RR vs LSG | ಸೂಪರ್ ಜೈಂಟ್ಸ್ ಗೆ ರಾಯಲ್ಸ್ ಸವಾಲು.. ಯಾರಿಗೆ ಗೆಲುವು..?
ಇಂಡಿಯನ್ ಪ್ರಿಮಿಯರ್ ಲೀಗ್ ನ 20 ನೇ ಪಂದ್ಯದಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ತಂಡ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುವುದರಿಂದ ಟಾಸ್ ಪ್ರಮುಖ ಪಾತ್ರ ವಹಿಸುತ್ತದೆ.
ಸ್ಟ್ರೆಂಥ್ ಅಂಡ್ ವೀಕ್ನೆಸ್
ರಾಜಸ್ಥಾನ್ ರಾಯಲ್ಸ್ ತಂಡ ಈ ಮೊದಲಿಗಿಂತಲೂ ಈ ಬಾರಿಯ ಐಪಿಎಲ್ ನಲ್ಲಿ ಬಲಿಷ್ಠವಾಗಿದೆ. ಬ್ಯಾಟಿಂಗ್ ನಲ್ಲಿ ಜೋಸ್ ಬಟ್ಲರ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಇವರಿಗೆ ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ ಸನ್ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ, ಆದ್ರೆ ಜೈಸ್ವಾಲ್ ಫಾರ್ಮ್ ಕಂಡುಕೊಳ್ಳಬೇಕಿದೆ.
ಬೌಲಿಂಗ್ನಲ್ಲಿ ಟ್ರೆಂಟ್ ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ಬಗ್ಗೆ ತೊಂದರೆ ಇಲ್ಲ. ಚಹಲ್ ಮತ್ತು ಅಶ್ವಿನ್ ಜೋಡಿಯೂ ತುಂಬಾ ಪ್ರಮುಖ. ಆದರೆ ನವ್ ದೀಪ್ ಸೈನಿ ಬದಲು ಹೊಸ ಬೌಲರ್ ಆಯ್ಕೆ ಮಾಡಿದರೆ ಎದುರಾಳಿಗೆ ಅಚ್ಚರಿ ನೀಡಬಹುದು.
ಲಖನೌ:
ಕೆ.ಎಲ್. ರಾಹುಲ್ ನೇತೃತ್ವದ ಲಖನೌ ತಂಡ ಸಾಲಿಡ್ ಆಗಿದೆ. ಕೆ.ಎಲ್. ರಾಹುಲ್, ಕ್ವಿಂಟಾನ್ ಡಿಕಾಕ್, ಎವಿನ್ ಲೆವಿಸ್, ದೀಪಕ್ ಹೂಡ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ ಹೀಗೆ ಮ್ಯಾಚ್ ವಿನ್ನರ್ ಗಳ ದಂಡೇ ಲಕ್ನೋ ತಂಡದಲ್ಲಿದೆ.
ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಆವೇಶ್ ಖಾನ್, ಜೇಸನ್ ಹೋಲ್ಡರ್ ರವಿ ಬಿಷ್ಣೋಯಿ ಬೌಲಿಂಗ್ ನಲ್ಲಿ ಮಿಂಚುತ್ತಿದ್ದಾರೆ.
ಪಿಚ್ ಕಂಡೀಷನ್:
ವಾಂಖೆಡೆ ಪಿಚ್ ಸೀಮ್ ಬೌಲರ್ಗಳಿಗೆ ನೆರವು ನೀಡಿದೆ. ಜೊತೆಗೆ ಡ್ಯೂ ಫ್ಯಾಕ್ಟರ್ ಕೂಡ ಗಣನೆಗೆ ಬರುತ್ತಿದೆ. ಹೀಗಾಗಿ ಟಾಸ್ ಮೇಲೆ ಕಣ್ಣಿದೆ.