ಆರ್ ಆರ್ ಆರ್ : ರಾಮರಾಜು ಫಾರ್ ಭೀಮ್ ಟೀಸರ್ ರಿವ್ಯೂವ್…!
ಆಕಾಶವೇ ಮಿತಿಯಾಗಿ ಎಕ್ಸ್ ಪೆಕ್ಟೇಷನ್ ವಿಪರೀತಯಾಗಿ ಬೆಳೆಯುತ್ತಿರುವ ತ್ರಿಪಲ್ ಆರ್ ಸಿನಿಮಾದಲ್ಲಿ,ಗೋಂಡು ವೀರ ಕೊಮರಂ ಭೀಮ್ ಪಾತ್ರವನ್ನು ಪೋಷಣೆ ಮಾಡ್ತಿರೋ ಜ್ಯೂನಿಯರ್ ಎನ್ ಟಿಆರ್ ಕ್ಯಾರೆಕ್ಟರ್ ಟೀಸರ್,ರಾಮ ರಾಜು ಫಾರ್ ಭೀಮ್ ಹೆಸರಲ್ಲಿ ಇಂದು ರಿಲೀಸ್ ಮಾಡಲಾಗಿದೆ.
ಈ ಟೀಸರ್ ಗಾಗಿ ತಾರಕ್ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದರು. ಅವರ ಇಷ್ಟುದಿನಗಳ ಕಾಯುವಿಕೆಗೆ ಪೂರ್ತಿ ಪ್ರಮಾಣದ ನ್ಯಾಯ ಒದಗಿಸಿಕೊಡುವ ರೀತಿಯಲ್ಲಿ ಇಂದು ಟೀಸರ್ ಬಿಡುಗಡೆಯಾಗಿದೆ.
ದಟ್ಟ ಅರಣ್ಯದತ್ತ ಫೋಕಸ್ ಮಾಡುತ್ತ ಟೀಸರ್ ಶುರುವಾಗಿದೆ. ನೀರಿನಲ್ಲಿ ಹೆಜ್ಜೆಗಳು ಕದಲುತ್ತವೆ. ಮೊದಲು ಕಾಲುಗಳು ಕಾಣಿಸುತ್ತವೆ..
ಅವನು ಎದುರು ನಿಂತ್ರೆ ಸಮುದ್ರಗಳೇ ಹೆದರಿಕೊಳ್ತವೆ”
ಅವನು ಎದುರು ನಿಂತ್ರೆ ಸಮುದ್ರಗಳೇ ಹೆದರಿಕೊಳ್ತವೆ..
ಎದ್ದು ನಿಂತ್ರೆ ಸಾಮಾಜ್ಯಗಳೇ ತಲೆ ಬಾಗುತ್ತವೆ
ಅವನ ಆರ್ಭಟ ಹಾರೋ ಬಾವುಟ
ಅವನ ಪ್ರತಾಪ ಕಗ್ಗತ್ತಳ ಸೀಳಿ ಬರೋ ಸೂರ್ಯ ತಾಪ
ಅವನು ಭೂ ತಾಯಿ ಎದೆ ಹಾಲು ಕುಡಿದ ಹೆಮ್ಮೆಯ ಕಂದ
ನನ್ನ ತಮ್ಮ…. ಕೊಂಡು ಹೆಬ್ಬುಲಿ…..ಕೊಮರಂ ಭೀಮ್ ಎಂದು ಭೀಮ್ ಕ್ಯಾರಕ್ಟರ್ ಅನ್ನು ರಾಮರಾಜು ಪಾತ್ರಧಾರಿ ಚರಣ್ ಗಂಭೀರ ಧ್ವನಿಯಲ್ಲಿ ಪರಿಚಯ ಮಾಡಿಕೊಡ್ತಾನೆ..
