RRR ಸಿನಿಮಾ ತಡೆಯಾಜ್ಞೆಗೆ ಕೋರಿ ಮತ್ತೊಂದು ದೂರು
ಭಾರತದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿ ಕ್ರೇಜ್ ಹೆಚ್ಚಿಸಿರುವ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ RRR,.. ಎಲ್ಲಾ ಸರಿ ಇದ್ದಿದ್ರೆ , ಸಿನಿಮಾ ಇಷ್ಟೊತ್ತಿಗೆ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಬೇಕಾಗಿತ್ತು.. ಆದ್ರೆ ಇದೆಲ್ಲದ್ರ ನಡುವೆ ಸಿನಿಮಾ ಸಾಕಷ್ಟು ವಿವಾದಗಳನ್ನೂ ಸಹ ಎದುರಿಸುತ್ತಿದೆ.. ಜ್ಯೂನಿಯರ್ NTR , ರಾಮ್ ಚರಣ್ , ರಾಜಮೌಳಿ ಕಾಂಇನೇಷನ್ ಈ ಸಿನಿಮಾ ಮೇಲೆ ಇತಿಹಾಸ ತಿರುಚಿರುವ ಆರೋಪಗಳಿವೆ.. ಕೆಲವರು ಸಿನಿಮಾ ತಡೆಯಾಜ್ಞೆ ಕೋರಿ ಅರ್ಜಿಗಳನ್ನೂ ಸಲ್ಲಿಸಿದ್ದಾರೆ..
ಈಗಾಗಲೇ ಸಿನಿಮಾ ವಿರುದ್ಧ ಕೆಲವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಈ ಪಟ್ಟಿಗೆ ಇದೀಗ ಹೊಸ ಪ್ರಕರಣವೊಂದು ಸೇರಿಕೊಂಡಿದೆ. ಸಂಘವೊಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ. ಈ ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಕುರಿತ ಕತೆಯನ್ನು ಒಳಗೊಂಡಿದ್ದು, ಅಲ್ಲೂರಿ ಸೀತಾರಾಮ ರಾಜು ಆಗಿ ರಾಮ್ ಚರಣ್ ತೇಜ, ಕೋಮರಂ ಭೀಮ್ ಆಗಿ ಜೂ ಎನ್ಟಿಆರ್ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಅಲ್ಲೂರಿ ಸೀತಾರಾಮ ರಾಜು ಬ್ರಿಟೀಷರ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬಂತೆ ಚಿತ್ರಿಸಲಾಗಿದೆ ಎಂದು ಅಲ್ಲೂರಿ ಸೀತಾರಾಮ ರಾಜು ಯುವರಾಜ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ. ಈ ಸಿನಿಮಾದ ವಿರುದ್ಧ ತೆಲಂಗಾಣ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, ಸಿನಿಮಾ ಬಿಡುಗಡೆ ಆಗದಂತೆ ತಡೆ ನೀಡಬೇಕೆಂದು ಮನವಿ ಮಾಡಿದ್ದಾರೆ.