Rohit Sharma : ಬೌಲಿಂಗ್ & ಬ್ಯಾಟಿಂಗ್ ನಲ್ಲಿ ಹಾರ್ದಿಕ್ ಮ್ಯಾಜಿಕ್
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿರುವ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹರ್ಷ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದೊಂದಿಗೆ ಟೀಂ ಇಂಡಿಯಾ ಕೈ ವಶ ಮಾಡಿಕೊಂಡಿದೆ.
ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಮಾತನಾಡಿ, ಮಿಡಲ್ ಆರ್ಡರ್ ನಲ್ಲಿ ಹಾರ್ದಿಕ್ ಪಂಡ್ಯ, ಪಂತ್ ಹೆಚ್ಚಾಗಿ ಆಡಿಲ್ಲ.

ಆದ್ರೂ ಈ ಪಂದ್ಯದಲ್ಲಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ನಿರ್ಣಾಯಕ ಇನ್ನಿಂಗ್ಸ್ ಕಟ್ಟಿದರು.
ಯಾವುದೇ ಭಯವಿಲ್ಲದೇ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದಾರೆ. ಒಳ್ಳೆ ಒಳ್ಳೆ ಶಾಟ್ ಗಳನ್ನಾಡಿದ್ರು.
ಇದೇ ವೇಳೆ ಚಹಾಲ್ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ನಮ್ಮ ತಂಡಕ್ಕೆ ಚಹಾಲ್ ಪ್ರಮುಖ ಆಟಗಾರ.
ಎಲ್ಲಾ ಫಾರ್ಮೆಟ್ ಗಳಲ್ಲಿ ಚಹಲ್ ಗೆ ಒಳ್ಳೆ ಅನುಭವವಿದೆ.
ವಿಶ್ವಕಪ್ ನಂತರ ಹಾರ್ದಿಕ್ ಪುಟಿದ್ದೇಳಿದ ರೀತಿ ಜಿನಕ್ಕೂ ಪ್ರಸಂಶನೀಯ.
ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಹಾರ್ದಿಕ್ ಮ್ಯಾಜಿಕ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.