ರೋಹಿತ್ ಅಲಭ್ಯ.. ಏಕದಿನ ಸರಣಿ ರದ್ದುಗೊಳಿಸಿ Rohit saaksha tv
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೊದಲು ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದಾಗಿ ಆಫ್ರಿಕಾ ಸಮಸ್ಯೆಯಿಂದ ದೂರ ಉಳಿದಿದ್ದಾರೆ. ಇದೀಗ ಇತ್ತೀಚೆಗೆ ಸೀಮಿತ ಓವರ್ ಗಳ ನಾಯಕರಾಗಿ ಆಯ್ಕೆ ಆದ ರೋಹಿತ್ ಶರ್ಮಾ, ಆಫ್ರಿಕಾ ಟೂರ್ನಿಯಿಂದ ಹೊರಗುಳಿಸಿದ್ದಾರೆ.
ಥ್ರೋಡೌನ್ ಪ್ರಾಕ್ಟೀಸ್ ವೇಳೆ ರೋಹಿತ್ ಗೆ ಗಾಯವಾಗಿದ್ದು, ನಾಲ್ಕು ವಾರ ವಿಶ್ರಾಂತಿ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರು ಆಫ್ರಿಕಾ ವಿಮಾನ ಹೇರುವುದು ಅನುಮಾನವಾಗಿದೆ. ಅದೇ ರೀತಿ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ದೂರ ಉಳಿಯಲಿದ್ದಾರೆ. ಹೀಗಾಗಿ ತಂಡದಲ್ಲಿ ಸ್ಟಾರ್ ಆಟಗಾರರು ಇಲ್ಲದ ಕಾರಣದಿಂದಾಗಿ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ರದ್ದುಗೊಳಿಸಬೇಕೆಂದು ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.
ಟೀಂ ಇಂಡಿಯಾದಿಂದ ರೋಹಿತ್ ದೂರವಾಗಿರೋದು ತಂಡಕ್ಕೆ ಬಹಳ ನಷ್ಟವಾಗಿದೆ. ಸಾಮಾನ್ಯವಾಗಿ ವಿದೇಶಿ ಪಿಚ್ ಗಳಲ್ಲಿ ಬೌನ್ಸ್ ಇರುತ್ತದೆ. ಅಲ್ಲಿ ನಮ್ಮವರು ಆಡಲು ತುಂಬಾ ಕಷ್ಟಪಡಬೇಕಾಗುತ್ತದೆ. ಆಫ್ರಿಕಾ ತಂಡದಲ್ಲಿ ಕಗಿಸೊ ರಬಾಡ, ಲೂಂಗಿ ಎಂಗಿಡೀ ಎಂತಹ ಫಾಸ್ಟ್ ಬೌಲರ್‌ಗಳು ಇದ್ದಾರೆ. ಆದ್ರೆ ನಮ್ಮಲ್ಲಿ ಪ್ರಮುಖ ಆಟಗಾರರು ಸರಣಿಯಿಂದ ದೂರ ಉಳಿದಿದ್ದಾರೆ. ಹೀಗಾಗಿ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ರದ್ದುಗೊಳಿಸಬೇಕು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
“ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರಾಹುಲ್ ಚಹಾರ್ ಲಭ್ಯವಿಲ್ಲ. ಗಿಲ್ ಗಾಯದಿಂದ ಸಂಪೂರ್ಣವಾಗಿ ಯಾವಾಗ ಚೇತರಿಸಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ರೋಹಿತ್ ಶರ್ಮಾ ಕೂಡ ಗಾಯಗೊಂಡಿರುವುದರಿಂದ ದಕ್ಷಿಣಾಫ್ರಿಕಾ ಪ್ರವಾಸವನ್ನು ರದ್ದುಪಡಿಸಿ ಎಂದು ಚೋಪ್ರಾ ಒತ್ತಾಯಿಸಿದ್ದಾರೆ.
ಇನ್ನು ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ದೂರವಾಗಿರುವುದು ಟೀಂ ಇಂಡಿಯಾಗೆ ದೊಡ್ಡ ಹೊಡೆತವಾಗಿದೆ. ರೋಹಿತ್ ಈ ವರ್ಷ ಟೆಸ್ಟ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಈಗ ಗಿಲ್, ರೋಹಿತ್ ಗಾಯಗೊಂಡಿರುವುದರಿಂದ ಮಯಾಂಕ್ ಅಗರ್ ವಾಲ್, ಕೆ.ಎಲ್ ರಾಹುಲ್ ಓಪನ್ ಮಾಡುತ್ತಾರೆ ಎಂದು ಚೋಪ್ರಾ ತಿಳಿಸಿದ್ದಾರೆ.