ಇಂದಿನಿಂದ ಕೆರಿಬಿಯನ್ನರ ಪ್ರದೇಶದಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತ ಹಾಗೂ ವೆಸ್ಟ್ ಇಂಡೀಸ್ ಸಜ್ಜಾಗಿ ನಿಂತಿವೆ. ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2023-25ರ ಕೂಟದ ಮೊದಲ ಪಂದ್ಯವಾಗಿರಲಿದೆ.
ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಸೋತ ಭಾರತ ತಂಡವು ಗೆಲುವಿನ ಹಾದಿಯನ್ನು ಕಂಡುಕೊಳ್ಳಲು ಯತ್ನಿಸುತ್ತಿದೆ. ಏಕದಿನ ವಿಶ್ವಕಪ್ ಅರ್ಹತಾ ಕೂಟದಿಂದಲೇ ಹೊರಬಿದ್ದ ವೆಸ್ಟ್ ವಿಂಡೀಸ್ ಕೂಡ ಗೆಲುವಿನ ಲಯವನ್ನು ಪಡೆಯಲು ತಯಾರಿಯನ್ನು ನಡೆಸಿದೆ.
ಈಗ ಪಂದ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಈ ಟೆಸ್ಟ್ ಸರಣಿಗೆ ಅಚ್ಚರಿಯೆಂಬಂತೆ ಅನುಭವಿ ಚೇತೇಶ್ವರ ಪೂಜಾರ ಅವರನ್ನು ಕೈ ಬಿಡಲಾಗಿದೆ. ಇನ್ನು ಈ ಋತುವಿನ ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ ಟೆಸ್ಟ್ ತಂಡಕ್ಕೆ ಸೇರಿಕೊಂಡಿದ್ದಾರೆ. ಜೈಸ್ವಾಲ್ ತಂಡ ಸೇರಿರುವ ಕುರಿತು ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು, ನನ್ನೊಂದಿಗೆ ಆರಂಭಿಕರಾಗಿ ಜೈಸ್ವಾಲ್ ಆಡಲಿದ್ದಾರೆ. ಶುಭಮನ್ ಗಿಲ್ ಅವರು ವನ್ ಡೌನ್ ಸ್ಥಾನಕ್ಕೆ ಬರುತ್ತಾರೆ. ಗಿಲ್ ಅವರು ಈ ಕುರಿತು ಕೋಚ್ ರಾಹುಲ್ ಅವರೊಂದಿಗೆ ಚರ್ಚಿಸಿದ್ರೆ. ನಾನು ಕೂಡ ಹಲವು ಬಾರಿ ವನ್ ಡೌನ್ ಅಥವಾ 4ನೇ ಕ್ರಮಾಂಕದಲ್ಲಿ ಆಡಲು ಬಂದಿದ್ದೇನೆ. ಈಗ ತಂಡಕ್ಕಾಗಿ ಇದನ್ನು ಮಾಡುತ್ತಿದ್ದೇನೆ. ಜೈಸ್ವಾಲ್ ಓಪನಿಂಗ್ ಕಣಕ್ಕೆ ಇಳಿದರೆ ಎಡ-ಬಲ ಜೊತೆಯಾಟ ಇರುದ್ದತೆ ಎಂದು ಹೇಳಿದ್ದಾರೆ.