ADVERTISEMENT
Wednesday, May 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಧುನಿಕ ಕ್ರಿಕೆಟ್ ನ ಆರಂಭಿಕ ರಣಬೇಟೆಗಾರರು.. ರೋಹಿತ್ ಗುಡುಗು- ವಿರಾಟ್ ಮಿಂಚು.. ರನ್ ಮಳೆ ಗ್ಯಾರಂಟಿ..?

admin by admin
March 21, 2021
in Newsbeat, Sports, ಕ್ರೀಡೆ
VIRAT ROHITH TEAM INDIA
Share on FacebookShare on TwitterShare on WhatsappShare on Telegram

ಆಧುನಿಕ ಕ್ರಿಕೆಟ್ ನ ಆರಂಭಿಕ ರಣಬೇಟೆಗಾರರು.. ರೋಹಿತ್ ಗುಡುಗು- ವಿರಾಟ್ ಮಿಂಚು.. ರನ್ ಮಳೆ ಗ್ಯಾರಂಟಿ..?

ಗುಡುಗು -ಸಿಡಿಲು ಬಂದಾಗ ಮಳೆಯಾಗೋದು ಸಹಜ..ಹಾಗಂತ ಮಳೆ ಬೀಳಲೇಬೇಕು ಅಂತ ಏನಿಲ್ಲ. ಆದ್ರೆ ಗುಡುಗಿನ ಶಬ್ಧ, ಸಿಡಿಲಿನ ಕಿಡಿಗೆ ಬೆಚ್ಚಿಬೀಳಲೇಬೇಕು.. ಈ ಸನ್ನಿವೇಶಗಳು ಇಂಗ್ಲೆಂಡ್ ಮತ್ತು ಭಾರತ ತಂಡದ ನಡುವಿನ ಐದನೇ ಟಿ-ಟ್ವೆಂಟಿ ಪಂದ್ಯದಲ್ಲಿ ನಡೆದಿದ್ದವು.

Related posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

May 6, 2026
ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

May 6, 2026

ಹೌದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸಿದಾಗ ಗುಡುಗು -ಸಿಡಿಲು ಒಂದಾದಂತೆ ಭಾಸವಾಯ್ತು. ರೋಹಿತ್ ಶರ್ಮಾ ಆರಂಭದಲ್ಲೇ ಗುಡುಗಿದ್ರೆ, ವಿರಾಟ್ ಕೊಹ್ಲಿ ಸಿಡಿಲಿನಂತೆ ಇನಿಂಗ್ಸ್ ಕೊನೆಯ ತನಕ ಇಂಗ್ಲೀಷ್ ಬೌಲರ್ ಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ರು.

ನಿಜ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಇದೊಂದು ರೀತಿಯಲ್ಲಿ ವಿಶ್ವ ಕ್ರಿಕೆಟ್ ಅನ್ನು ಅಚ್ಚರಿಯನ್ನುಂಟು ಮಾಡಿದ್ರೆ, ಕ್ರಿಕೆಟ್ ಅಭಿಮಾನಿಗಳು ಟಿ-ಟ್ವೆಂಟಿ ಕ್ರಿಕೆಟ್ ನ ರಸದೌತಣ ಪಕ್ಕಾ ಅಂದುಕೊಂಡಿದ್ದರು. ಅದನ್ನು ರೋಹಿತ್ ಮತ್ತು ವಿರಾಟ್ ಹುಸಿಗೊಳಿಸಲಿಲ್ಲ.

