ಪಂದ್ಯ ಸೋತರೂ ಪರವಾಗಿಲ್ಲ, ಬದಲಾವಣೆ ಖಚಿತ rohit-sharma-shikhar dhawan rishabh pant
‘‘ಮುಂದಿನ ಪಂದ್ಯಕ್ಕೆ ಶಿಖರ್ ಧವನ್ ಅಂತಿಮ ತಂಡದಲ್ಲಿರುತ್ತಾರೆ. ಕೆಲವು ಪಂದ್ಯಗಳಲ್ಲಿ ಸೋತರೂ ಪರವಾಗಿಲ್ಲ ಆದರೆ… ಕೆಲವು ಪ್ರಯೋಗಗಳನ್ನು ಮಾಡಬೇಕು ಎಂದು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಕೆ.ಎಲ್ ರಾಹುಲ್ ವಾಪಸ್ ಆದ್ರೂ. ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಂತ್ ಗೆ ಓಪನರ್ ಆಗಿ ಬಡ್ತಿ ನೀಡಲಾಗಿತ್ತು.
ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ನಾವು ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿದ್ದೇವೆ.
ಹೀಗಾಗಿ ಮುಂದಿನ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆಗಳನ್ನು ಮಾಡುತ್ತೇವೆ. ಆರಂಭಿಕರಾಗಿ ಶಿಖರ್ ಧವನ್ ಅಂತಿಮ ತಂಡದಲ್ಲಿ ಇರುತ್ತಾರೆ.
ಇದಾದ ಬಳಿಕವೂ ತಂಡದಲ್ಲಿ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಪಂದ್ಯಗಳನ್ನು ಸೋತರೂ ಪರವಾಗಿಲ್ಲ. ತಂಡಕ್ಕಾಗಿ ಬದಲಾವಣೆ ಮಾಡುತ್ತಲೇ ಇರುತ್ತೇವೆ ಎಂದಿದ್ದಾರೆ.
ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 40 ರನ್ ಗಳಿಂದ ಜಯ ಸಾಧಿಸಿದೆ. ಈ ಮೂಲಕ ಮೂರು ಮ್ಯಾಚ್ ಗಳ ಸರಣಿಯನ್ನು 2-0 ಅಂತರದೊಂದಿಗೆ ಕೈವಶ ಮಾಡಿಕೊಂಡಿದೆ.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದರು. ರಿಷಬ್ ಪಂತ್ ಅವರನ್ನು ಓಪನರ್ ಆಗಿ ಕಣಕ್ಕಿಳಿಸಿದ್ದರು.
ಆದ್ರೆ ಪಂತ್ ಓಪನರ್ ಆಗಿ ಮಿಂಚುವಲ್ಲಿ ವಿಫಲರಾದರು. 34 ಎಸೆತಗಳನ್ನು ಎದುರಿಸಿದ ಪಂತ್ 18 ರನ್ ಗಳಿಸಿ ಔಟ್ ಆದರು.
ಇತ್ತ ರೆಗ್ಯುಲರ್ ಆರಂಭಿಕ ಕೆ.ಎಲ್.ರಾಹುಲ್ ನಾಲ್ಕನೇ ಸ್ಥಾನದಲ್ಲಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದರು. ಆದ್ರೆ ಒಂದು ರನ್ ನಿಂದ ಅರ್ಧಶತಕ ವಂಚಿತರಾಗಿದ್ದರು.









