Rohit-sharma | ವಿಶ್ವದಾಖಲೆ ನಿರ್ಮಿಸಲು ರೋಹಿತ್ ಗೆ ಬೇಕು 1 ಸಿಕ್ಸರ್
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಿ 20 ಮಾದರಿಯಲ್ಲಿ ಸಾಧಿಸಿರುವ ದಾಖಲೆಗಳ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ.
ತಮ್ಮ 15 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ನಲ್ಲಿ ಹಿಟ್ ಮ್ಯಾನ್ ಇಲ್ಲಿಯವರೆಗೂ 3620 ರನ್ ಗಳನ್ನು ಸಾಧಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು, 28 ಅರ್ಧಶತಕಗಳಿವೆ.
ಇನ್ನು ಟಿ 20 ಯಲ್ಲಿ ಹಿಟ್ ಮ್ಯಾನ್ ಅತ್ಯಧಿಕ ಸ್ಕೋರ್ 118. ಅದೇ ರೀತಿ ಈ ಮಾದರಿಯಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಈಗಾಗಲೇ 323 ಬೌಂಡರಿಗಳನ್ನು ಸಾಧಿಸಿದ್ದಾರೆ. 171 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ವದೇಶದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ಸಿರೀಸ್ ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ ಬರೆಯುವ ಸಾಧ್ಯತೆಗಳಿವೆ.
ಮೊದಲ ಪಂದ್ಯದಲ್ಲಿ ಇನ್ನೊಂದು ಸಿಕ್ಸರ್ ಸಿಡಿಸಿದ್ರೆ ನ್ಯೂಜಿಲೆಂಡ್ ಓಪನರ್ ಮಾರ್ಟಿನ್ ಗಪ್ಟಿಲ್ ದಾಖಲೆಯನ್ನು ಮುರಿಯಲಿದ್ದಾರೆ.
ಸದ್ಯ ರೋಹಿತ್ ಶರ್ಮಾ 171 ಸಿಕ್ಸರ್ ಗಳನ್ನು ಬಾರಿಸಿದ್ದರೇ ಮಾರ್ಟಿನ್ ಗಪ್ಟಿಲ್ 172 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ವಿಂಡೀಸ್ ಬ್ಯಾಟರ್ ಕ್ರಿಸ್ ಗೇಲ್ 124, ಇಯಾನ್ ಮಾರ್ಗನ್ 120, ಆರೋನ್ ಫಿಂಚ್ 117 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.