ಈ ಪರಿಚಯ ಕ್ರಮದಲ್ಲಿ ಭೀಮ್ ಪಾತ್ರದಲ್ಲಿ ತಾರಕ್ ಕಾಣಿಸಿಕೊಂಡ ಧಾಟಿ ಯಾರನ್ನಾದರೂ ಸಂಭ್ರಮಾಚ್ಚರ್ಯಕ್ಕೆ ಗುರಿ ಮಾಡದೇ ಇರದು. ನಿಲುವೆಲ್ಲಾ ಕಟ್ಟುಮಸ್ತಿನ ದೇಹಧಾರಿಯಾಗಿ ಇದುವರೆಗೂ ಎಂದೂ ಕಾಣಿಸಿದ ರೂಪದಲ್ಲಿ, ಪೂರ್ತಿ ಸ್ಥಾಯಿ ಬಾಡಿ ಟ್ರಾನ್ಸ್ ಫರ್ ಮೇಷನ್ ಆಗಿ ಕಾಣಿಸಿದ್ದಾರೆ ಯಂಗ್ ಟೈಗರ್.
ಭೀಮ್ ಬಂಡೆ ಮೇಲೆ ನಿಂತಿದ್ರೆ ಆತನ ಮುಂದೆ ಎತ್ತರವಾಗಿ ಎದ್ದ ಸಮುದ್ರದ ಅಲೆ, ಆತನ ಮೇಲೆ ಬೀಳದೇ ಸೀಳಿಕೊಂಡು ಎರಡು ಭಾಗಗಳಾಗುತ್ತೆ. ನೀರಿನಿಂದ ಈಟಿ ತೆಗೆದು ಎಸೆದರೇ ಗುರಿಯನ್ನು ಚೇಧಿಸುತ್ತೆ. ಹಾರೋ ಭಾವುಟದ ಆರ್ಭಟ ಆತನದ್ದು, ಕಗ್ಗತ್ತಳ ಸೀಳಿ ಬರೋ ಸೂರ್ಯ ತಾಪ ಆತನ ಪ್ರತಾಪ, ಎಂದು ಎರಡು ಕೈಗಳಿಂದ ಹಗ್ಗಗಳನ್ನು ಬಲವಾಗಿ ಎಳೆಯುತ್ತಿದ್ದಾಗ ಭೀಮ್ ರೂಪ ಭೀಕರವಾಗಿ ಕಾಣಿಸುತ್ತೆ. ಮುಖದ ಮೇಲೆ ನೆತ್ತರು ಸುರಿಯುತ್ತಿರೋ ವೇಳೆ ಹಾ.. ಎಂದು ಅದಕ್ಕಿಂತ ಭೀಕರವಾಗಿ ಘರ್ಜಿಸುತ್ತಾನೆ ಭೀಮ್.
ಕಾಡಿನಲ್ಲಿ ವೇಗವಾಗಿ ಓಡುತ್ತಿರುವ ಧಾಟಿ, ಆ ಅಡವಿ ಆತನಿಗೆ ಎಷ್ಟು ಪರಿಚಿತವೋ ಎಂಬುದನ್ನು ತಿಳಿಸುತ್ತಿದೆ. ಅಲ್ಲಿಯವರೆಗೆ ಅಷ್ಟು ಫೆರೋಷಿಯಸ್ ಆಗಿ ಕಾಣಿಸೋ ಭೀಮ್
ಟೀಸರ್ ನ ಕೊನೆಯಲ್ಲಿ ಪ್ರಶಾಂತವಾಗಿ ಮುಸ್ಲಿಂ ವೇಷದಲ್ಲಿ ಕಾಣಿಕೊಂಡು ಇನ್ನಷ್ಟು ಕುತೂಹಲಕ್ಕೆ ನಾಂದಿ ಹಾಡುತ್ತಾನೆ.
ಇನ್ನು ಮುಖ್ಯವಾಗಿ ರಾಮ ರಾಜು ಫಾರ್ ಭೀಮ್ ಟೀಸರ್ ನಲ್ಲಿ ಚರಣ್ ಧ್ವನಿ ಎಲ್ಲರ ಗಮನ ಸೆಳೆಯುತ್ತೆ. ವಿಎಫ್ ಎಕ್ಸ್..ಗ್ರಾಫಿಕ್ಸ್.. ಹಿನ್ನೆಲೆ ಸಂಗೀತ ಕಣ್ಣು ಮತ್ತು ಕವಿಗಳಿಗೆ ಇಂಪು ನೀಡುತ್ವೆ.