ಆದ್ರೆ ಇದೊಂದು ರೀತಿಯಲ್ಲಿ ವಿಭಿನ್ನ ಪ್ರಯೋಗ… ಟೀಮ್ ಇಂಡಿಯಾದ ಹೆಡ್ ಕೋಚ್ ಮತ್ತು ಟೀಮ್ ಮ್ಯಾನೇಜ್‍ಮೆಂಟ್ ನ ನಿರ್ಧಾರಕ್ಕೆ ಭೇಷ್ ಅನ್ನಲೇಬೇಕು.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಶಕಗಳಿಂದ ಜೊತೆಯಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಆದ್ರೆ ಇವರಿಬ್ಬರು ಯಾವತ್ತೂ ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸಿಲ್ಲ. (ನೆನಪಿಗೆ ಬರುತ್ತಿಲ್ಲ) ಆದ್ರೆ ಇಂಗ್ಲೆಂಡ್ ವಿರುದ್ಧದ ಐದನೇ ಟಿ=-ಟ್ವೆಂಟಿ ಪಂದ್ಯದಲ್ಲಿ ಇಂಥಹ ಒಂದು ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿಯಾದ್ರೂ ಮುಂದಿನ ದಿನಗಳಲ್ಲಿ ಇವರಿಬ್ಬರು ಇನಿಂಗ್ಸ್ ಆರಂಭಿಸಿದ್ರೆ ಹೇಗೆ ಅನ್ನೋ ಕುತೂಹಲವಂತೂ ಇದ್ದೇ ಇದೆ.
rohith sharma team india saakshatvನಾಯಕ -ಉಪನಾಯಕನ ಜುಗುಲ್ ಬಂಧಿಗೆ ಕ್ರಿಕೆಟ್ ಜಗತ್ತು ಫಿಧಾ ಆಗಿಬಿಟ್ಟಿದೆ. ಯಾಕಂದ್ರೆ ಈ ಹಿಂದೆ ನಾವು ಜಯಸೂರ್ಯ – ಕಲುವಿತರಣ, ಸಚಿನ್ -ಗಂಗೂಲಿ, ಸಚಿನ್ -ಸೆಹ್ವಾಗ್, ಗಿಲ್ ಕ್ರಿಸ್ಟ್ – ಮ್ಯಾಥ್ಯೂ ಹೇಡನ್ ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಅಬ್ಬರದ ಆರಂಭದ ನೀಡಿದಂತ ಆರಂಭಿಕ ಆಟಗಾರರ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ನೋಡಿದ್ದೇವೆ. ಆಧುನಿಕ ಕ್ರಿಕೆಟ್ ನಲ್ಲಿ ತಡವಾಗಿ ಈಗ ರೋಹಿತ್ ಮತ್ತು ವಿರಾಟ್ ಕೊಹ್ಲಿಯ ಆರಂಭಿಕ ಜೊತೆಯಾಟದ ರಿಸರ್ಹಸಲ್ ಅನ್ನು ಗಮನಿಸಿದ್ದೇವೆ. ಇದೀಗ ಇದೇ ರಿಹರ್ಸಲ್ ವರ್ಕ್ ಔಟ್ ಆಗಿ ಮುಂದಿನ ದಿನಗಳಲ್ಲಿ ಇದೇ ಜೊತೆಯಾಟ ಟೀಮ್ ಇಂಡಿಯಾದಲ್ಲಿ ಮುಂದುವರಿದ್ರೆ ರನ್ ಮಳೆ ಪ್ರವಾಹದಂತೆ ಹರಿಯುವುದು ಖಚಿತ.
ಇಲ್ಲಿ ವಿರಾಟ್ ಕೊಹ್ಲಿ ಈ ರೀತಿಯ ನಿರ್ಧಾರ ಮಾಡುವುದಕ್ಕೂ ಒಂದು ಕಾರಣವಿದೆ. ಯಾಕಂದ್ರೆ ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳ ಮೇಲಿರುವ ನಂಬಿಕೆ. ಸಾಮಾನ್ಯವಾಗಿ ವಿರಾಟ್ ಕೊಹ್ಲಿ ವನ್ ಡೌನ್ ಬ್ಯಾಟ್ಸ್ ಮೆನ್ ಆಗಿ ಕಣಕ್ಕಿಳಿಯುತ್ತಿದ್ದರು. ಈ ಸರಣಿಯ ಅಂತಿಮ ಪಂದ್ಯ ಬಿಟ್ಟು ಇನ್ನುಳಿದ ಪಂದ್ಯಗಳಲ್ಲಿ ಟು ಡೌನ್ ಆಗಿ ಕಣಕ್ಕಿಳಿದಿದ್ರು.
ಮುಖ್ಯವಾಗಿ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಪರಿಗೆ ನಾಯಕ ವಿರಾಟ್ ಕೊಹ್ಲಿಗೆ ಬೆರಗುಗೊಂಡಿದ್ದಾರೆ.
ಅಷ್ಟೇ ಅಲ್ಲ, ಇನಿಂಗ್ಸ್ ಆರಂಭದಿಂದಲೇ ತಾನು ಡಿಸೇಲ್ ಇಂಜಿನ್ ಥರಾ ಸ್ಲೋ ಸ್ಟಾರ್ಟ್ ಆದ್ರೂ ತನ್ನ ಉಳಿದ ಆಟಗಾರರು ಪೆಟ್ರೋಲ್ ಇಂಜಿನ್ ನಂತೆ ವೇಗವಾಗಿ ಬ್ಯಾಟ್ ಬೀಸಿದ್ರೆ ತಂಡದ ರನ್ ಗತಿ ಕಿಲೋ ಮೀಟರ್ ವೇಗದಲ್ಲಿ ಏರುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭದಿಂದಲೇ ಡ್ರೈವರ್ ಸೀಟ್ ನಲ್ಲಿದ್ದುಕೊಂಡು ಟೀಮ್ ಇಂಡಿಯಾದ ಇನಿಂಗ್ಸ್ ಅನ್ನು ಗುರಿಮುಟ್ಟುವ ತನಕದ ಮುಗಿಸಬೇಕು ಅನ್ನೋ ಪ್ಲಾನ್ ಮೊದಲ ಪಂದ್ಯದಲ್ಲೇ ವರ್ಕ್ ಔಟ್ ಆಗಿದೆ.
ಈ ನಡುವೆ ಆಟದಲ್ಲಿ ಇಬ್ಬರ ಮೈಂಡ್ ಸೆಟ್ ಕೂಡ ಒಂದೇ ರೀತಿಯಾಗಿದೆ. ಮ್ಯಾಚ್ ಗೆಲ್ಲಬೇಕು.. ರನ್ ಗಳು ಹರಿದುಬರಬೇಕು. ಇನಿಂಗ್ಸ್ ನ ಕೊನೆಯ ತನಕ ಆಡಬೇಕು.. ಅಷ್ಟೇ ಅಲ್ಲ, ಇಬ್ಬರದ್ದು ನಾಯಕನ ಮನಸ್ಥಿತಿಯಲ್ಲೇ ಇರುವುದರಿಂದ ಇವರಿಬ್ಬರ ಕಾಂಬಿನೇಷನ್ ಕೂಡ ಅದ್ಭುತವಾಗಿಯೇ ಇದೆ.

