾರ ಬೆಳಗ್ಗೆ 11:30ಕ್ಕೆ ಉಡಾವಣೆಗೊಳ್ಳಲಿದೆ.
ವಿಕ್ರಮ್ ಸಾರಾಭಾಯ್ ಅವರ ಸ್ಮರಣಾರ್ಥವಾಗಿದೆ. ಇವರು ಇಸ್ರೋ ಸಂಸ್ಥಾಪಕರಾಗಿದ್ದು ಸ್ಕೈರೂಟ್ ಸಂಸ್ಥೆ ಉಡಾವಣಾ ವಾಹಕಕ್ಕೆ ವಿಕ್ರಮ್ ಎಂದು ಹೆಸರಿಟ್ಟಿದೆ.
ಒಟ್ಟು 3 ರಾಕೆಟ್‌ಗಳಿಗೆ ವಿಕ್ರಮ್ ಸೀರಿಸ್‌ನಲ್ಲಿ ಹೆಸರಿಡಲಾಗಿದ್ದು. ರಾಕೆಟ್ ವಿಕ್ರಮ್-ಎಸ್ 3 ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ.
ಇದರಿಂದ ಭಾರತದಂದ ಅಧಿಕೃತವಾಗಿ ಬಾಹ್ಯಾಕಾಶಕ್ಕೆ ಖಾಸಗಿ ಕಂಪನಿಗಳು ಪ್ರವೇಶ ಪಡೆದಂತಾಗಿತ್ತವೆ.
ವಿಕ್ರಮ್-ಎಸ್ ಉಪಗ್ರಹವು ಭಾರತ ಅಭಿವೃದ್ಧಿಪಡಿಸಿದ ಸ್ಪೇಸ್‌ಕಿಡ್ಜ್ ಇಂಡಿಯಾ, ಬಜೂಮ್ಕ್ ಅರ್ಮೇನಿಯಾ ಹಾಗೂ ಎನ್-ಸ್ಪೇಸ್ ಟೆಕ್ 3 ಪೇಲೋಡ್‌ಗಳನ್ನು ಹೊತ್ತೊಯ್ಯಲಿದೆ.
ಈ ರಾಕೆಟ್ ಅನ್ನು 2 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ರಾಕೆಟ್ನ ಉದ್ದ 6 ಮೀ.
0.375 ಮೀ. ಅಗಲ ಮತ್ತ 545 ಕೆಜಿ ತೂಕವನ್ನು ಹೊಂದಿದೆ.
ಶುಕ್ರವಾರ ಬೆಳಗ್ಗೆ 11:30ಕ್ಕೆ ವಿಕ್ರಮ್-ಎಸ್ ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.








