Rohit – Dhawan | ಏಕದಿನ ವಿಶ್ವಕಪ್ ಗೆ ಇವರೇ ಟೀಂ ಇಂಡಿಯಾದ ಆರಂಭಿಕರು
ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಟಿ 20 ಕೆರಿಯರ್ ಗೆ ಆಲ್ ಮೋಸ್ಟ್ ಎಂಡ್ ಕಾರ್ಡ್ ಬಿದ್ದಂತೆ. ಕಳೆದ ಜುಲೈನಲ್ಲಿ ಭಾರತದ ಪರ ಶಿಖರ್ ಧವನ್ ಕೊನೆಯ ಟಿ 20 ಪಂದ್ಯವನ್ನಾಡಿದರು.
ಅಂದಿನಿಂದ ಶಿಖರ್ ಧವನ್ ಅವರನ್ನು ಟೀಂ ಇಂಡಿಯಾದ ಸೆಲೆಕ್ಟರ್ ಗಳು ಪಕ್ಕಕ್ಕೆ ಇಟ್ಟಿದ್ದಾರೆ.
ಧವನ್ ಟಿ 20 ಗೆ ದೂರವಾಗಿದ್ದರೂ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಸ್ಥಾನ ಪಡೆದುಕೊಳ್ಳುತ್ತಲೇ ಇದ್ದಾರೆ.
ಧವನ್ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.
ರೋಹಿತ್ ಶರ್ಮಾ ಸಾರಥ್ಯದಲ್ಲಿ ಭಾರತ ಹಿರಿಯರ ಟಿ 20 ವಿಶ್ವಕಪ್ 2022 ಕ್ಕಾಗಿ ಆಸ್ಟ್ರೇಲಿಯಾಗೆ ಪಯಣಿಸಿದೆ.
ಹೀಗಾಗಿ ಧವನ್ ಟೀಂ ಇಂಡಿಯಾದ ಸಾರಥಿಯಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುತ್ತಿದ್ದಾರೆ.
ಇದು ಹೀಗಿದ್ದರೇ ಏಕದಿನ ವರ್ಲ್ಡ್ ಕಪ್ 2023 ಭಾರತದಲ್ಲಿ ನಡೆಯಲಿದೆ.
ಈ ಮೆಗಾ ಈವೆಂಟ್ ಗೆ ಭಾರತ ಕ್ರಿಕೆಟ್ ತಂಡದಲ್ಲಿ ಧವನ್ ಗೆ ಖಂಡಿತವಾಗಿ ಸ್ಥಾನ ಸಿಗುತ್ತದೆ ಎಂದು ಟೀಂ ಇಂಡಿಯಾದ ಮಾಜಿ ಸೆಲೆಕ್ಟರ್ ಸಾಬ ಕರೀಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ರೋಹಿತ್ ಶರ್ಮಾ ಜೊತೆಯಾಗಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಇಂಡಿಯಾ ನ್ಯೂಸ್ ಜೊತೆ ಮಾತನಾಡಿದ ಕರೀಂ, ಏಕದಿನ ವಿಶ್ವಕಪ್ ಗೆ ಭಾರತ ತಂಡದಲ್ಲಿ ಶಿಖರ್ ಧವನ್ ಅವರ ಸ್ಥಾನ ಈಗಾಗಲೇ ಫಿಕ್ಸ್ ಆಗಿದೆ.
ಆತ ಆದ್ಭುತವಾದ ಆಟಗಾರ. ಆತ ವಿಫಲವಾಗುವ ಪಂದ್ಯಗಳು ಒಂದು ಅಥವಾ ಎರಡು ಇರುತ್ತವೆ. ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ, ಧವನ್ ಆರಂಭಿಕರಾಗಿ ಇರಬೇಕು ಎಂದು ಟೀಂ ಇಂಡಿಯಾದ ಸೆಲೆಕ್ಟರ್ ಗಳು ಈಗಾಗಲೇ ನಿರ್ಣಯಿಸಿದ್ದಾರೆ.