ದೇಶದೆಲ್ಲೆಡೆ ‘#RRR’ ಭರ್ಜರಿ ಪ್ರಚಾರ!
ಎಸ್ ಎಸ್ ರಾಜಮೌಳಿ ನಿರ್ದೇಶನದ, ಜ್ಯೂನಿಯರ್ ಎನ್ ಟಿಆರ್, ರಾಮ್ ಚರಣ್ ನಟನೆಯ ಆರ್ ಆರ್ ಆರ್ ಸಿನಿಮಾ ಮಾರ್ಚ್ 25 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.
ಹೀಗಾಗಿ ಚಿತ್ರತಂಡ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದೆ. ನಿರ್ದೇಶಕ ರಾಜಮೌಳಿ, ನಟರಾದ ಎನ್ ಟಿಆರ್, ರಾಮ್ ಚರಣ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮ ನಡೆಸಿದ್ದ ಚಿತ್ರತಂಡ ದೇಶಾದ್ಯಂತ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತಿದ್ದು, ಎಲ್ಲೆಡೆ ಜನಜಾತ್ರೆ ಸೇರುತ್ತಿದೆ.
ರಾಜಸ್ಥಾನದ ಜೈಪುರದ ಸುಪ್ರಸಿದ್ಧ ಹವಾ ಮಹಲ್ ಎದುರು ‘ಆರ್ಆರ್ಆರ್’ ಚಿತ್ರತಂಡ ಫೋಟೋಗೆ ಪೋಸ್ ಕೊಟ್ಟಿತ್ತು.
ಇದಾದ ಬಳಿಕ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ ಆರ್ ಆರ್ ಚಿತ್ರತಂಡಕ್ಕೆ ಆಮಿರ್ ಖಾನ್ ಸಾಥ್ ನೀಡಿದ್ದರು.
ಇಲ್ಲಿಂದ ಮಾಯವಾದ ರಾಜಮೌಳಿ, ರಾಮ್ಚರಣ್ ಹಾಗೂ ಜ್ಯೂ.ಎನ್ಟಿಆರ್ ಸೀದಾ ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ ಕಾಣಿಸಿಕೊಂಡರು.
ನಂತರ ಗುಜರಾತ್ನ ಏಕತಾ ಪ್ರತಿಮೆ ಮುಂಭಾಗ ಆರ್ ಆರ್ ಆರ್ ಚಿತ್ರತಂಡ ಪ್ರತ್ಯಕ್ಷವಾಗಿತ್ತು. ಇತ್ತೀಚೆಗೆ ವಾರಣಾಸಿಗೆ ತೆರಳಿದ್ದ ‘ಆರ್ಆರ್ಆರ್’ ಚಿತ್ರತಂಡ ಗಂಗಾರತಿಯಲ್ಲಿ ಭಾಗಿಯಾಗಿತ್ತು.
ಈ ಎಲ್ಲಾ ಪ್ರದೇಶಗಳಿಗೆ ತೆರಳಿದಾಗ ಜ್ಯೂ.ಎನ್ಟಿಆರ್ ಹಾಗೂ ರಾಮ್ಚರಣ್ ಎಲ್ಲೆಡೆ ‘ದೋಸ್ತಿ’ ಪೋಸ್ ನೀಡುತ್ತಾ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ರಾಜಮೌಳಿ ಸಾಥ್ ನೀಡುತ್ತಿದ್ದಾರೆ.
ಇದರ ಜೊತೆಗೆ ಸೆಲೆಬ್ರೆಟಿಗಳ ಜೊತೆ ಚಿತ್ರತಂಡ ಸಂದರ್ಶನದಲ್ಲಿ ಭಾಗಿಯಾಗುತ್ತಿದೆ. RRR movie exclusive promotion throughout the country