Englandವಿರಾಟ್ ಕೊಹ್ಲಿಯ ನಿರ್ಧಾರ ಟಿ-ಟ್ವೆಂಟಿ ಪಂದ್ಯಕ್ಕೆ ಪಕ್ಕಾ ವರ್ಕ್ ಔಟ್ ಆಗುತ್ತೆ. ಆದ್ರೆ ಏಕದಿನ ಪಂದ್ಯಗಳಲ್ಲಿ ಸ್ವಲ್ಪ ಕಷ್ಟವಾದ್ರೂ ಆಗಬಹುದು. ಆದ್ರೂ ಲಘುವಾಗಿ ಪರಿಗಣಿಸುವಂತಿಲ್ಲ.
ಅದೇನೇ ಇರಲಿ, ಟೀಮ್ ಇಂಡಿಯಾ ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಹುತೇಕ ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ತಂಡವೇ ಆಡಿದ್ರೂ ಆಡಬಹುದು. ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ ಬೌಲಿಂಗ್ ವಿಭಾಗದಲ್ಲಿ ತಂಡವನ್ನು ಸೇರಿಕೊಳ್ಳಬಹುದು. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯಾಗೋ ಸಾಧ್ಯತೆಗಳಿಲ್ಲ. ಹಾಗೇ ಬದಲಾವಣೆಯಾದ್ರೂ ಪೃಥ್ವಿ ಶಾ ತಂಡವನ್ನು ಸೇರಿಕೊಳ್ಳಬಹುದು.
ಒಟ್ಟಿನಲ್ಲಿ ಆಧುನಿಕ ಕ್ರಿಕೆಟ್ ನ ಕನಸಿನ ಆರಂಭಿಕ ಜೋಡಿಯಾಗಿ ರೋಹಿತ್ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಖುಷಿಯನ್ನು ಹೆಚ್ಚಿಸಿದೆ. ಇವರಿಬ್ಬರು ಮುಂದಿನ ದಿನಗಳಲ್ಲೂ ಟಿ-ಟ್ವೆಂಟಿಯಲ್ಲೂ ಇನಿಂಗ್ಸ್ ಆರಂಭಿಸಲಿ ಎಂಬುದೇ ಅಭಿಮಾನಿಗಳ ಆಸೆಯೂ ಆಗಿದೆ.

