ಬಳ್ಳಾರಿ: ನಕಲಿ ಇಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧ್ಯ ಪ್ರದೇಶದ (Madhya Pradesh) ಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಅಜಯ್ ಕುಮಾರ್ ಜೈಸ್ವಾಲ್ ಬಂಧಿತ ಆರೋಪಿ. ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಬದಲಾಗಿದೆ ಎಂದು ನಕಲಿ ಮೇಲ್ ಕಳುಹಿಸಿ, ಕಲ್ಲಿದ್ದಲು ಸಪ್ಲೆ ಮಾಡುವ ಕಂಪನಿಗೆ 2.11 ಕೋಟಿ ರೂ. ವಂಚಿಸಿದ್ದ ಎನ್ನಲಾಗಿದೆ.
ಹಿಂದುಸ್ತಾನ್ ಕ್ಯಾಲ್ಸೀನ್ಡ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿಯೂ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿಯಿಂದ ಕಲ್ಲಿದ್ದಲು ಖರೀದಿಸಿತ್ತು. ಈ ಹಿನ್ನೆಲೆಯಲ್ಲಿ ಹಿಂದುಸ್ತಾನ್ ಕಂಪನಿ ಅಗರ್ವಾಲ್ ಕಂಪನಿಗೆ 2.11 ಕೋಟಿ ಹಣ ಕೊಡಬೇಕಿತ್ತು. ಈ ಕುರಿತು ಮಾಹಿತಿ ಪಡೆದಿದ್ದ ಖದೀಮ ಅಜಯ್, ಅಗರ್ವಾಲ್ ಕಂಪನಿಯ ನಕಲಿ ಇಮೇಲ್ ತಯಾರಿಸಿ ಕಂಪನಿಯ ಬ್ಯಾಂಕ್ ಖಾತೆ ನಂಬರ್ ಬದಲಾಗಿದೆ ಎದು ಮೇಲ್ ಕಳುಹಿಸಿ ವಂಚಿಸಿದ್ದಾನೆ ಎನ್ನಲಾಗಿದೆ.
ಹಿಂದುಸ್ತಾನ್ ಕಂಪನಿಯವರು ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್ ಗೆ ಹಣ ಹಾಕಿದ್ದರು. ತನ್ನ ಖಾತೆಗೆ ಬಂದ ಹಣವನ್ನು ಇನ್ನಿತರ 18 ಖಾತೆಗಳಿಗೆ ಹಾಕಿ ಡ್ರಾ ಮಾಡಿಕೊಂಡಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಬಳ್ಳಾರಿ ಸೈಬರ್ ಠಾಣೆಗೆ ಹಿಂದುಸ್ತಾನ್ ಕಂಪನಿಯಿಂದ ದೂರು ದಾಖಲಾಗಿತ್ತು. ಸದ್ಯ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯ ಹಿಂದೆ ದೆಹಲಿ ಮೂಲಕ ವ್ಯಕ್ತಿಯ ಕೈವಾಡವಿರುವ ಶಂಕೆ ಇದೆ. ಸದ್ಯ ಆರೋಪಿಯಿಂದ 1.21 ಕೋಟಿ ರೂ. ನಗದು, ಅಲ್ಲದೇ ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ರೂ. ಹಣ ಫ್ರೀಜ್ ಮಾಡಲಾಗಿದೆ. ಇನ್ನುಳಿದ 62 ಲಕ್ಷ ರೂ. ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.