Virat kohli ಫಿಟ್ ನೆಸ್ ಬಗ್ಗೆ Rohit ಫ್ಯಾನ್ಸ್ ಟ್ರೋಲ್.. Rohit Fans
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ವಿರಾಟ್ ಕೊಹ್ಲಿ ದೂರ ಉಳಿದಿರೋದನ್ನ ಅವರ ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
ವಿರಾಟ್ ಕ್ರಿಕೆಟೇತರ ಕಾರಣಗಳಿಂದಲೇ ಪಂದ್ಯದಿಂದ ದೂರ ಉಳಿದಿದ್ದಾರೆ ಎಂಬ ಅನುಮಾನ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪಂದ್ಯದಿಂದ ದೂರ ಉಳಿಯಲು ಒಂದು ವೇಳೆ ಬೆನ್ನು ನೋವೇ ಕಾರಣ ಎಂದಾದರೆ… ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಪ್‌ಡೇಟ್ ಏಕೆ ನೀಡಲಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಎರಡನೇ ಟೆಸ್ಟ್ ಗಾಗಿ ಕೊಹ್ಲಿ ನೆಟ್ಸ್ನಲ್ಲಿ ಬೆವರಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು.
Kohli fans were bragging about his fitness and now their faces are in mud .. poetic justice#INDvsSA#INDvSA#SAvsIND#SAvIND
— The Mishra 🇮🇳 (@TheMishra_IN) January 3, 2022
ಹೀಗಾಗಿ ವಿರಾಟ್ ಅಭಿಮಾನಿಗಳು ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಅಬ್ಬರಿಸೋದು ಪಕ್ಕ ಎಂದು ಪಂದ್ಯಕ್ಕಾಗಿ ಕಾಯುತ್ತಿದ್ದರು.
ಆದ್ರೆ ಟಾಸ್ ವೇಳೆ ವಿರಾಟ್ ಬದಲಿಗೆ ರಾಹುಲ್ ಟೀಂ ಇಂಡಿಯಾದ ನಾಯಕರಾಗಿ ಕಾಣಿಸಿಕೊಂಡರು.
ಅಲ್ಲದೇ ವಿರಾಟ್ ಬೆನ್ನು ನೋವಿನಿಂದ ಈ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ ಎಂದು ರಾಹುಲ್ ತಿಳಿಸಿದ್ದು, ವಿರಾಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಇದೀಗ ಫಿಟ್ ನೆಸ್ ವಿಚಾರವಾಗಿ ಕೊಹ್ಲಿ ಹೇಟರ್ಸ್ ವಿರಾಟ್ ಕೊಹ್ಲಿ ಅವರನ್ನ ಟ್ರೋಲ್ ಮಾಡಲು ಆರಂಭಿಸಿದ್ದಾರೆ.
Virat shared pictures, trained at nets. No way he has a fitness issue. No mention of it in yesterday's PC. #Kohli
— Arpan (@ThatCricketHead) January 3, 2022
ಅದರಲ್ಲೂ ಸೀಮಿತ ಓವರ್ ಗಳ ನಾಯಕ ರೋಹಿತ್ ಶರ್ಮಾ, ಸೋಶಿಯಲ್ ಮೀಡಿಯಾದಲ್ಲಿ ಚಿತ್ರವಿಚಿತ್ರ ಮಿಮ್ಸ್ ಹಾಕುತ್ತಿದ್ದಾರೆ.
ಜೊತೆಗೆ ವಿರಾಟ್ ಅಭಿಮಾನಿಗಳ ಕಾಲೆಳೆಯುತ್ತಿದ್ದಾರೆ. ವಿರಾಟ್ ಫಿಟ್ ನೆಸ್ ಬಗ್ಗೆ ಕೊಚ್ಚಿಕೊಳ್ಳುತ್ತಿದ್ರೀ..
ಈಗ ನಿಮ್ಮ ಮುಖ ಎಲ್ಲಿ ಇಟ್ಕೋತೀರಾ..? ನಿಮ್ಮ ನಾಯಕ ಹೊಸ ವರ್ಷದ ಮೊದಲ ಪಂದ್ಯದಿಂದಲೇ ಹೊರ ಬಿದ್ದಿದ್ದಾರೆ. ಈಗ ಏನ್ ಹೇಳ್ತೀರಾ..? ನಿಮ್ಮ ಅಹಂಕಾರ ತಗ್ಗೀತಾ ಎಂದು ವ್ಯಂಗ್ಯವಾಡುತ್ತಿದ್ದಾರೆ.








