ಸೋಲಿನೊಂದಿಗೆ ವಿದಾಯ ಹೇಳಿದ ರೋಜರ್ ಫೆಡರರ್ – ಕಣ್ಣೀರಿಟ್ಟ ದಿಗ್ಗಜರು..
ಟೆನಿಸ್ ಲೋಕದ ದೈತ್ಯ ರೋಜರ್ ಫೆಡರರ್ ಸೋಲಿನೊಂದಿಗೆ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಮೊದಲೇ ಘೋಷಿಸಿದಂತೆ, 41 ವರ್ಷದ ಸ್ವಿಸ್ ತಾರೆ ಲೇವರ್ ಕಪ್‌ನಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡುವ ಮೂಲಕ 24 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಪುರುಷರ ಡಬಲ್ಸ್ ಪಂದ್ಯದಲ್ಲಿ, ಸ್ನೇಹಿತ ರಾಫೆಲ್ ನಡಾಲ್ ಅವರೊಂದಿಗೆ ಕಣಕ್ಕಿಳಿದಿದ್ದ ಫೆಡರರ್ 6-4, 6-7, 9-11 ಪಾಯಿಂಟ್ ಗಳಿಂದ ಅಮೆರಿಕದ ಫ್ರಾನ್ಸಿಸ್ ಟಿಯಾಫೊ ಮತ್ತು ಜಾಕ್ ಸಾಕ್ ಅವರ ವಿರುದ್ಧ ಸೋಲಪ್ಪಿಕೊಂಡಿದ್ದಾರೆ.
ಪಂದ್ಯದಲ್ಲಿ ಸೋತ ಬಳಿಕ ಅಂಗಳದಲ್ಲಿ ಭಾವುಕರಾದ ರೋಜರ್ ‘ನನಗೆ ಬೇಸರವಿಲ್ಲ… ಸಂತೋಷವಾಗಿದೆ’ ಎಂದರು ಆದರೆ, ಅವರ ಕಣ್ಣಲ್ಲಿ ನೀರು ಜಿನುಗುತಿತ್ತು. ಟೆನಿಸ್ ಅಂಗಳದ ಮಧ್ಯದಲ್ಲಿ ನಿಂತ ಫೆಡರರ್ ಎರಡೂ ಕೈಗಳನ್ನು ಮೇಲಕ್ಕೆತ್ತಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ನಂತರ ಸರ್ಬಿಯಾದ ತಾರೆ ನೊವಾಕ್ ಜೊಕೊವಿಕ್ ಅವರನ್ನು ಭೇಟಿಯಾದರು. ಈ ವೇಳೆ ಅವರ ಜೊತೆಗಾರ ನಡಾಲ್ ಕೂಡ ಭಾವುಕರಾಗಿ ಕಾಣಿಸಿಕೊಂಡರು.
ಟೆನ್ನಿಸ್ ದಿಗ್ಗಜರ ವಿದಾಯಕ್ಕೆ ಭಾರತದ ಕ್ರೀಡಾ ತಾರೆಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ವಿರಾಟ್ ಕೊಹ್ಲಿ ಇದು ನನ್ನ ಪಾಲಿಗೆ ಕ್ರೀಡಾ ಜಗತ್ತಿಗೆ ಸಂಬಂಧಿಸಿದ ಅತ್ಯಂತ ಸುಂದರವಾದ ಚಿತ್ರ ಎಂದು ರೋಜರ್ ಮತ್ತು ನಡಾಲ್ ಫೊಟೋ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ಫೆಡರರ್ ತನ್ನ ಎಟಿಪಿ ಟೂರ್ ಪಂದ್ಯವನ್ನು ಬಹುಕಾಲದ ಪ್ರತಿಸ್ಪರ್ಧಿ ಮತ್ತು ಸ್ನೇಹಿತ ರಾಫೆಲ್ ನಡಾಲ್ ಜೊತೆ ಆಡಿದರು. ನಡಾಲ್ (22), ಜೊಕೊವಿಕ್ (21), ಫೆಡರರ್ (20), ಆಂಡಿ ಮರ್ರೆ (3) ಒಟ್ಟಿಗೆ 66 ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದಿದ್ದಾರೆ. 41 ವರ್ಷದ ಸ್ವಿಸ್ ವಿಶ್ವ ಶೇಷ್ಠ ಟೆನ್ನಿಸ್ ಆಟಗಾರ ಕಳೆದ ವಾರ ನಿವೃತ್ತಿ ಘೋಷಿಸಿದರು.

2003 ವಿಂಬಲ್ಡನ್‌ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಫೆಡರರ್, ತಮ್ಮ 24 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ಅವರು ಒಟ್ಟು 6 ಆಸ್ಟ್ರೇಲಿಯನ್ ಓಪನ್, 8 ವಿಂಬಲ್ಡನ್, 5 ಯುಎಸ್ ಓಪನ್ ಪ್ರಶಸ್ತಿಗಳು ಮತ್ತು ಒಂದು ಫ್ರೆಂಚ್ ಓಪನ್ ಪ್ರಶಸ್ತಿಗಳ ಜೊತೆಗೆ 20 ಭಾರಿ ಗ್ರ್ಯಾನ್‌ಸ್ಲಾಮ್ ಗಳನ್ನ ಗೆದ್ದು ಬೀಗಿದ್ದಾರೆ. ಗೆದ್ದು ಬೀಗಿದ್ದಾರೆ.
ಪಂದ್ಯಕ್ಕೂ ಮುನ್ನ ರೋಜರ್ ತಮ್ಮ ವೃತ್ತಿ ಜೀವನದ ಕೊನೆಯ ಕ್ಷಣಗಳನ್ನು ಆನಂದಿಸಿದರು. ಲೇವರ್ ಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ರಾತ್ರಿ ಟೆನಿಸ್ ಫ್ಯಾಬ್-4 ಸ್ಟಾರ್ ಆಟಗಾರರಾದ ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮತ್ತು ಆಂಡಿ ಮರ್ರೆ ಅವರೊಂದಿಗೆ ಲಂಡನ್‌ನ ಬೀದಿಗಳನ್ನ ಸುತ್ತಿದ್ದಾರೆ. ‘ಸ್ನೇಹಿತರಾದ ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮತ್ತು ಆಂಡಿ ಮುರ್ರೆ ಅವರೊಂದಿಗೆ ಡಿನ್ನರ್‌ಗೆ ಹೋಗುತ್ತಿದ್ದೇನೆ’ ಎಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಫೋಟೋವೊಂದು ಇಂಟರ್ ನೆಟ್ ಅನ್ನೇ ಶೇಕ್ ಮಾಡುತ್ತಿದೆ. ಟ್ವಿಟರ್ ಲಕ್ಷಾಂತರ ಲೈಕ್‌ಗಳು, ಸಾವಿರಾರು ರೀಟ್ವೀಟ್‌ಗಳು ಮತ್ತು ಕಾಮೆಂಟ್‌ಗಳಿಂದ ಗಿಜಿಗುಡುತ್ತಿದೆ.








