Rohit Sharma | ಹ್ಯಾಟ್ರಿಕ್ ಸೋಲಿಗೆ ರೋಹಿತ್ ಶರ್ಮಾ ಗರಂ…

1 min read

Rohit Sharma | ಹ್ಯಾಟ್ರಿಕ್ ಸೋಲಿಗೆ ರೋಹಿತ್ ಶರ್ಮಾ ಗರಂ…

ಮುಂಬೈ ಇಂಡಿಯನ್ಸ್ ಐಪಿಎಲ್-2022ರಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತಿದೆ. ವಿಶೇಷವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಬಿಟ್ಟು ಇನ್ನುಳಿದ ಬ್ಯಾಟರ್ ಗಳ ವಿಕೆಟ್ ಗಳನ್ನ ಮುಂಬೈ ಬೌಲರ್ ಗಳು ಬೇಗ ಎಗರಿಸಿದರು. ಇದರಿಂದ ಗೆಲುವು ನಮ್ಮದೇ ಎಂದುಕೊಂಡಿದ್ದ ರೋಹಿತ್ ಶರ್ಮಾಗೆ ಪ್ಯಾಟ್ ಕಮ್ಮಿನ್ಸ್ ಶಾಕ್ ನೀಡಿದರು.  ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕಮಿನ್ಸ್ 15 ಎಸೆತಗಳಲ್ಲಿ 56 ರನ್ ಗಳಿಸಿ ಮುಂಬೈ ಕೈಯಲ್ಲಿದ್ದ ಗೆಲುವನ್ನ ಕಿತ್ತುಕೊಂಡರು.

ಅದರಲ್ಲೂ ಮುಂಬೈ ಬೌಲರ್ ಸ್ಯಾಮ್ಸ್ ಒಂದೇ ಓವರ್ ನಲ್ಲಿ ಪ್ಯಾಟ್ ಕಮಿನ್ಸ್ 35 ರನ್ ಚಚ್ಚಿದ್ದು,  ಮುಂಬೈಗೆ ಆಘಾತ ನೀಡಿತು.

ಇದರೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ ಒಂದೇ ಒಂದು ಗೆಲುವು ಕಾಣದೇ ಮಂಕಾಗಿದೆ.  

ಇನ್ನು ಪಂದ್ಯದ ಬಳಿಕ ರೋಹಿತ್ ಶರ್ಮಾ ಮಾತನಾಡುತ್ತಾ, ತಮ್ಮ ರಣತಂತ್ರಗಳನ್ನು ಮೈದಾನದಲ್ಲಿ ಅನುಷ್ಟಾನಗೊಳಿಸಲುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು. ಇದೇ ವೇಳೆ ಪ್ಯಾಟ್ ಕಮ್ಮಿನ್ಸ್ ಅವರನ್ನು ರೋಹಿತ್ ಶರ್ಮಾ ಹಾಡಿ ಹೊಗಳಿದ್ದಾರೆ.

ಕಮ್ಮಿನ್ಸ್ ಇಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ.  ಕೆಕೆಆರ್‌ ನ ಯಶಸ್ಸಿನ ಎಲ್ಲಾ ಶ್ರೇಯವೂ ಅವರಿಗೆ ಸಲ್ಲುತ್ತದೆ. 15ನೇ ಓವರ್ ವರೆಗೂ ಆಟ ನಮ್ಮ ಕೈಯಲ್ಲಿತ್ತು. ಆದರೆ ಕಮ್ಮಿನ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಈ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ನಿಜ ಹೇಳಬೇಕಾದ್ರೆ ನಮಗೆ ಉತ್ತಮ ಆರಂಭ ಸಿಗಲಿಲ್ಲ.  ಬೌಲಿಂಗ್‌ನಲ್ಲಿ ನಮ್ಮ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ ಎಂದರು.

ಇದೇ ವೇಳೆ ಪ್ರತಿ ಬಾರಿ ಸೋತ ಕ್ಯಾಪ್ಟನ್ ಸ್ಥಾನದಲ್ಲಿ ಇರಲು ಬಯಸುವುದಿಲ್ಲ ಎನ್ನುತ್ತಾ ರೋಹಿತ್ ಹತಾಶೆಯ ನಗು ಬೀರಿದರು.

ಇದಕ್ಕೂ ಮುನ್ನ ಡ್ಯಾನಿ ಮಾರಿಸನ್ ಪ್ರಶ್ನೆ ಸರಿಯಾಗಿ ಕೇಳಿಸದೇ ಇದ್ದದ್ದಕ್ಕೆ ಸಿಟ್ಟಾದ ರೋಹಿತ್ ಶರ್ಮಾ, ಸ್ವಲ್ಪ ಸೌಂಡ್ ಜಾಸ್ತಿ ಮಾಡಿ ಎಂದು ಸಿಟ್ಟಾದ್ರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. rohit-sharma-never-expected-cummins-play

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd