Roger Binny | ಬಿಸಿಸಿಐ ಬಿಗ್ ಬಾಸ್ ಸ್ಥಾನಕ್ಕೆ ಬಿನ್ನಿ ಯಾಕೆ ?
ಬಿಸಿಸಿಐ ನೂತನ ಅಧ್ಯಕ್ಷರಾಗಿ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ರೋಜರ್ ಬಿನ್ನಿ ಶೀಘ್ರದಲ್ಲಿಯೇ ಅಧಿಕಾರವಹಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮತ್ತೊಂದು ಬಾರಿ ಬಿಸಿಸಿಐ ಬಿಗ್ ಬಾಸ್ ಆಗಲು ಬಯಸಿದ್ರೂ ಅವರಿಗೆ ಬೋರ್ಡ್ ಬೆಂಬಲಿವಿಲ್ಲ.
ಅಕ್ಟೋಬರ್ 18 ರಂದು ನಡೆಯಲಿರುವ ಎಜಿಎಂ ಮೀಟಿಂಗ್ ನಂತರ ಬಿನ್ನಿ ಬಿಸಿಸಿಐ ಅಧ್ಯಕ್ಷ ಜವಾಬ್ದಾರಿಗಳನ್ನು ಸ್ವೀಕರಿಸಲಿದ್ದಾರೆ.
ಅಂದಹಾಗೆ ರೋಜರ್ ಬಿನ್ನಿ ಅಂದರೇ ನಮಗೆ ನೆನಪಾಗುವುದು 1983 ವಿಶ್ವಕಪ್. 1983 ವಿಶ್ವಕಪ್ ಅನ್ನು ಕಪಿಲ್ ಡೆವಿಲ್ಸ್ ಗೆದ್ದಿದ್ದು ಗೊತ್ತಿದೆ.
ಅಂಡರ್ ಡಾಗ್ಸ್ ಆಗಿ ಅಖಾಡಕ್ಕೆ ಧುಮುಖಿದ ಟೀಂ ಇಂಡಿಯಾ ಯಾರೂ ಊಹಿಸದ ರೀತಿಯಲ್ಲಿ ವಿಶ್ವಕಪ್ ಗೆದ್ದು ಮಿಂಚಿತು. ಈ ಗೆಲುವಿನಲ್ಲಿ ಬೌಲರ್ ಆಗಿ ಬಿನ್ನಿ ಪ್ರಮುಖ ಪಾತ್ರವಹಿಸಿದ್ದರು.
ರೈಟ್ ಆರ್ಮ್ ಮೀಡಿಯಂ ಫಾಸ್ಟ್ ಬೌಲರ್ ಆಗಿ ಬಿನ್ನಿ ವಿಶ್ವಕಪ್ ನಲ್ಲಿ 18 ವಿಕೆಟ್ ಗಳನ್ನು ಪಡೆದು ಮಿಂಚಿದರು. ಇದರೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.
ಬಿಸಿಸಿಐ ಬಿಗ್ ಬಾಸ್ ಸ್ಥಾನಕ್ಕೆ ಬಿನ್ನಿ ಯಾಕೆ ?
67 ವರ್ಷದ ಬಿನ್ನಿ 36 ನೇ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ಯಾಕೆ ಎಂಬ ಪ್ರಶ್ನೆ ಸಾಕಷ್ಟು ಮಂದಿಯಲ್ಲಿ ಮೂಡಿದೆ.
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಸೆಕ್ರೆಟರಿ ಸಂತೋಷ್ ಮೀನನ್ ಗೆ ಬದಲಿಯಾಗಿ ಬಿಸಿಸಿಐ ಎಜಿಎಂ ನಲ್ಲಿ ಬಿನ್ನಿ ಅವರನ್ನು ಪ್ರತಿನಿಧಿಯಾಗಿ ನೇಮಿಸಿತ್ತು.
ಆಗದೇ ಬಿನ್ನಿಗೆ ಬಿಸಿಸಿಐನಲ್ಲಿ ಹೊಸ ಜವಾಬ್ದಾರಿ ಸಿಗುವ ಸೂಚನೆಗಳು ಸಿಕ್ಕಿದ್ದವು.
ಅದರಲ್ಲೂ ರೋಜರ್ ಬಿನ್ನಿಗೆ ಕ್ಲೀನ್ ಇಮೇಜ್ ಇದೆ. ಅವರ ಪುತ್ರ ಸ್ಟುವರ್ಟ್ ಬಿನ್ನಿ ಟೀಂ ಇಂಡಿಯಾ ಪರ ಆಡುವಾಗ ರೋಜರ್ ಬಿನ್ನಿ ಸೆಲೆಕ್ಟರ್ ಪದವಿಗೆ ರಾಜೀನಾಮೆ ನೀಡಿದ್ದರು.
ಅದಷ್ಟೇ ಅಲ್ಲದೇ ರೋಜರ್ ಬಿನ್ನಿ ಒಳ್ಳೆಯ ಕೋಚ್ ಕೂಡ ಹೌದು. 2000 ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದ ಭಾರತ ಅಂಡರ್ 19 ತಂಡದ ಕೋಚ್ ಆಗಿದ್ದರು.
ಯುವರಾಜ್ ಸಿಂಗ್, ಮೊಹ್ಮದ್ ಕೈಫ್ ರಂತಹ ಆಟಗಾರರನ್ನ ಬೆಳಕಿಗೆ ತಂದಿದ್ದು ಬಿನ್ನಿಯೇ. ಆ ನಂತರ ಬೆಂಗಾಲ್ ರಣಜಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.