#viratkohli #rohithsharma #teamindia #england #bcci #t-20cricket #ipl #t-20worldcup2021

Tags: #ipl cricket#saakshatvbccirohith sharmasaakshatvsportst-20 worldcupteam indiavirat kohliworld cricket
ShareTweetSendShare
Join us on:

Related Posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

by Shwetha
May 6, 2026
0

ದೇಶದ ರಾಜಕೀಯದಲ್ಲಿ ಭಾರತೀಯ ಜನತಾ ಪಾರ್ಟಿ (BJP) ಮತ್ತೊಂದು ಮಹತ್ವದ ಸಾಧನೆ ದಾಖಲಿಸಿದೆ. ಪ್ರಸ್ತುತ, ಬಿಜೆಪಿ ದೇಶಾದ್ಯಂತ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇರವಾಗಿ ಅಥವಾ...

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

by Shwetha
May 6, 2026
0

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಹಿನ್ನೆಲೆ, ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷ ಟಿಎಂಸಿ ಯ ಸೋಲಿಗೆ ಚುನಾವಣಾ ಆಯೋಗವೇ ಕಾರಣ ಎಂದು ಅವರು...

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

by Shwetha
May 6, 2026
0

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯು ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಕಿಚ್ಚು ಹಚ್ಚಿದೆ. ಮರುಎಣಿಕೆಯಲ್ಲಿ ಜೀವರಾಜ್ ಅಕ್ರಮ ಎಸಗಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ...

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

by Shwetha
May 6, 2026
0

ತಮಿಳುನಾಡಿನ ಜನಪ್ರಿಯ ನಟ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಘೋಷಿಸಿರುವ ಜನಪ್ರಿಯ ಕಲ್ಯಾಣ ಯೋಜನೆಗಳು ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿರುವುದು ನಿಜ....

ಅಮೆರಿಕದ ವಿಮಾನ ಮಿಸ್ಸಿಂಗ್!

ಅಮೆರಿಕದ ವಿಮಾನ ಮಿಸ್ಸಿಂಗ್!

by Shwetha
May 6, 2026
0

ಅಮೆರಿಕದ ಭಾರೀ ಸೈನಿಕ ವಿಮಾನವಾದ KC-135 ಸ್ಟ್ರಾಟೋಟ್ಯಾಂಕರ್ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಮಾನವು ಗಾಳಿಯಲ್ಲೇ ಇಂಧನ ತುಂಬುವ ಪ್ರಮುಖ ಕಾರ್ಯವನ್ನು ನಿರ್ವಹಿಸುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram