ಚೆನ್ನೈ: ತಾಯಿಯೊಂದಿಗೆ ಬಂದಿದ್ದ ಐದು ವರ್ಷದ ಬಾಲಕಿ ಮೇಲೆ ಎರಡು ರಾಟ್‌ವೀಲರ್ (Rottweiler) ನಾಯಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಚೆನ್ನೈನ (Chennai) ಉದ್ಯಾನವನವೊಂದರಲ್ಲಿ ನಡೆದಿದೆ. ನಾಯಿಗಳನ್ನು ಮಾಲೀಕ ಪಾರ್ಕ್ ಗೆ ಕರೆ ತಂದಿದ್ದ. ಈ ಸಂದರ್ಭದಲ್ಲಿ ಅವುಗಳನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿಯದಿದ್ದರಿಂದಾಗಿ ಅವು ಬಾಲಕಿಯ ಮೇಲೆ ಎರಗಿವೆ. ಕೂಡಲೇ ಬಾಲಕಿಯ ತಾಯಿ ರಕ್ಷಿಸಲು ಧಾವಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಗು ಗಂಭೀರವಾಗಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ನಾಯಿಗಳ ಮಾಲೀಕನ ಮೇಲೆ ದೂರು ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಪಾರ್ಕ್ ನಲ್ಲಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ನಾಯಿಗಳು ಬಾಲಕಿ ಮೇಲೆ ದಾಳಿ ನಡೆಸಿರುವುದು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.