NTR | ಚರಣ್ ಇಲ್ಲದೆ #RRR ಸಿನಿಮಾ ಇಲ್ಲ

1 min read
rrr-movie-jr-ntr-thanks-rajamouli-ram-charan saaksha tv

NTR | ಚರಣ್ ಇಲ್ಲದೆ #RRR ಸಿನಿಮಾ ಇಲ್ಲ

ರಾಜಮೌಳಿ ನಿರ್ದೇಶನದ  ಯಂಗ್ ಟೈಗರ್ ಎನ್‌ಟಿಆರ್ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟಿಸಿರುವ ಆರ್ ಆರ್ ಆರ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸುತ್ತಿದೆ.

ಮಾರ್ಚ್ 25 ರಂದು ಬಿಡುಗಡೆಯಾದ ಈ ಚಿತ್ರ ಮೊದಲ ದಿನದಿಂದಲೇ ಪಾಸಿಟಿವ್ ಟಾಕ್‌ನೊಂದಿಗೆ ಕಲೆಕ್ಷನ್‌ಗಳ ಸುನಾಮಿ ಸೃಷ್ಟಿಸುತ್ತಿದೆ.

ಮೂರೇ ದಿನಗಳಲ್ಲಿ 500 ಕೋಟಿ ಗಳಿಕೆ ಮಾಡಿ ಬಾಹುಬಲಿ ದಾಖಲೆ ಮುರಿದಿದೆ. ಚರಣ್ ಮತ್ತು ತಾರಕ್ ಅಭಿನಯವನ್ನು ವಿಮರ್ಶಕರು ಕೂಡ ಹೊಗಳಿದ್ದಾರೆ.  

ಅಭಿಮಾನಿಗಳ ಜೊತೆಗೆ .. ಸಿನಿಮಾ ಹಾಗೂ ರಾಜಕೀಯ ಗಣ್ಯರು ‘RRR’ ತಂಡಕ್ಕೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ.

rrr-movie-jr-ntr-thanks-rajamouli-ram-charan saaksha tv

ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ‘RRR’ ಯಶಸ್ಸಿನ ಬಗ್ಗೆ ಎನ್‌ಟಿಆರ್‌ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಪತ್ರವೊಂದನ್ನು ಬಿಡುಗಡೆ ಮಾಡಿದ ಅವರು.. ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಮುಖ್ಯವಾಗಿ ತಾರಕ್,  ರಾಮ್ ಚರಣ್ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ.

ಅಲ್ಲೂರಿ ಸೀತಾರಾಮರಾಜು  ಪಾತ್ರವನ್ನು ಚರಣ್‌ಗಿಂತ ಯಾರೂ ಚೆನ್ನಾಗಿ ಮಾಡಲು ಸಾಧ್ಯವಿಲ್ಲ.

ಚೆರ್ರಿ ಇಲ್ಲದೆ ಆರ್‌ಆರ್‌ಆರ್ ಅನ್ನು ಕಲ್ಪಿಸಿಕೊಳ್ಳುವುದು ಕಷ್ಟ ಎಂದು ತಾರಕ್ ಹೇಳಿದ್ದಾರೆ.

ಅಲ್ಲೂರಿನ ಪಾತ್ರದೊಂದಿಗೆ ಭೀಮನ ಪಾತ್ರವೂ ಪರಿಪೂರ್ಣವಾಗಿದೆ ಎಂದಿದ್ದಾರೆ ಎನ್ ಟಿಆರ್.

ಜಕ್ಕಣ್ಣ ತಮ್ಮ ಕೆರಿಯರ್ ನ ಬೆಸ್ಟ್ ಸಿನಿಮಾ ಕೊಟ್ಟಿದ್ದಾರೆ. ತನ್ನಲ್ಲಿರುವ ಶ್ರೇಷ್ಠ ನಟನನ್ನು ಕಂಡುಹಿಡಿದ ರಾಜಮೌಕಿಗೆ ಧನ್ಯವಾದ  ಹೇಳಿದ್ದಾರೆ. rrr-movie-jr-ntr-thanks-rajamouli-ram-charan

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd