Rohith Sharma : ಕ್ರೀಡಾ ಸ್ಫೂರ್ತಿ ಮೆರೆದ ಟೀಮ್ ಇಂಡಿಯಾ ನಾಯಕ ರೋಹಿತ್ .!!
ಕ್ರೀಡಾ ಸ್ಫೂರ್ತಿ ಮೆರೆದ ರೋಹಿತ್, ಮಂಕಡ್ ನಿರಾಕರಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್
ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು 67 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.
ಈ ಪಂದ್ಯದಲ್ಲಿ ಶ್ರೀಲಂಕಾದ ನಾಯಕ ದಸುನ್ ಶನಕ ಅಜೇಯ 108 ರನ್ ಗಳಿಸಿದರು, ಆದರೆ ಅವರು ತಮ್ಮ ತಂಡಕ್ಕೆ ಗೆಲುವಿನ ಮಾಲೆ ತೊಡಿಸಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಸೋತರೂ ದಸುನ್ ಶನಕ ಅವರ ಶತಕ ಇನಿಂಗ್ಸ್ ಗೆ ಎಲ್ಲರ ಗಮನ ಸೆಳೆಯಿತು. ಆದರೆ, ರೋಹಿತ್ ಶರ್ಮಾ ಬಯಸಿದ್ದರೆ ಶನಕ ಶತಕ ಗಳಿಸಲು ಸಾಧ್ಯವಾಗುತ್ತಿರಲಿಲ್ಲ.
ಶ್ರೀಲಂಕಾ ಇನ್ನಿಂಗ್ಸ್‌ನ 50 ನೇ ಓವರ್‌ನ, ನಾಲ್ಕನೇ ಎಸೆತದಲ್ಲಿ, ವೇಗದ ಬೌಲರ್ ಮೊಹಮ್ಮದ್ ಶಮಿ ದಸುನ್ ಶನಕ ಅವರನ್ನು ಮಂಕಡಿಂಗ್ ಔಟ್ ಮಾಡಿದರು. ಈ ವೇಳೆ ಶನಕ ನಾನ್ ಸ್ಟ್ರೈಕ್ ಎಂಡ್ ಕ್ರೀಸ್ ಬಿಟ್ಟು ಆಗಿತ್ತು. ಆದರೆ ಭಾರತೀಯ ನಾಯಕ ಕ್ರೀಡಾ ಸ್ಫೂರ್ತಿ ಪ್ರದರ್ಶಿಸಿದರು ಮತ್ತು ಮನವಿಯನ್ನು ಹಿಂತೆಗೆದುಕೊಂಡರು. ಮತ್ತು ಶನಕ ಶತಕ ಪೂರೈಸಿದರು.
ಮೊದಲು ಆಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 373 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 306 ರನ್ ಗಳಿಸಲಷ್ಟೇ ಶಕ್ತವಾಯಿತು. ಶ್ರೀಲಂಕಾ ಪರ ನಾಯಕ ದಸುನ್ ಶನಕ 108 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದರು.
Rohit, Mankad refused Team India captain