SRH | ವಿಲಿಯಮ್ ಸನ್ ಗೆ ಬೈ ಬೈ ಹೇಳಿ…
ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಆರ್ ಪಿ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ವಿಲಿಯಮ್ ಸನ್ ಪವರ್ ಪ್ಲೇಯಲ್ಲಿ ಆಡುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಬಾಯಿ ಮುರಿದಿದ್ದಾರೆ.
ಅಲ್ಲದೇ ಕೇನ್ ಅವರನ್ನು ಅಂತಿಮ ತಂಡದಿಂದ ತೆಗೆದುಹಾಕುವಂತೆ ಸನ್ರೈಸರ್ಸ್ ಆಡಳಿತ ಮಂಡಳಿಗೆ ಸಲಹೆ ನೀಡಿದ್ದಾರೆ.
ಕೇನ್ ಐಪಿಎಲ್-2022 ಸೀಸನ್ ನಲ್ಲಿ ಬ್ಯಾಟರ್ ಆಗಿ ವಿಫಲರಾಗಿದ್ದಾರೆ. ಈ ಆವೃತ್ತಿಯಲ್ಲಿ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ ಅವರ ಒಟ್ಟು ಸ್ಕೋರ್ 208. ಗರಿಷ್ಠ ಸ್ಕೋರ್ 57.
ಅಂದರೆ ಕೇನ್ ವಿಲಿಯಮ್ಸನ್ ಅವರ ಆಟದ ಶೈಲಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ಈ ಹಿನ್ನೆಲೆಯಲ್ಲಿ ಆರ್ ಪಿ ಸಿಂಗ್ ಮಾತನಾಡಿ, ಕೇನ್ ವಿಲಿಯಮ್ಸನ್ ಆಟದ ಬಗ್ಗೆ ಕಟು ಟೀಕೆ ಮಾಡಿದ್ದಾರೆ. “ವಿಲಿಯಮ್ಸನ್ ತಂಡದಲ್ಲಿ ಇದ್ದರೆ ಒಳ್ಳೆಯದು.
ಆದರೆ, ಅವರನ್ನು ಅಂತಿಮ ತಂಡದಿಂದ ಕೈಬಿಡುವುದು ಉತ್ತಮ. ಇನ್ನೂ ಎಷ್ಟು ದಿನ ಸಹಿಸಿಕೊಳ್ಳಬೇಕು.
ಆತ ಒಬ್ಬನೊಬ್ಬ ವೃತ್ತಿಪರ ಕ್ರಿಕೆಟಿಗ. ಆದರೆ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ.
ಕೇನ್ ವಿಲಿಯಮ್ಸನ್ ಒಳ್ಳೆಯ ವ್ಯಕ್ತಿ. ಶ್ರೇಷ್ಠ ಕ್ಯಾಪ್ಟನ್ ಕೂಡ! ಆದರೆ ಆರಂಭಿಕರಾಗಿ ಮಿಂಚುತ್ತಿಲ್ಲ. ತಂಡದಲ್ಲಿ ಬದಲಾವಣೆ ಮಾಡದಿದ್ದರೇ ಕಷ್ಟವಾಗುತ್ತದೆ.
ಅಭಿಷೇಕ್ ಶರ್ಮಾ ಜೊತೆಗೆ ರಾಹುಲ್ ತ್ರಿಪಾಠಿಯನ್ನು ಓಪನಿಂಗ್ಗೆ ಕರೆತನ್ನಿ, ”ಎಂದು ಅವರು ಸನ್ರೈಸರ್ಸ್ ಮ್ಯಾನೇಜ್ಮೆಂಟ್ ಗೆ ತಿಳಿಸಿದ್ದಾರೆ. Rp-singh-says-srh-should-consider-dropping-kane-williamson