ರೋಹಿಣಿ ಸಿಂಧೂರಿ ಕೆಲಸಗಾತಿ ಅಲ್ಲ, ಪ್ರಚಾರ ಪ್ರಿಯೆ : ಎ. ಮಂಜು
ಮೈಸೂರು : ರೋಹಿಣಿ ಸಿಂಧೂರಿ ಮೈಸೂರಿನಿಂದ ವರ್ಗಾವಣೆಯಾದರೂ ಅವರ ವಿರುದ್ಧ ರಾಜಕಾರಣಿಗಳು ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಆ ಸರದಿಗೆ ಮಾಜಿ ಸಚಿವ ಎ ಮಂಜು ಬಂದಿದ್ದು, ರೋಹಿಣಿ ಸಿಂಧೂರಿ ಕೆಲಸಗಾತಿ ಅಲ್ಲ, ಪ್ರಚಾರ ಪ್ರಿಯೆ ಅಂತಾ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಯಾರ ಪರವೂ, ವಿರುದ್ಧವೂ ಮಾತನಾಡಿಲ್ಲ. ಡಿಸಿ ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ, ಹಿರಿಯ ರಾಜಕಾರಣಿಗಳಿಗೆ ಗೌರವ ಕೊಡಲ್ಲ ಅಂತಾ ಹೇಳೋಕೆ ಬಂದಿದ್ದೆ.
ಒಬ್ಬ ಶಾಸಕರನ್ನ ಏಕವಚನದಲ್ಲಿ ಮಾತನಾಡೋದು ವೆರಿ ಬ್ಯಾಡ್. ಈ ರೀತಿಯ ವರ್ತನೆಯನ್ನು ರೋಹಿಣಿ ಸಿಂಧೂರಿ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಭೂ ಮಾಫಿಯಾ ಮಾಡಿದ್ದಾರೆ ಅಂತಾರೆ. ಆದ್ರೆ ಈವರೆಗೂ ಭೂ ಮಾಫಿಯಾ ಮಾಡಿದವರ ವಿರುದ್ಧ ಒಂದೇ ಒಂದು ಎಫ್ ಐಆರ್ ಆಗಿಲ್ಲ ಏಕೆ ಎಂದು ಎ ಮಂಜು ಪ್ರಶ್ನೆ ಮಾಡಿದರು.
ಎಲ್ಲರೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಆದರೆ ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿ ದಂಧೆ ಮಾಡಬಾರದು.
ಎಷ್ಟು ಅಧಿಕಾರಿಗಳು ಮೈಸೂರಿಗೆ ಬಂದು ಹೋಗಿದ್ದಾರೆ. ಈವರೆಗೂ ಭೂ ಮಾಫಿಯಾ ಮಾಡುವವರ ಮೇಲೆ ಎಫ್ ಐ ಆರ್ ಆಗಿಲ್ಲ ಯಾಕೆ ಎಂದರು.
ಇನ್ನು ಭೂ ಮಾಫಿಯಾ ಮಾಡಿದ್ದಾರೆ ಅಂತ ಡಿಸಿಯಾಗಿದ್ದ ರೋಹಿಣಿ ಹೇಳಿದ್ದಾರೆ. ಆದರೆ ಅವರ ಮೇಲೆ ಎಫ್ ಐಆರ್ ಯಾಕೆ ಮಾಡಿಸಿಲ್ಲ.
ಕೇವಲ ಪ್ರಚಾರಕ್ಕೆ ಮಾಡೋದಲ್ಲ. ಸಾರ್ವಜನಿಕ ಆಸ್ತಿ, ಸರ್ಕಾರದ ಆಸ್ತಿಯ ಬಗ್ಗೆ ಆನ್ ರೆಕಾರ್ಡ್ ಇರುತ್ತದೆ ಅದನ್ನು ರಕ್ಷಿಸಬೇಕು ರೋಹಿಣಿ ಸಿಂಧೂರಿ ವಿರುದ್ಧ ಬೆಂಕಿಕಾರಿದರು.