ಏನ್ ಮಾತನಾಡ ಬೇಕು ತಿಳಿಯುತ್ತಿಲ್ಲ, ಈ ಆಘಾತ ನಮ್ಮೆಲ್ಲರನ್ನು ಕಾಡುತ್ತಿದೆ : ಅಪ್ಪು ನೆನೆದು ಮಾತನಾಡಿದ ರಾಜಮೌಳಿ
ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ರಾಜಮೌಳಿ ನಿರ್ದೇಶನದ RRR ಒಂದು.. ಜ್ಯೂನಿಯರ್ NTR , ರಾಮಚರಣ್ ನಟನೆಯ ಈ ಸಿನಿಮಾದ ಟೀಸರ್ ಹಾಡುಗಳು ಈಗಾಗಲೇ ಸಾಕಷ್ಟು ಸೌಂಡ್ ಮಾಡ್ತಿವೆ.. ಈ ನಡುವೆ ಸಿನಿಮಾತಂಡ ಪ್ರಚಾರ ಕಾರ್ಯ ಕೈಗೊಂಡಿದ್ದು, ಅದಕ್ಕಾಗಿಯೇ ಬೆಂಗಳೂರಿಗೂ ಬಂದಿದೆ..
ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿರೋ ರಾಜಮೌಳಿ ಪುನೀತ್ ರನ್ನ ನೆನೆದು ಬೇಸರ ಹೊರಹಾಕಿದ್ದಾರೆ.. ನನ್ಗೆ ಏನ್ ಮಾತನಾಡ ಬೇಕು ತಿಳಿಯುತ್ತಿಲ್ಲ. ಈ ಆಘಾತ ನಮ್ಮೆಲ್ಲರನ್ನು ಕಾಡುತ್ತಿದೆ. ಸ್ವಲ್ಪ ದಿನಗಳಿಂದ ನಾನು ಅವರಿಂದಿಗೆ ಮಾತನಾಡಿದ್ದಾಗ ಇದೇ ಜಾಗದಲ್ಲಿ ಅವರು ನನನ್ನು ಕುಟುಂಬದವರಂತೆ ಟ್ರೀಟ್ ಮಾಡಿದ್ರು. ಯಾವುದೇ ಸ್ಟಾರ್ ಜೊತೆ ಮಾತನಾಡುತ್ತಿದ್ದೇನೆ ಅನಿಸಲಿಲ್ಲ ನಮ್ಮ ಕುಟುಂಬದವರ ಹತ್ರ ಮಾತನಾಡುತ್ತಿದ್ದೇನೆ ಅನ್ನುವ ಭಾವನೆ ಬರುವಂತೆ ನಡೆದುಕೊಂಡಿದ್ರು. ಯಾರೋ ಪಕ್ಕದ ಮನೆಯವರ ಹತ್ರ ಮಾತನಾಡುತ್ತಿದ್ದೇನೆ ಅನಿಸ್ತು. ಇದು ಬಹಳ ನೋವಿನ ವಿಚಾರ ಅವರನ್ನು ಕಳೆದುಕೊಂಡಿರೋದು.
ಬಹಳಷ್ಟು ಕಲಿಯುವುದಿದೆ ಪುನೀತ್ ಅವರಿಂದ. ಅವರು ಎಷ್ಟೋ ಜನರಿಗೆ ಸಹಾಯ ಮಾಡಿದ್ರು. ಒಬ್ಬರಿಗೆ ಹೆಲ್ಪ್ ಮಾಡಿದ್ರೆ ಊರಿಗೆಲ್ಲ ತಿಳಿಯುವಂತೆ ಮಾಡುವ ಜನರಿದ್ದಾರೆ . ಆದರೆ ಯಾರಿಗೂ ತಿಳಿಯದಂತೆ ಇಷ್ಟೆಲ್ಲ ಜನರಿಗೆ ಸಹಾಯ ಮಾಡಿದ್ದ ಅವರ ವ್ಯಕ್ತಿತ್ವ ದೊಡ್ಡದ್ದು. ಅವರ ಸಾಮಾಜಿಕ ಕಳಕಳಿ, ಯಾರಿಗೂ ತಿಳಿಯದಂತೆ ಅವರು ಮಾಡುತ್ತಿದ್ದ ಸೇವೆ ನಿಜಕ್ಕು ಶ್ಲಾಘನೀಯ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ , ಪುನೀತ್ ಅವರ ಸಾಮಾಜಸೇವೆಯನ್ನು ಕುಟುಂಬ ಮುಂದುವರಿಸಿಕೊಂಡು ಹೋಗುತ್ತೆ ಅನ್ನುವ ಭರವಸೆ ಇದೆ ಎಂದಿದ್ದಾರೆ..
ಪತಿಯ ಹೆಸರು ಕೈ ಬಿಟ್ಟಿದ್ದು ಬರೀ ಡ್ರಾಮಾನಾ…? ಜನರನ್ನ ಫೂಲ್ ಮಾಡಿದ್ರಾ..?








