ಸೌತ್ ಆಫ್ರಿಕಾ ತಂಡದ ಅನುಭವಿ ಆಟಗಾರ ಡೇವಿಡ್ ಮಿಲ್ಲರ್(101) ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಜವಾಬ್ದಾರಿಯ ಆಟವಾಡಿದ ಡೇವಿಡ್ ಮಿಲ್ಲರ್(101 ರನ್, 116 ಬಾಲ್, 8 ಬೌಂಡರಿ, 5 ಸಿಕ್ಸ್) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಮಿಲ್ಲರ್ ಅವರ ಆಕರ್ಷಕ ಶತಕದ ನೆರವಿನಿಂದ ಸೌತ್ ಆಫ್ರಿಕಾ ತಂಡ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ 49.4 ಓವರ್‌ಗಳಲ್ಲಿ 212 ರನ್‌ಗಳಿಸುವಲ್ಲಿ ಯಶಸ್ವಿಯಾಯಿತು.
ಆಸೀಸ್ ವಿರುದ್ದ ಶತಕ ಸಿಡಿಸುವ ಮೂಲಕ ಡೇವಿಡ್ ಮಿಲ್ಲರ್, ಏಕದಿನ ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರವಾಗಿ ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಪಡೆದರು. ಈ ಹಿಂದೆ 2015ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಫಾಫ್ ಡುಪ್ಲೆಸ್ಸಿ ಬಾರಿಸಿದ್ದ 82 ರನ್‌ಗಳು ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರ ದಾಖಲಾಗಿದ್ದ ಗರಿಷ್ಠ ಸ್ಕೋರ್ ಆಗಿತ್ತು.
ಸೌತ್ ಆಫ್ರಿಕಾ ಪರ ಗರಿಷ್ಠ ಸ್ಕೋರ್-ಏಕದಿನ ವಿಶ್ವಕಪ್‌ನಲ್ಲಿ
ಡೇವಿಡ್ ಮಿಲ್ಲರ್ – 101 vs ಆಸ್ಟ್ರೇಲಿಯಾ, 2023ರ ಸೆಮೀಸ್‌ನಲ್ಲಿ
ಫಾಫ್ ಡುಪ್ಲೆಸ್ಸಿ – 82 vs ನ್ಯೂಜಿ಼ಲೆಂಡ್ 2015ರ ಸೆಮೀಸ್‌ನಲ್ಲಿ
ಕ್ವಿಂಟನ್ ಡಿಕಾಕ್ – 78 vs ಶ್ರೀಲಂಕಾ 2015ರ ಕ್ವಾರ್ಟರ್ ಫೈನಲ್‌ನಲ್ಲಿ
ಡೆರಿಲ್ ಕಲಿನನ್ – 69 vs ವೆಸ್ಟ್ ಇಂಡೀಸ್ 1996ರ ಕ್ವಾರ್ಟರ್ ಫೈನಲ್‌ನಲ್ಲಿ
ಎಬಿ ಡಿವಿಲಿಯರ್ಸ್- 65 vs ನ್ಯೂಜಿ಼ಲೆಂಡ್ 2015ರ ಸೆಮೀಸ್‌ನಲ್ಲಿ
RSA v AUS, Australia, South Africa, David Miller, World Cup