RRR ಟ್ರೈಲರ್ ರಿಲೀಸ್ ಗೆ ಮುಹೂರ್ತ ಫಿಕ್ಸ್..!
ಇಡೀ ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯ್ತಿರುವ ರಾಜಮೌಳಿ ಸಾರಥ್ಯ , ರಾಮಚರಣ್ – ಜ್ಯೂ. NTR ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ RRR ಜನವರಿ 7ಕ್ಕೆ ಬಿಡುಗಡೆಯಾಗ್ತಿದೆ..
ಈ ನಡುವೆ ಸಿನಿಮಾದ ಟ್ರೇಲರ್ ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.. ಈಗಾಗಲೇ ಟೀಸರ್ ರಿಲೀಸ್ ಆಗಿದೆ.. ಒಂದೊಂದೇ ಹಾಡುಗಳೂ ಕೂಡ ರಿಲೀಸ್ ಆಗ್ತಿದ್ದು, ಧೂಳೆಬ್ಬಿಸುತ್ತಿವೆ.. ಚಿತ್ರತಂಡವೂ ಸಹ ಪ್ರಚಾರ ಕಾರ್ಯದಲ್ಲಿ ತೊಡಗಿದೆ..
RRR ಟ್ರೈಲರ್ ಗಾಗಿ ಕಾದೂ ಕುಳಿತಿರುವ ಅಭಿಮಾನಿಗಳಿಗೆ ಕಡೆಗೂ ಗುಡ್ ನ್ಯೂಸ್ ಸಿಕ್ಕಿದೆ.. ಈ ಸಿನಿಮಾದ ಟ್ರೈಲರ್ ಇದೇ ಡಿಸೆಂಬರ್ 3 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಐದು ಭಾಷೆಯಲ್ಲಿ ನಿರ್ಮಾಣಗೊಂಡಿರುವ RRR ಸಿನಿಮಾದ ಟ್ರೈಲರ್ ನೋಡಲು ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿದೆ.
ಜೂ. ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಬಾಲಿವುಡ್ ನಟ ಅಜಯ್ ದೇವಗನ್, ನಟಿ ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಎಂ ಎಂ ಕೀರವಾಣಿ ಸಂಗೀತ , ಸೆಂಥಿಲ್ ಅಧ್ಬುತ ಕ್ಯಾಮೆರಾ ವರ್ಕ್ RRR ಸಿನಿಮಾದಲ್ಲಿ ಕಮಾಲ್ ಮಾಡಲಿದೆ..
RRR ಚಿತ್ರದ ಟ್ರೈಲರ್ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಾಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
RRR ಸಿನಿಮಾ ಕನ್ನಡದಲ್ಲಿಯೂ ರಿಲೀಸ್ ಆಗುತ್ತಿದ್ದು, ಸಿನಿಮಾದ ವಿತರಣೆ ಹಕ್ಕನ್ನು ಕೆವಿಎನ್ ಪ್ರೊಡಕ್ಷನ್ ಹೌಸ್ ಪಡೆದುಕೊಂಡಿದೆ. ರಾಜ್ಯಾದ್ಯಂತ RRR ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ರಿಲೀಸ್ ಮಾಡಲಿದೆ.








