ಮೆಸ್ಸಿ ಬೀಡಿ.. ರೊನಾಲ್ಡೊ ಬೀಡಿ.. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಕಿಕ್..!

1 min read
Cristiano Ronaldo lionel Messi saakshatv

ಪಶ್ಚಿಮ ಬಂಗಾಳದ ಫೇಮಸ್ಸ್ ಬೀಡಿಗಳು..  ಮೆಸ್ಸಿ ಬೀಡಿ.. ರೊನಾಲ್ಡೊ ಬೀಡಿ.. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಕಿಕ್..!

Lionel Messi beedi saakshatv footballಮೆಸ್ಸಿ ಬೀಡಿ.. ರೋನಾಲ್ಡೊ ಬೀಡಿ.. ಇದು ಈಗ  ಭಾರತದ ಬಹುಬೇಡಿಕೆಯ ಬೀಡಿಗಳಾಗಿವೆ…!
ಹೌದು, ಲಿಯೋನಾಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೋನಾಲ್ಡೊ ಆಧುನಿಕ ಫುಟ್ ಬಾಲ್ ಜಗತ್ತಿನ ಅಪ್ರತಿಮ ಆಟಗಾರರು. ತಮ್ಮ ಅದ್ಭುತ ಆಟದ ಮೂಲಕ ಕೋಟ್ಯಂತರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಕೋಟಿ ಕೋಟಿ ಬೆಲೆಗೆ ಬಾಳುವ ಆಟಗಾರರು ಕೂಡ. ಅದರಲ್ಲೂ ಜಾಹಿರಾತು ಲೋಕದ ಕಣ್ಮನಿಗಳಾಗಿರುವ ಮೆಸ್ಸಿ ಮತ್ತು ಕ್ರಿಸ್ಟಿಯಾನೊಗೆ ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಇತ್ತೀಚೆಗೆ ನಡೆದ ಕೋಪಾ ಅಮೆರಿಕಾ ಫುಟ್ ಬಾಲ್ ಟೂರ್ನಿಯಲ್ಲಿ ಲಿಯೋನಾಲ್ ಮೆಸ್ಸಿ ಸಾರಥ್ಯದ ಅರ್ಜೆಂಟಿನಾ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು. ಆದ್ರೆ ಯೂರೋ ಕಪ್ ನಲ್ಲಿ ಕ್ರಿಸ್ಟಿಯಾನೊ ರೋನಾಲ್ಡೊ ನೇತೃತ್ವದ ಪೋರ್ಚ್ ಗಲ್ ತಂಡ ನಿರಾಸೆ ಅನುಭವಿಸಿತ್ತು.
ಈ ನಡುವೆ ಲಿಯೊನಾಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿನ ಬೀಡಿಗಳು ಈಗ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿವೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿರುವ ಮೆಸ್ಸಿ ಮತ್ತು ಕ್ರಿಸಿಯಾನೋ ಈ ಎರಡು ಬೀಡಿ ಕಂಪೆನಿಗಳ ಜೊತೆಗೆ ಒಪ್ಪಂದವನ್ನಂತೂ ಮಾಡಿಕೊಂಡಿಲ್ಲ.
ಆದ್ರೆ ಎರಡು ಕಂಪೆನಿಗಳ ಬೀಡಿ ಪ್ಯಾಕೇಟ್ ನಲ್ಲಿ ಮೆಸ್ಸಿ ಮತ್ತು ರೊನಾಲ್ಡೊ ಚಿತ್ರಗಳಿವೆ. ಮೆಸ್ಸಿ ಬೀಡಿಯನ್ನು ಪಶ್ಚಿಮ ಬಂಗಾಳದ ಧುಲಿಯಾನ್ ನ ಆರೀಫ್ ಬೀಡಿ ಫ್ಯಾಕ್ಟರಿ ತಯಾರು ಮಾಡುತ್ತಿದೆ. ಇನ್ನು ರೊನಾಲ್ಡೊ ಬೀಡಿ. ಇದರ ಪ್ಯಾಕೇಟ್ ಮೇಲೂ ನ್ಯೂ ರೊನಾಲ್ಡೊ ಬೀಡಿ ಪ್ಯಾಕ್ಟರಿ ಜೊತೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಚಿತ್ರವೂ ಕೂಡ ಇದೆ.
Cristiano Ronaldo  beedi  football saakshatv ಇದೀಗ ಮೆಸ್ಸಿ ಮತ್ತು ರೊನಾಲ್ಡೊ ಬೀಡಿಗಳು ಸಾಮಾಜಿಕ ಜಾಲ ತಾಣದಲ್ಲಿ ತುಂಬಾನೇ ಫೇಮಸ್ ಆಗಿದೆ. ಅದ್ರಲ್ಲೂ ರೂಪಿನ್ ಶರ್ಮಾ ಅನ್ನೋ ಐಪಿಎಸ್ ಅಧಿಕಾರಿಯೊಬ್ಬರು ಮೆಸ್ಸಿ ಬೀಡಿ ಪ್ಯಾಕೇಟ್ ನ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಭಾರತದಲ್ಲಿ ಮೆಸ್ಸಿಯ ಮೊದಲ ಜಾಹಿರಾತು ಒಪ್ಪಂದ ಎಂದು ಟ್ಯಾಗ್ ಲೈನ್ ಕೂಡ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಇದು ಫುಟ್ ಬಾಲ್ ಮೇಲಿನ ಪ್ರೀತಿಯೋ ಅಭಿಮಾನವೋ ಆಗಿರಬಹುದು. ಆದ್ರೆ ಬೀಡಿ ಕಂಪೆನಿಗಳ ಈ ಅಭಿಮಾನಕ್ಕೆ ಮೆಸ್ಸಿ ಮತ್ತು ರೊನಾಲ್ಡೊ ಕೋರ್ಟ್ ನೋಟಿಸ್ ನೀಡಿದ್ರೆ ಅಪಾಯ ಕೂಡ ತಪ್ಪಿದ್ದಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd