ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿಯಲ್ಲಿ ಭರ್ಜರಿ ಆರಂಭ ಕಂಡಿದ್ದ ನ್ಯೂಜಿ಼ಲೆಂಡ್, ಕಳೆದ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲಿನ ಆಘಾತ ಅನುಭವಿಸುವ ಮೂಲಕ ಗೆಲುವಿನ ಹಾದಿ ತಪ್ಪಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದ ಕಿವೀಸ್, ಟೂರ್ನಿಯಲ್ಲಿ ಆಡಿದ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೇರಿದಂತೆ ನೆದರ್ಲೆಂಡ್ಸ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳ ವಿರುದ್ಧ ಗೆದ್ದುಬೀಗಿತ್ತು. ಅಲ್ಲದೇ ನಾಲ್ಕು ಗೆಲುವುಗೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಕಿವೀಸ್, ಸುಲಭವಾಗಿ ಸೆಮಿಫೈನಲ್ ಪ್ರವೇಶಿಸುವ ನಿರೀಕ್ಷೆ ಮೂಡಿಸಿತ್ತು. ಆದರೆ ಕಳೆದ ಮೂರು ಪಂದ್ಯಗಳಲ್ಲಿ ಎದುರಾದ ಸೋಲು, ಇದೀಗ ಕಿವೀಸ್ ತಂಡದ ಸೆಮೀಸ್ ಹಾದಿಯನ್ನ ಕಠಿಣಗೊಳಿಸಿದೆ.
ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಗೆದ್ದು ಜಯದ ಅಲೆಯಲ್ಲಿ ತೇಲುತ್ತಿದ್ದ ನ್ಯೂಜಿ಼ಲೆಂಡ್, ಟೀಂ ಇಂಡಿಯಾ ವಿರುದ್ಧ ಮೊದಲ ಸೋಲಿನ ಆಘಾತ ಕಂಡಿತು. ಭಾರತದ ವಿರುದ್ಧ ಎದುರಾದ ಈ ಸೋಲು ಕಿವೀಸ್ ಪಡೆಯ ಜಯದ ಹಾದಿಯನ್ನೇ ಬದಲಿಸಿದೆ. ಪರಿಣಾಮ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳ ವಿರುದ್ಧ ಆಘಾತಕಾರಿ ಸೋಲು ಕಂಡಿದೆ. ಸತತ ಮೂರು ಪಂದ್ಯಗಳಲ್ಲಿ ಎದುರಾಗಿರುವ ಈ ಸೋಲಿನಿಂದಾಗಿ ಕಿವೀಸ್ ಪಡೆ, ಸಮಿಫೈನಲ್ ಪ್ರವೇಶಿಸಲು ಮುಂದಿನ ಎರಡು ಪಂದ್ಯಗಳಲ್ಲೂ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.
ಸೆಮೀಸ್ ಸ್ಥಾನಕ್ಕೆ ಪೈಪೋಟಿ:
ಸೌತ್ ಆಫ್ರಿಕಾ ವಿರುದ್ಧ ನ್ಯೂಜಿ಼ಲೆಂಡ್ ಸೋಲನುಭವಿಸಿದ ಬೆನ್ನಲ್ಲೇ ಸೆಮಿಫೈನಲ್ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ಶುರುವಾಗಿದೆ. ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನದಲ್ಲಿರುವ ನ್ಯೂಜಿ಼ಲೆಂಡ್ ಈ ರೇಸ್‌ನಲ್ಲಿ ಮಂಚೂಣಿಯಲ್ಲಿದ್ದರೆ. ನಂತರದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸಹ ತಮ್ಮ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸೆಮೀಸ್ ಪ್ರವೇಶಿಸುವ ನಿರೀಕ್ಷೆ ಹೊಂದಿವೆ.
RSA v NZ, South Africa, New Zealand, CWC 2023, World Cup