ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ತೆರಳುವವರಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಕೆಎಸ್ ಆರ್ ಟಿಸಿ ಸಿಹಿ ಸುದ್ದಿ ನೀಡಿದೆ. ಯುಗಾದಿ, ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಬೆಂಗಳೂರಿನಿಂದ ಹೆಚ್ಚುವರಿ ಬಸ್ ಗಳನ್ನು ರಸ್ತೆಗೆ ಇಳಿಸಲು ನಿಗಮ ಮುಂದಾಗಿದೆ. 2275 ವಿಶೇಷ ಬಸ್‍ಗಳನ್ನು ರಸ್ತೆಗಿಳಿಸಲು ನಾಲ್ಕು ನಿಗಮಗಳು ನಿರ್ಧಾರಿಸಿವೆ. ರಜೆ ಹಿನ್ನೆಲೆಯಲ್ಲಿ ಊರಿಗೆ ಹಾಗೂ ಪ್ರವಾಸಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ. ಕೆಎಸ್ ಆರ್ ಟಿಸಿಯಿಂದ 1,750 ಬಸ್, ಎನ್ ಡಬಲ್ಯೂ ಕೆಎಸ್ ಆರ್ ಟಿಸಿಯ 145 ಬಸ್, ಕೆಕೆಆರ್ ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್ ಗಳನ್ನು ರಸ್ತೆಗೆ ಇಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೆಂಪೇಗೌಡ ನಿಲ್ದಾಣ, ಸ್ಯಾಟ್‍ಲೈಟ್ ನಿಲ್ದಾಣ, ಶಾಂತಿನಗರದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ತೆರಳಲು ಹೆಚ್ಚುವರಿ ಬಸ್ ಬಿಡಲು ನಿರ್ಧರಿಸಲಾಗಿದೆ. ಏ.7 ಭಾನುವಾರ, 9 ಮಂಗಳವಾರ ಯುಗಾದಿ ಹಬ್ಬ, ಗುರುವಾರ ರಂಜಾನ್ ಇದೆ. ಏ. 13 ಎರಡನೇ ಶನಿವಾರ ರಜೆ ಹಾಗೂ 14 ರಂದು ಭಾನುವಾರದ ರಜೆ ಇರುವುದರಿಂದಾಗಿ ಏ. 7ರಿಂದ 14ರ ವರೆಗೆ ಒಟ್ಟು 5 ರಜೆಗಳು ಸಿಗಲಿದ್ದು, ಬಸ್ ನ ವ್ಯವಸ್ಥೆ ಮಾಡಲಾಗಿದೆ.