Rohit Sharma – ಪಂದ್ಯ ಗೆದ್ದ ಬಳಿಕ ರೋಹಿತ್ ಹೇಳಿದ್ದಿಷ್ಟು
ಟಿ 20 ವಿಶ್ವಕಪ್ ಭಾಗವಾಗಿ ಸೂಪರ್ 12 ಹಂತದ ಮ್ಯಾಚ್ ನಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ 71 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಐದು ಮ್ಯಾಚ್ ಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಎಂಟು ಅಂಕಗಳೊಂದಿಗೆ ಟೀಂ ಇಂಡಿಯಾ ಗ್ರೂಪ್ 1 ರ ಟಾಪರ್ ಆಗಿ ಸೆಮೀಸ್ ಸೇರಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್ ಅರ್ಧಶತಕ ಸಾಧಿಸಿದರು.
ಇದರೊಂದಿಗೆ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು.
ಆ ನಂತರ ಬೌಲರ್ ಗಳ ಕಟ್ಟುನಿಟ್ಟಿನ ದಾಳಿತಯಿಂದಾಗಿ ಜಿಂಬಾಬ್ವೆ ತಂಡ 115 ರನ್ ಗಳಿಗೆ ಆಲೌಟ್ ಆಯ್ತು.
ಮ್ಯಾಚ್ ನಂತರ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಮ್ಯಾಚ್ ಗೂ ಮೊದಲೇ ನಾವು ಸೆಮೀಸ್ ಗೆ ಕ್ವಾಲಿಫೈ ಆಗಿದ್ದೇವೆ ಅಂತಾ ಗೊತ್ತು.
ಆದ್ರೆ ಗ್ರೂಪ್ ಟಾಪರ್ ಆಗಿ ಸೆಮೀಸ್ ಗೆ ಹೋಗಬೇಕು ಅನ್ನೋದು ನಮ್ಮ ಗುರಿಯಾಗಿತ್ತು. ಇನ್ನು ಜಿಂಬಾಬ್ವೆ ವಿರುದ್ಧದ ಮ್ಯಾಚ್ ನಲ್ಲಿ ತಂಡ ಆಲ್ ರೌಂಡ್ ಪ್ರದರ್ಶನ ನೀಡಿದ್ದು ಖುಷಿ ಇದೆ.
ಕೆ.ಎಲ್ ರಾಹುಲ್ ಜೊತೆ ಸೂರ್ಯ ಕುಮಾರ್ ತಮ್ಮ ಫಾರ್ಮ್ ಮುಂದುವರೆಸಿದ್ದು ನಮಗೆ ತುಂಬಾ ಅನುಕೂಲ.
ಇನ್ನು ಸೂರ್ಯ ಇವತ್ತು ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ್ರು, ಯಾವುದೇ ಒತ್ತಡವಿಲ್ಲದೇ ಸೂರ್ಯ ಬ್ಯಾಟ್ ಬೀಸುತ್ತಾರೆ.
ಇನ್ನು ಇಂಗ್ಲೆಂಡ್ ನಂತಹ ಬಲಿಷ್ಟ ತಂಡಗಳೊಂದಿಗೆ ಸೆಮೀಸ್ ಆಡುವುದಿಂದ ಸೂರ್ಯ ಫಾರ್ಮ್ ನಮಗೆ ಮುಖ್ಯವಾಗಿದೆ.
ಕೆಲವು ದಿನಗಳಿಂದ ಇಂಗ್ಲೆಂಡ್ ಒಳ್ಳೆಯ ಕ್ರಿಕೆಟ್ ಆಡುತ್ತಿದೆ. ಅವರನ್ನ ಎದುರಿಸೋದು ಅಂತಾ ಸವಾಲಿನ ಸಂಗತಿಯಾಗಿದೆ ಎಂದಿದ್ದಾರೆ.
ಇಲ್ಲಿಯವರೆಗೂ ನಮ್ಮ ಆಟ ಉತ್ತಮವಾಗಿದೆ. ಇನ್ಮುಂದೆ ಸೆಮೀಸ್ ನಲ್ಲಿ ಮತ್ತಷ್ಟು ಜಾಗೃಕತೆಯಿಂದ ಆಡಬೇಕಿದೆ.
ಸೂಪರ್ 12 ರ ಹಂತದಲ್ಲಿ ಮಾಡಿದ ತಪ್ಪುಗಳನ್ನು ಕರೆಕ್ಟ್ ಮಾಡಿಕೊಂಡು ಸೆಮೀಸ್ ಗೆ ಸಿದ್ಧವಾಗಬೇಕಾಗಿದೆ ಎಂದು ರೋಹಿತ್ ಹೇಳಿದ್ದಾರೆ.