RRR : ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ – ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ….
RRR ಸಿನಿಮಾ ಇಡೀ ಭಾರತವೇ ಮೆಚ್ಚುವಂತಹ ಸಾಧನೆ ಮಾಡಿದೆ… ಆಸ್ಕರ್ ನಂತರ ಪ್ರತಿಷ್ಠಿತ ಪ್ರಶಸ್ತಿಯಾದ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗೆ ಜಕ್ಕಣ್ಣನ ಸಿನಿಮಾ ಬಾಜನವಾಗಿದೆ.. ವಿಶ್ವಾದ್ಯಂತ ಧೂಳೆಬ್ಬಿಸಿ ಬಾಕ್ಸ್ ಆಫೀಸ್ ಶೇಕ್ ಮಾಡಿದ್ದ ಈ ಸಿನಿಮಾದ ನಾಟು ನಾಟು ಹಾಡಿಗೆ ಪ್ರಶಸ್ತಿ ಲಭ್ಯವಾಗಿದೆ..
ರಾಜಮೌಳಿ ನಿರ್ದೇಶಿಸಿ , ರಾಮ್ ಚರಣ್ , ಜ್ಯೂ. NTR ನಟಿಸಿರುವ ಈ ಸಿನಿಮಾ ಸಂಗೀತ ಭಾರೀ ಮೋಡಿ ಮಾಡಿತ್ತು.. ಅದ್ರಲ್ಲೂ ಎಂ ಎಂ ಕೀರವಾಣಿ ಅವರ ನಾಟು ನಾಟು ಹಾಡಿನ ಕ್ರೇಜ್ ನೆಕ್ಸ್ಟ್ ಲೆವೆಲ್.. ಇದೇ ಹಾಡಿಗಾಗಿ ಅತ್ಯುತ್ತಮ ಹಾಡು ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಲಭಿಸಿದೆ.. ಹೀಗಾಗಿ ಇಡೀ ಸಿನಿಮಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ..
ಸಿನಿಮಾದ ಸಂಗೀತ ನಿರ್ದೇಶಕರಾದ ಕೀರವಾಣಿ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿರುವ ಮೋದಿ ಅವರು “ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತೆ ಮಾಡಿದೆ. ರಾಜಮೌಳಿ, ಕೀರವಾಣಿ, ರಾಮ್ ಚರಣ್, ಜ್ಯೂನಿಯರ್ ಎನ್ಟಿ ಆರ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ಟ್ವಿಟ್ ಮಾಡಿದ್ದಾರೆ.
RRR , golden globes award 2023 , Pm modi congrajulate film team








