ರಾಯಲ್ ಎನ್ ಫೀಲ್ಡ್ ಮೀಟಿಯೋರ್ 350 ಬೈಕ್ ಲಾಂಚ್ : ಫೀಚರ್ಸ್ ..!
ನವದೆಹಲಿ: ಪ್ರಸಿದ್ಧ ರಾಯಲ್ ಎನ್ಫೀಲ್ಡ್ ಕಂಪನಿಯು ಹೊಚ್ಚ ಹೊಸ ಮೀಟಿಯೋರ್ 350 ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಕರ್ಶಕ ಮೀಟಿಯೋರ್ ಕ್ರೂಸರ್ ಬೈಕ್ ಆಗಿದ್ದು ನೋಡಲು ಥಂಡರ್ ಬರ್ಡ್ ಅನ್ನೇ ಹೋಲುತ್ತದೆ. ಆದರೆ ಹೊಸ ಬಣ್ಣಗಳು ಬೈಕನ್ನು ಅತ್ಯಾಕರ್ಷಕಗೊಳಿಸಿದೆ. ಫೈಯರ್ ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್ ನೋವಾ ಎಂಬ ಮೂರು ಆವೃತ್ತಿಗಳಲ್ಲಿ ಮೀಟಿಯೋರ್ ಲಭ್ಯವಿದೆ. 15 ಬಣ್ಣಗಳಲ್ಲಿ ರಾಯಲ್ ಎನ್ಫೀಲ್ಡ್ ಮೀಟಿಯೋರ್ 350 ಬೈಕ್ ದೊರೆಯುತ್ತದೆ. ಹೊಸ ಮೀಟಿಯೋರ್ 349 ಸಿಸಿ ಏರ್-ಆಯಿಲ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ.
5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಬೈಕ್ 20.2 ಹೆಚ್ಪಿ ಪವರ್ ಹಾಗೂ 27 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಅನಲಾಗ್-ಡಿಜಿಟಲ್ ಮೀಟರ್ ಕನ್ಸೋಲ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಈ ಬೈಕ್ನಲ್ಲಿದೆ. ಇನ್ನೂ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಟ್ರಿಪ್ಪರ್ ನ್ಯಾವಿಗೇಶನ್ ವ್ಯವಸ್ಥೆಯನ್ನು ನೀಡಲಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಇಂತಹದೊಂದು ಪೀಚರ್ ನೀಡಲಾಗಿದೆ. ಈ ವ್ಯವಸ್ಥೆ ಬ್ಲೂಟೂತ್ ಮುಖಾಂತರ ಕೆಲಸ ಮಾಡಲಿದೆ. ಇದಕ್ಕಾಗಿ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಮ್ಯಾಪ್ಸ್ ಮತ್ತು ರಾಯಲ್ ಎನ್ಫೀಲ್ಡ್ ಆಪ್ ಇರಲೇಬೇಕಾಗಿರುತ್ತೆ. ಇದರ ಬೆಲೆ 1,77,671 ರಿಂದ 1,92,493 ರೂಪಾಯಿ ವರೆಗೂ ಇದೆ.
ಜೀವನವಿಡೀ ಕಷ್ಟ ಪಟ್ಟು ಸಂಪಾದಿಸಿದ ಹಣ ಗೆದ್ದಲಹುಳುಗಳ ಪಾಲಾಯ್ತು ಮನೆಕಟ್ಟುವ ಕನಸು ಭಗ್ನವಾಯ್ತು..!
ಬ್ಯಾಂಕ್ ಗ್ರಾಹಕರೇ ಗಮನಿಸಿ : ಸದ್ದಿಲ್ಲದೆ ಸೇವಾ ಶುಲ್ಕ ವಿಧಿಸುತ್ತಿವೆ ಬ್ಯಾಂಕ್ ಗಳು..!
OMG… ಟೇಕ್ ಆಫ್ ಗೆ ಸಿದ್ಧವಾಗ್ತಿದೆ ಫ್ಲೈಯಿಂಗ್ ಕಾರ್…!
ಭಾರತದಲ್ಲಿ ಇಂದಿನಿಂದ ‘BMW X3 xDrive30i SportX’ ಮಾರಾಟಕ್ಕೆ ಲಭ್ಯ…!