ಭಾರತದ ಅತಿದೊಡ್ಡ ಸಾಫ್ಟ್ ವೇರ್ ಎಕ್ಸ್ ಪೋರ್ಟಿಂಗ್ ಕಂಪನಿಯಾದ HCL ಟೆಕ್ನಾಲಜೀಸ್ ನ ನೂತನ ಸಾರಥಿಯಾಗಿ ರೋಶನಿ ನಡಾರ್ ಹುದ್ದೆ ಅಲಂಕರಿಸಿದ್ದಾರೆ. ೭೫ ವರ್ಷದ ಶಿವ ನಡಾರ್ ಅವರು ನಿರ್ದೇಶಕರ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಅವರ ಪುತ್ರಿ ೩೮ ವರ್ಷದ ರೋಶನಿ ನಡಾರ್ ಮಲ್ಹೋತ್ರಾ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ನಿರ್ದೇಶಕರ ಆಡಳಿತ ಮಂಡಳಿಯ ಸದಸ್ಯರು ಸೇರಿ ಈ ತೀರ್ಮಾನ ಕೈಗೊಂಡಿದ್ದಾರೆ. ರೋಶನಿ ನಡಾರ್
ಫೋರ್ಬ್ಸ್ ನಿಯತಕಾಲಿಕೆ 2019ರಲ್ಲಿ ಪ್ರಕಟಿಸಿದ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ 54ನೇ ಸ್ಥಾನ ಪಡೆದಿದ್ದರು. ಹುರುನ್ ಇಂಡಿಯಾ ಶ್ರೀಮಂತ ಭಾರತೀಯರ ಪಟ್ಟಿಯಯಲ್ಲಿ 36,800 ಕೋಟಿ ರೂ. ಸಂಪತ್ತು ಹೊಂದುವ ಮೂಲಕ ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು. ಎಚ್ಸಿಎಲ್ಗೆ ಸೇರುವ ಮೊದಲು ಅವರು ವಿವಿಧ ಕಂಪನಿಗಳಲ್ಲಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಎಚ್ಸಿಎಲ್ಗೆ ಸೇರ್ಪಡೆಯಾದ ಒಂದು ವರ್ಷದೊಳಗೆ 2013 ರಲ್ಲಿ ಮಂಡಳಿಯಲ್ಲಿ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಎಚ್ಸಿಎಲ್ ಕಾರ್ಪೊರೇಶನ್ನ ಸಿಇಒ ಆಗುವ ಮೊದಲು ಅವರು ಶಿವ ನಡಾರ್ಫೌಂಡೇಶನ್ನ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ನಾಯಕತ್ವ ಕಲೆ ಕಲ್ಪಿಸುವ ವಿದ್ಯಾಜ್ಞಾನ ಲೀಡರ್ಶಿಪ್ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ.








