ಟಿ-20 ಕ್ರಿಕೆಟ್ ನಲ್ಲಿ 9 ಸಾವಿರ ರನ್ ದಾಖಲಿಸಿದ ರೋಹಿತ್ ಶರ್ಮಾ
Rohith sharma tops 9000 runs in T20 cricket saakshatv
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತೊಂದು ಸಾಧಕರ ಪಟ್ಟಿಗೆ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ 12 ರನ್ ಗಳಿಸಿ ನಿರಾಸೆಯಿಂದಲೇ ಪೆವಿಲಿಯನ್ ದಾರಿ ಹಿಡಿದ್ರು. ಈ ನಡುವೆ ಟಿ-20 ಕ್ರಿಕೆಟ್ ನಲ್ಲಿ 9 ಸಾವಿರ ರನ್ ದಾಖಲಿಸಿದ ಭಾರತದ ಎರಡನೇ ಬ್ಯಾಟ್ಸ್ ಮೆನ್ ಆಗಿ ಹೊರಹೊಮ್ಮಿದ್ರು.
Rohith sharma tops 9000 runs in T20 cricket saakshatv
ಇದಕ್ಕು ಮೊದಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದ ಮೊದಲ ಭಾರತೀಯ ಕ್ರಿಕೆಟಿಗನಾಗಿದ್ದಾರೆ.
ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್ ನಲ್ಲಿ 9 ಸಾವಿರ ರನ್ ದಾಖಲಿಸಿದ್ದ 9ನೇ ಆಟಗಾರನಾಗಿ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
110 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿರುವ ರೋಹಿತತ್ ಶರ್ಮಾ ಒಟ್ಟು 2800 ರನ್ ದಾಖಲಿಸಿದ್ದಾರೆ. 4 ಶತಕಗಳು ಹಾಗೂ 21 ಅರ್ಧಶತಕಗಳನ್ನು ಸಿಡಿಸಿದ್ದಾರೆ. 248 ಬೌಂಡರಿ ಮತ್ತು 128 ಸಿಕ್ಸರ್ ಗಳನ್ನು ದಾಖಲಿಸಿದ್ದಾರೆ.
ಇನ್ನು 200 ಐಪಿಎಲ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ 5230 ರನ್ ದಾಖಲಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಹಾಗೂ 39 ಅರ್ಧಶತಕಗಳಿವೆ. 458 ಬೌಂಡರಿ ಹಾಗೂ 213 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
#Rohith sharma #t-20cricket #saakshatv #saakshatvsports #teamindia #viratkohli #england








